Advertisement

ಬೆದರಿಕೆಗೆ ಹೆದರಲ್ಲ –ನಾನು ಇಂದಿರಾಗಾಂಧಿ ಮೊಮ್ಮಗಳು; ಯುಪಿ ಸರ್ಕಾರಕ್ಕೆ ಪ್ರಿಯಾಂಕಾ

04:56 PM Jun 26, 2020 | Nagendra Trasi |

ಲಕ್ನೋ:ಕಾನ್ಪುರದ ಮಕ್ಕಳ ನಿಲಯದಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭಿಣಿಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಉತ್ತರ ಪ್ರದೇಶ ಸರ್ಕಾರ ನೋಟಿಸ್ ಜಾರಿಗೊಳಿಸಿದ್ದಕ್ಕೆ ತೀವ್ರ ವಾಗ್ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.

Advertisement

“ನಿಮಗೆ ಹೇಗೆ ಬೇಕೋ ಆ ರೀತಿ ಕ್ರಮ ತೆಗೆದುಕೊಳ್ಳಬಹುದು. ಆದರೆ ನಾನು ಸತ್ಯವನ್ನು ಹೇಳಿಯೇ ಸಿದ್ಧ. ನಾನು ಇಂದಿರಾಗಾಂಧಿ ಮೊಮ್ಮಗಳು, ನಾನೇನು ಬಿಜೆಪಿಯ ಅಘೋಷಿತ ವಕ್ತಾರರಂತೆ ವರ್ತಿಸುತ್ತಿರುವ ಕೆಲವು ವಿರೋಧ ಪಕ್ಷದ ನಾಯಕರಂತಲ್ಲ” ಎಂದು ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಪ್ರಿಯಾಂಕಾ ಗಾಂಧಿ ಭಾನುವಾರ ತಮ್ಮ ಫೇಸ್ ಬುಕ್ ನಲ್ಲಿ, ಮಾಧ್ಯಮಗಳ ವರದಿ ಪ್ರಕಾರ ಕಾನ್ಪುರ್ ಸರ್ಕಾರಿ ಬಾಲಕಿಯರ ನಿಲಯದಲ್ಲಿನ ಇಬ್ಬರು ಹೆಣ್ಣು ಮಕ್ಕಳು ಗರ್ಭಿಣಿಯರು ಎಂಬುದು ಪತ್ತೆಯಾಗಿದೆ ಎಂದು ಪೋಸ್ಟ್ ಹಾಕಿದ್ದರು.

ನಾನು ಜನರ ಸೇವಕರಾದ ಮೇಲೆ, ಉತ್ತರ ಪ್ರದೇಶದ ಜನತೆ ಬಗ್ಗೆ ಕರ್ತವ್ಯ ನಿರ್ವಹಿಸುವುದು ನನ್ನ ಕಾಳಜಿಯಾಗಿದೆ. ಹೀಗಾಗಿ ನಾನು ಸತ್ಯವನ್ನು ಹೊರಗಿಡಲೇಬೇಕು. ಸರ್ಕಾರದ ಹೇಳಿಕೆ ನೀಡುವುದು ನನ್ನ ಕೆಲಸವಲ್ಲ. ಆದರೆ ಉತ್ತರಪ್ರದೇಶ ಸರ್ಕಾರ ವಿವಿಧ ಇಲಾಖೆಗಳ ಮೂಲಕ ನನ್ನನ್ನು ಬೆದರಿಸುವ ಮೂಲಕ ಸಮಯ ವ್ಯರ್ಥಮಾಡುತ್ತಿದೆ ಎಂದು ಪ್ರಿಯಾಂಕಾ ಶುಕ್ರವಾರ ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next