ಬೆಂಗಳೂರು: ಆರು ಐ-ಫೋನ್‌ಗಳು ಮತ್ತು ಆ್ಯಪಲ್ ಕಂಪನಿಯ ಸ್ಮಾರ್ಟ್ ವಾಚ್‌ಗಳನ್ನು ಡೇಂಝೋ ಕಂಪನಿಯ ಡೆಲಿವರಿ ಬಾಯ್‌ಗಳಿಬ್ಬರು ಕದ್ದು ಪರಾರಿಯಾಗಿದ್ದಾರೆ.
ಈ ಕುರಿತು ವಿಜಯನಗರ ನಿವಾಸಿ ತಸ್ಲೀಂ ಆರೀಫ್ ಎಂಬುವರು ದೂರು ನೀಡಿದ್ದು, ಅರುಣ್ ಪಾಟೀಲ್ ಮತ್ತು ನಯನ್ ವಿರುದ್ಧ ಸೆನ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಾ.5ರಂದು ಸುಣಕಲ್ ಪೇಟೆಗೆ ಮಾ.5ರಂದು ಹೋಗಿದ್ದ ದೂರುದಾರರು ಅಲ್ಲಿಯ ಅಂಗಡಿಯೊಂದರಲ್ಲಿ 6 ಐ-ಫೋನ್‌ಗಳು ಹಾಗೂ ಒಂದು ಆ್ಯಪಲ್ ಕಂಪನಿ ಸ್ಮಾರ್ಟ್ ವಾಚ್ ಖರೀದಿಸಿದ್ದರು. ತಾವು ಬೇರೆ ಕಡೆ ಹೋಗಬೇಕಿದ್ದರಿಂದ, ವಾಚ್ ಹಾಗೂ ಐ-ಫೋನ್‌ಗಳನ್ನು ವಿಜಯನಗರದ ತಮ್ಮ ಅಂಗಡಿಯ ವಿಳಾಸಕ್ಕೆ ಕಳುಹಿಸಲು ಡೋಂಜೋ ಆ್ಯಪ್ ಬಳಸಿದ್ದಾರೆ. ಸ್ಥಳಕ್ಕೆ ಬಂದಿದ್ದ ಅರುಣ್ ಪಾಟೀಲ್ ಐ-ಫೋನ್ ಹಾಗೂ ವಾಚ್ ಇದ್ದ ಪಾರ್ಸೆಲ್ ಪಡೆದುಕೊಂಡು ಹೊರಟಿದ್ದಾನೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಯನ್‌ಗೆ ಪಾರ್ಸೆಲ್ ಹಸ್ತಾಂತರಿಸಿ, ವಿಳಾಸಕ್ಕೆ ತಲುಪಿಸುವಂತೆ ಸೂಚಿಸಿದ್ದಾನೆ. ಅದರಂತೆ ನಯನ್ ಕೂಡ ಪಾರ್ಸೆಲ್ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಚ್ಡ್
ಆದರೆ, ಹಲವು ಗಂಟೆಯಾದರೂ ಮನೆ ಅಥವಾ ಅಂಗಡಿಯ ವಿಳಾಸಕ್ಕೆ ಪಾರ್ಸೆಲ್ ತಲುಪಿಲ್ಲ. ಕರೆ ಮಾಡಿದಾಗ ಇಬ್ಬರ ಮೊಬೈಲ್‌ಗಳು ಸ್ವಿಚ್ಡ್ ಆಫ್ ಆಗಿತ್ತು. ಕಂಪನಿಯ ಸಹಾಯವಾಣಿಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಹೀಗಾಗಿ ಠಾಣೆಗೆ ಬಂದು ಇಬ್ಬರ ವಿರುದ್ಧ ದೂರು ನೀಡಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.