ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೆಸರನ್ನು ಉಲ್ಲೇಖಿಸದೇ ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರ ಮತ್ತು ವಂಶ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದರು. ಈ ರಾಜ್ಯಕ್ಕೆ ಅಗತ್ಯವಾಗಿರುವುದು ಜನರು ಮೊದಲು ವಿನಃ ಕುಟುಂಬವಲ್ಲ ಎಂದರು.
ಇದನ್ನೂ ಓದಿ:ದುಬಾರಿ ವಾಚ್ ಸಾಗಾಟ: ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ಗಂಟೆಗಳ ಕಾಲ ವಿಚಾರಣೆ
“ನೀವು ಪ್ರತಿದಿನ ದಣಿವರಿಯದೇ ಇಷ್ಟೊಂದು ಕಾರ್ಯ ಹೇಗೆ ನಿರ್ವಹಿಸುತ್ತೀರಿ ಎಂದು ಹಲವು ಜನರು ನನ್ನ ಬಳಿ ಕೇಳುತ್ತಿರುತ್ತಾರೆ. ನಾನು ಪ್ರತಿ ದಿನ 2-3 ಕೆಜಿ ಬೈಗುಳ ತಿನ್ನುತ್ತೇನೆ. ಹೀಗಾಗಿ ನನಗೆ ಆಯಾಸವಾಗುವುದಿಲ್ಲ. ಆದರೆ ನನಗೆ ದೇವರು ವಿಶೇಷ ಶಕ್ತಿ ನೀಡಿದ್ದಾನೆ. ಬೈಗುಳಗಳೇ ನನಗೆ ಪೌಷ್ಠಿಕಾಂಶವಾಗಿ ನನ್ನೊಳಗೆ ಬದಲಾಗುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ಮೋದಿ, ಬಿಜೆಪಿಯನ್ನು ಯಾರು ಬೇಕಾದರೂ ನಿಂದಿಸಲಿ. ಆದರೆ ಒಂದು ವೇಳೆ ನೀವು ತೆಲಂಗಾಣದ ಜನರನ್ನು ನಿಂದಿಸಿದರೆ ಆಗ ನೀವು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.
ನಾನು ತೆಲಂಗಾಣದ ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ಕೆಲವು ಜನರು ಹತಾಸೆ, ಭಯ ಮತ್ತು ಮೌಢ್ಯತೆಗಳಿಂದ ಮೋದಿಯನ್ನು ಟೀಕಿಸುತ್ತಾರೆ. ಆದರೆ ನೀವು ಬೈಗುಳಗಳ ತಂತ್ರಕ್ಕೆ ಬಲಿಯಾಗಬಾರದು ಎಂದು ಹೇಳಿದರು.