Advertisement

ಮರಳುನಾಡಲ್ಲೊಂದು ಮನೋರಂಜನಾ ಲೋಕ

09:40 AM Apr 30, 2018 | Team Udayavani |

ಹಲವು ‘ಪ್ರಥಮ’ಗಳ ಗರಿಮೆ ಹೊಂದಿರುವ ಸೌದಿ ಅರೇಬಿಯಾವು ಈಗ ಫ್ಲೋರಿಡಾದ ಡಿಸ್ನಿ ಲ್ಯಾಂಡ್‌ ಅನ್ನೇ ಮೀರಿಸುವಂಥ ಬೃಹತ್‌ ಮನೋರಂಜನ ರೆಸಾರ್ಟ್‌ವೊಂದನ್ನು ನಿರ್ಮಿಸಲು ಮುಂದಾಗಿದೆ. ಇದರ ಹೆಸರು ‘ಖೀದ್ದಿಯಾ’. ಸಾಮಾಜಿಕ ಕಟ್ಟಳೆಗಳನ್ನು ಸಡಿಲಿಸುತ್ತಾ, ಆರ್ಥಿಕತೆಯನ್ನು ಜಗತ್ತಿಗೆ ತೆರೆಯುವ ಉದ್ದೇಶದಿಂದ ಈ ಯೋಜನೆ ಹಾಕಿಕೊಳ್ಳಲಾ ಗಿದೆ. ಸೌದಿ ದೊರೆ ಸಲ್ಮಾನ್‌, ಭಾವೀ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಶನಿವಾರವೇ ಈ ಕೇಂದ್ರದ ಶಿಲಾನ್ಯಾಸ ನೆರವೇರಿಸಿದ್ದಾರೆ. ಖೀದ್ದಿಯಾ ಎಂಬ ಮನೋರಂಜನ ಲೋಕದ ಬಗ್ಗೆ ಮಾಹಿತಿ ಇಲ್ಲಿದೆ.

Advertisement

– ಇದರ ಮೂಲಸೌಕ ರ್ಯಕ್ಕೆ ತಗಲುವ ವೆಚ್ಚ.: 53,300 ಕೋಟಿ
– ಮೊದಲ ಹಂತ ಕಾರ್ಯಾರಂಭ : 2020ರಲ್ಲಿ 
– ಪ್ರದೇಶದಲ್ಲಿ ನಿರ್ಮಾಣ : 82,533 ಎಕರೆ
– ಪ್ರತಿ ವರ್ಷ ಭೇಟಿ ನೀಡುವ ಪ್ರವಾಸಿಗರ ಅಂದಾಜು ಸಂಖ್ಯೆ: 15 ಲಕ್ಷ
– ಡಿಸ್ನಿ ಲ್ಯಾಂಡ್‌ಗೆ ಹೋಲಿಸಿದರೆ ಇದರ ವ್ಯಾಪ್ತಿ: 2.5 ಪಟ್ಟು ಹೆಚ್ಚು 
– ಮನೋರಂಜನಾ ನಗರದಿಂದ ಸೃಷ್ಟಿಯಾಗುವ ಉದ್ಯೋಗ: 57,000

ಖೀದ್ದಿಯಾ ಎಲ್ಲಿದೆ?
ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಿಂದ 40 ಕಿ.ಮೀ. ದೂರದಲ್ಲಿದೆ. ಒಂದು ಗಂಟೆ ಪ್ರಯಾಣದ ಅವಧಿ.

ಉದ್ದೇಶ
– ಮುಕ್ತ ಆರ್ಥಿಕತೆಗೆ ಉತ್ತೇಜನ
– ಸಾಗರೋತ್ತರ ಪ್ರವಾಸೋದ್ಯಮಕ್ಕೆ ಒತ್ತು.
– ತನ್ನ ನಾಗರಿಕರಿಗೆ ಉದ್ಯೋಗಾವಕಾಶ ಸೃಷ್ಟಿ
– ಸಾಮಾಜಿಕ ನಿರ್ಬಂಧಗಳ ತೆರವಿಗೆ ಅವಕಾಶ

ಏನೇನಿರಲಿದೆ?
6 ಫ್ಲ್ಯಾಗ್ಸ್‌ ಥೀಮ್‌ ಪಾರ್ಕ್‌, ವಾಟರ್‌ ಪಾರ್ಕ್‌, ಮೋಟಾರ್‌ ನ್ಪೋರ್ಟ್ಸ್, ಸಾಂಸ್ಕೃತಿಕ ಕೇಂದ್ರಗಳು, ವೆಕೇಷನ್‌ ಹೋಂಗಳು, ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಬಹುದಾದ ಕ್ರೀಡಾ ಸೌಲಭ್ಯಗಳು ಇತ್ಯಾದಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next