Advertisement

Pronunciation; ಮಂತ್ರಗಳ ಉಚ್ಛಾರಣೆ ಕುರಿತು ಟೀಕೆ: ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ

08:37 PM Oct 04, 2024 | Team Udayavani |

ಕೋಲ್ಕತಾ: ಮಂತ್ರಗಳ ಉಚ್ಛಾರಣೆಯಲ್ಲಿ ತಪ್ಪು ಕಂಡು ಟೀಕಿಸಿದವರ ಮೇಲೆ ವಾಗ್ದಾಳಿ ಮಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ”ಪ್ರಾಜ್ಞರು ಒಪ್ಪಿಕೊಂಡಿರುವ ತಮ್ಮದೇ ಆದ ಘರಾನಾವನ್ನು ನಾನು ಅನುಸರಿಸುತ್ತಿದ್ದೇನೆ” ಎಂದು ಶುಕ್ರವಾರ(ಅ4) ಪ್ರತಿಪಾದಿಸಿದ್ದಾರೆ.

Advertisement

ದಕ್ಷಿಣ ಕೋಲ್ಕತಾದಲ್ಲಿ ಎಕ್ದಾಲಿಯಾ ಎವರ್ಗ್ರೀನ್ ದುರ್ಗಾ ಪೂಜೆಯನ್ನು ಉದ್ಘಾಟಿಸಿ, ಸ್ತೋತ್ರವನ್ನು ಪಠಿಸುವ ಮೊದಲು ಬ್ಯಾನರ್ಜಿ “ನಾನು ಮಂತ್ರಗಳನ್ನು ಪಠಿಸುವಾಗ, ಕೆಲವರು ನನ್ನ ಉಚ್ಚಾರಣೆಯಲ್ಲಿ ದೋಷವನ್ನು ಕಂಡುಕೊಳ್ಳುತ್ತಾರೆ, ಅದು ಧರ್ಮಗ್ರಂಥಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳುತ್ತಾರೆ” ಎಂದರು.

“ಪ್ರತಿಯೊಂದು ಗ್ರಂಥದಲ್ಲಿಯೂ ಮಂತ್ರಗಳ ಉಚ್ಚಾರಣೆಯು ಒಂದೇ ರೀತಿ ಇರುವುದಿಲ್ಲ ಎಂಬುದು ವಿಮರ್ಶಕರಿಗೆ ತಿಳಿದಿಲ್ಲ. ಪ್ರತಿ ಪಂಚಾಂಗವು ಒಂದೇ ಆಗಿದೆಯೇ? ನಾನು ನನ್ನದೇ ಆದ ‘ಘರಾನಾ’ವನ್ನು ಅನುಸರಿಸುತ್ತೇನೆ ಅದನ್ನು ಪ್ರಾಜ್ಞರು ಕೂಡ ಒಪ್ಪಿಕೊಂಡಿದ್ದಾರೆ. ನನ್ನ ಅಭಿವ್ಯಕ್ತಿಯ ವಿಧಾನವು ಯಾರಿಗೋ ಇಷ್ಟವಾಗದಿದ್ದರೆ, ನಾನೇನು ಮಾಡಲು ಸಾಧ್ಯವಿಲ್ಲ ”ಎಂದರು.

ನನ್ನ ಸ್ತೋತ್ರಗಳ ಉಚ್ಚಾರಣೆ ಬೇಲೂರು ಮಠದ ರಾಮಕೃಷ್ಣ ಮಿಷನ್‌ನ ಹಿರಿಯ ಸನ್ಯಾಸಿ ಮತ್ತು ಅವರ ಧರ್ಮನಿಷ್ಠ ಬ್ರಾಹ್ಮಣ ತಂದೆ ಪ್ರಮಾಣೀಕರಿಸಿದ್ದಾರೆ ಎಂದು ಮಮತಾ ಹೇಳಿದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಕ ಕೆಲವು ವಿಡಿಯೋ ರೀಲ್ಸ್ ಗಳಲ್ಲಿ ನನ್ನ ಧ್ವನಿ ಮತ್ತು ಮಾತುಗಳನ್ನು ಕ್ಲೋನ್ ಮಾಡಲಾಗುತ್ತಿದೆ ಮತ್ತು ನಕಲಿ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next