ಪಣಜಿ: “ನಾನೆಂದಿಗೂ ರಂಗಭೂಮಿಯ ವನೇ, ಸದ್ಯ ಸಿನೆಮಾ ದಲ್ಲಿದ್ದೇನೆ ಅಷ್ಟೇ’ ಎಂದು ತಮ್ಮ ರಂಗಭೂಮಿಯ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿ ಸಿ ದವರು ಭಾರತೀಯ ಚಿತ್ರರಂಗದ ಖ್ಯಾತ ನಟ ಮನೋಜ್ ಬಾಜಪೇಯಿ.
ಇಫಿ ಚಲನಚಿತ್ರೋತ್ಸವದಲ್ಲಿ ತಮ್ಮ ಚಲನಚಿತ್ರ “ಗುಲ್ ಮೊಹರ್’ ಕುರಿತ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, “ನಾನು ರಂಗಭೂಮಿ ಯಿಂದ ಬಂದವನು. ಅದು ನನ್ನ ತವರು. ಹಾಗಾಗಿ ನನ್ನನ್ನು ನಾನೆಂದಿಗೂ ರಂಗನಟನೆಂದೇ ಅಂದುಕೊಳ್ಳುವೆ’ ಎಂದರು.
ರಂಗಭೂಮಿ ಯಲ್ಲಿದ್ದ ನನ್ನನ್ನು ಸಿನೆಮಾದ ಹಾದಿಯಲ್ಲಿ ಸಾಗಲು ಪ್ರೋತ್ಸಾಹಿಸಿದವರು ಶೇಖರ್ ಕಪೂರ್ ಎಂದು ನೆನಪಿಸಿಕೊಂಡ ಅವರು, ಸಿನೆಮಾ ಗಳಿಗೆ ಹೋಲಿಸಿದರೆ ರಂಗ ಭೂಮಿ ನಟನ ಮಾಧ್ಯಮ. ಸಿನೆಮಾಗಳು ಯಾವಾಗಲೂ ನಿರ್ದೇಶಕನ ಮಾಧ್ಯಮ. ಅದೇ ಕಾರಣಕ್ಕೆ ಸಿನೆಮಾದಲ್ಲಿನ ನನ್ನ ನಟನೆಗೆ ಪ್ರಶಂಸೆಯನ್ನು ಪಡೆ ಯಲು ನನಗೆ ಕೊಂಚ ಅಜೀರ್ಣ ವೆನಿ ಸುತ್ತದೆ. ಯಾಕೆಂದರೆ ಆ ನಟ ನೆಯೂ ಸಹ ಒಬ್ಬ ನಿರ್ದೇಶಕನ ದೃಷ್ಟಿ, ಅಣತಿಯಂತೆ ನಡೆದಿರು ತ್ತದೆ ಎಂದು ರಂಗಭೂಮಿ ಹಾಗೂ ಸಿನೆಮಾದ ನಡುವಿನ ವ್ಯತ್ಯಾಸ ವನ್ನು ಪಟ್ಟಿ ಮಾಡಿದರು.
ಗುಲ್‌ಮೊಹರ್ ಚಿತ್ರದ ಕುರಿತೂ ಮಾತನಾಡುತ್ತಾ, ಇಡೀ ಸಿನೆಮಾದ ಚಿತ್ರೀಕರಣ ಕೌಟುಂಬಿಕ ವಾತಾವರಣ ದಲ್ಲಿ ನಡೆಯುತ್ತಿದೆ ಎಂಬ ಭಾವ ಬರುತ್ತಿತ್ತು. ನಾವೆಲ್ಲರೂ ತಂದೆ, ಮಗ, ಮಗಳು, ತಾಯಿ ಪಾತ್ರದಲ್ಲಿ ಕೆಮರಾದ ಮುಂದೆ ನಟಿಸು ತ್ತಿದ್ದರೂ ಇಡೀ ವಾತಾವರಣ ನೈಜವಾಗಿ ಕೌಟುಂಬಿಕವಾಗಿತ್ತು.
ಗುಲ್ ಮೊಹರ್ ಸಿನೆಮಾವು ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿತವಾಗುತ್ತಿದೆ. ಈ ಸಿನೆಮಾ ಕುಟುಂಬ ಹಾಗೂ ಆ ಕುಟುಂಬದ ಸದಸ್ಯರ ಅಂತರಿಕ ಸಂಬಂಧಗಳ ಕುರಿತು ಚರ್ಚಿಸುತ್ತದೆ. ಸಿನೆಮಾವನ್ನು ರಾಹುಲ್ ವಿ. ಚೆಟ್ಟಿಲ ನಿರ್ದೇಶಿಸಿ¨ªಾರೆ.