ಕುಂದಗೋಳ: ನಾನು ಲಿಂಗಾಯತರ ಮನೆಮಗನಿದ್ದಂತೆ. ನಾನು ಹಿಂದುತ್ವವಾದಿ, ಜಾತಿವಾದಿಯಲ್ಲ. ಯಡಿಯೂರಪ್ಪ ನಮ್ಮ ನಾಯಕರು. ಲಿಂಗಾಯತರ ಬಗೆಗಿನ ನನ್ನ ಹೇಳಿಕೆ ಎಂಬುದು ಕಾಂಗ್ರೆಸ್ ಷಡ್ಯಂತ್ರವಾಗಿದೆ. ಫೇಕ್ ನ್ಯೂಸ್ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ, ಧರ್ಮ, ವೀರಶೈವ-ಲಿಂಗಾಯತ ಒಡಕು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ರಾಷ್ಟ್ರೀಯತೆ ತತ್ವಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ನಾವು ಸರ್ವರ ಏಳ್ಗೆಗೆ ಶ್ರಮಿಸಿದ್ದೇವೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಪರವಾಗಿ ಕಾರ್ಯ ಮಾಡುತ್ತಿದ್ದು, ಕಾಂಗ್ರೆಸ್‌ಗೆ ಬದ್ಧತೆಯಿಲ್ಲ ಎಂದರು.