Advertisement

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

06:56 PM Nov 26, 2024 | Team Udayavani |

ಹೊಸದಿಲ್ಲಿ: “ಈ ಅದ್ಭುತ ವಿಚಾರಗಳನ್ನು ನಿಮಗೆ ಹೇಗೆ ಹೊಳೆಯುತ್ತದೆ” ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ನ.26) ಅರ್ಜಿದಾರರೊಬ್ಬರನ್ನು ಪ್ರಶ್ನಿಸಿದ್ದು, ದೇಶದಲ್ಲಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಮತದಾನಕ್ಕೆ ಹಿಂತಿರುಗುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

Advertisement

ವಿಚಾರಣೆ ವೇಳೆ ಅರ್ಜಿದಾರರಾದ ಕೆಎ ಪೌಲ್ ಅವರು, ಚಂದ್ರಬಾಬು ನಾಯ್ಡು ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಅವರಂತಹ ನಾಯಕರು ಕೂಡ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (EVM) ಟ್ಯಾಂಪರಿಂಗ್ ಅನ್ನು ಪ್ರಶ್ನಿಸಿದ್ದಾರೆ ಎಂದು ಹೇಳಿದರು.

ಇದಕ್ಕೆ ಪೀಠವು” ಏನಾಗುತ್ತಿದೆ ಎಂದರೆ ನೀವು ಚುನಾವಣೆಯಲ್ಲಿ ಗೆದ್ದರೆ ಆಗ ಇವಿಎಂ ಅಥವಾ ಮತ ಯಂತ್ರಗಳನ್ನು ಟ್ಯಾಂಪರಿಂಗ್ ಆಗಿರುವುದಿಲ್ಲ, ಸೋತಾಗ ಮಾತ್ರ ಇವಿಎಂ ಟ್ಯಾಂಪರಿಂಗ್‌ ಎಂದು ದೂರುತ್ತೀರಿ” ಎಂದು ಟೀಕಿಸಿತು.

“ಚಂದ್ರಬಾಬು ನಾಯ್ಡು ಅಥವಾ ರೆಡ್ಡಿ ಸೋತಾಗ ಇವಿಎಂ ಟ್ಯಾಂಪರಿಂಗ್ ಆಗಿದೆ ಎಂದು ಹೇಳುತ್ತಾರೆ ಮತ್ತು ಅವರು ಗೆದ್ದಾಗ ಅವರು ಏನನ್ನೂ ಹೇಳುವುದಿಲ್ಲ, ನಾವು ಇದನ್ನು ಹೇಗೆ ನೋಡಬೇಕು? ನಾವು ಈ ಅರ್ಜಿಯನ್ನು ತಳ್ಳಿಹಾಕುತ್ತಿದ್ದೇವೆ. ನೀವು ಇದನ್ನೆಲ್ಲ ವಾದಿಸುವ ಸ್ಥಳ ಇದಲ್ಲ” ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿಬಿ ವರಾಳೆ ಅವರ ಪೀಠ ಅಭಿಪ್ರಾಯಪಟ್ಟಿದೆ.

ಮತದಾನದ ಸಮಯದಲ್ಲಿ ಮತದಾರರಿಗೆ ಹಣ, ಮದ್ಯ ಅಥವಾ ಇತರ ವಸ್ತು ಪ್ರಚೋದನೆಗಳನ್ನು ವಿತರಿಸಿದವರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕನಿಷ್ಠ ಐದು ವರ್ಷಗಳವರೆಗೆ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಪಾಲ್ ಕೋರಿದ್ದರು.

Advertisement

“ನೀವು ಆಸಕ್ತಿದಾಯಕ ಪಿಐಎಲ್ ಗಳನ್ನು ಹೊಂದಿದ್ದೀರಿ. ಈ ಅದ್ಭುತ ವಿಚಾರಗಳನ್ನು ನೀವು ಹೇಗೆ ಪಡೆಯುತ್ತೀರಿ?” ಮೂರು ಲಕ್ಷಕ್ಕೂ ಹೆಚ್ಚು ಅನಾಥರು ಮತ್ತು 40 ಲಕ್ಷ ವಿಧವೆಯರನ್ನು ರಕ್ಷಿಸಿದ ಸಂಸ್ಥೆಯ ಅಧ್ಯಕ್ಷರಾಗಿರುವ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಕೇಳಿದೆ.

”ನೀವು ಯಾಕೆ ಈ ರಾಜಕೀಯ ಕ್ಷೇತ್ರಕ್ಕೆ ಬರುತ್ತಿದ್ದೀರಿ? ನಿಮ್ಮ ಕೆಲಸದ ಕ್ಷೇತ್ರವು ತುಂಬಾ ವಿಭಿನ್ನವಾಗಿದೆ” ಎಂದು ಪೀಠ ಹೇಳಿದೆ.

ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಬಹುದು ಎಂದು ಪಾಲ್ ವಾದಿಸಿದ್ದರು ಮತ್ತು ಇವಿಎಂಗಳ ಬದಲಿಗೆ ಪೇಪರ್ ಬ್ಯಾಲೆಟ್‌ಗಳನ್ನು ಬಳಸುವ ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳನ್ನು ಭಾರತ ಅನುಸರಿಸಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next