ಹೊಸದಿಲ್ಲಿ: ಕೇಂದ್ರ ಸರಕಾರ ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಲೇಬೆಧೀಕೆಂದು ಪ್ರತಿಪಾದಿಸುತ್ತಿದೆ. ಅದೇ ಸಂದರ್ಭದಲ್ಲಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಪುತ್ರ, ಸುಲ್ತಾನ್‌ಪುರ ಕ್ಷೇತ್ರದ ಬಿಜೆಪಿ ಸಂಸದ ವರುಣ್ ಗಾಂಧಿ, ಗಡೀಪಾರು ಮಾಡುವುದು ಬೇಡ ಎಂದಿದ್ದಾರೆ. ಅವರ ವಾದಕ್ಕೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಹಂಸರಾಜ್ ಅಹಿರ್ ಕಿಡಿ ಕಾರಿದ್ದು, “ವರುಣ್ ಪ್ರತಿಪಾದನೆ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ’ ಎಂದು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ವರುಣ್ ಗಾಂಧಿ ಹಿಂದಿ ಪತ್ರಿಕೆ ಯೊಂದಕ್ಕೆ ಬರೆದಿರುವ ಲೇಖನದಲ್ಲಿ ರೊಹಿಂಗ್ಯಾ ಗಳನ್ನು ಗಡೀಪಾರು ಮಾಡಬಾ ರದು ಎಂದು ಪ್ರತಿಪಾದಿಸಿದ್ದಾರೆ. ಅವರನ್ನು ಮಾನವೀಯ ತೆಯ ಆಧಾರದಿಂದ ನೋಡ ಬೇಕು. ಇಂಥ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಲಸಿಗರ ನೀತಿ ರೂಪಿಸಲು ಕ್ರಮ ಕೈಗೊಂಡು ಬಡತನದಿಂದ ಆಶ್ರಯ ಕೋರುವವರು ಮತ್ತು ಶಿಕ್ಷೆಯಿಂದ ತಪ್ಪಿಸಿಕೊಂಡು ಬರುವವರನ್ನು ವರ್ಗೀಕರಿ ಸಬೇಕು ಎಂದಿದ್ದಾರೆ.
ಕೇಂದ್ರಕ್ಕೆ ಕೋಪ: ಲೇಖನಕ್ಕೆ ಪ್ರತಿಕ್ರಿಯೆ ನೀಡಿ ರುವ ಸಚಿವ ಅಹಿರ್, “ರಾಷ್ಟ್ರೀಯ ಹಿತಾಸಕ್ತಿ ಯನ್ನು ಮನಸ್ಸಿನಲ್ಲಿಟ್ಟುಕೊಂಡವರು ಇಂಥ ಹೇಳಿಕೆಯನ್ನು ನೀಡಲಾರರು. ಅವರು ನಿರಾಶ್ರಿತರಲ್ಲ. ಅಕ್ರಮ ವಲಸಿಗರು’ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರೊಹಿಂಗ್ಯಾ ವಿಚಾರವನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ.
ಮೇನಕಾ ಗಾಂಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ