Advertisement

ನನ್ನ ಬಳಿ ಯಾವುದೇ ಪೆನ್‌ಡ್ರೈವ್‌ ಇಲ್ಲ: ನಿರಾಣಿ

07:02 AM Jul 09, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ದಾಖಲೆಗಳಿಗೆ ಸಂಬಂಧಿಸಿದಂತೆ ತಮ್ಮ ಬಳಿ ಯಾವುದೇ ಪೆನ್‌ ಡ್ರೈವ್‌ ಇಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಮುರುಗೇಶ್‌ ನಿರಾಣಿ  ಸ್ಪಷ್ಟಪಡಿಸಿದ್ದಾರೆ.

Advertisement

ಕೋವಿಡ್‌ 19 ಸೋಂಕಿಗೆ ಚಿಕಿತ್ಸೆ ನೀಡಲು ಖರೀದಿ ಮಾಡಿರುವ ವೈದ್ಯಕೀಯ ಸಲಕರಣೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾದ ಹಾಗೂ ಅದಕ್ಕೆ ಸಂಬಂಧಿಸಿದ 125 ಪುಟಗಳ ದಾಖಲೆಗಳ ಪೆನ್‌ಡ್ರೈವ್‌ ನನ್ನ  ಬಳಿ ಇದೆ ಎಂದು ಕೆಲವು ಸಾಮಾಜಿಕ ಜಾಲತಾಣಗಳು, ವೆಬ್‌ ಪೋರ್ಟಲ್‌ಗ‌ಳು ಹಾಗೂ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು ನಿರಾಧಾರ ಎಂದು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜಾಪುರದಿಂದ ಬರುವಾಗ ನನ್ನೊಂದಿಗೆ ಒಬ್ಬರು ಅಧಿಕಾರಿ ಬಂದಿದ್ದರು. ಸುಮಾರು 125 ಪುಟಗಳ ದಾಖಲೆಗಳ ಪೆನ್‌ ಡ್ರೈವ್‌ ತಂದಿದ್ದು, ಅದನ್ನು ನನಗೆ ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದಾರೆ ಎಂದು  ವರದಿಯಾಗಿರುವುದು ಸತ್ಯಕ್ಕೆ  ದೂರವಾದ ಸಂಗತಿ.

ಕೋವಿಡ್‌ 19 ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಖರೀದಿಸಿರುವ ವೆಂಟಿಲೇಟರ್‌, ಪಿಪಿಇ ಕಿಟ್‌, ಮುಖಗವಸು, ಸರ್ಜಿಕಲ್‌ ಕೈಗವಸು, ಪರೀಕ್ಷೆ ಕೈಗವಸು, ಆಮ್ಲಜನಕ ಸಿಲೆಂಡರ್‌, ಕೋವಿಡ್‌ ಪರೀಕ್ಷೆ ,  ಸೋಂಕಿತರ ದಿನದ ಖರ್ಚು ಸೇರಿದಂತೆ ಇತರೆ ವೆಚ್ಚಳ ದಾಖಲೆ ಎಂದು ಹೇಳಲಾದ ಯಾವುದೇ ಪೆನ್‌ ಡ್ರೈವ್‌ ನನ್ನಬಳಿ ಇಲ್ಲ ಎಂದು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next