Advertisement

Chikkamagaluru; ಮೂಡ ಅಕ್ರಮ ಹಗರಣ ವಿರುದ್ದ ಶುಕ್ರವಾರ ಮೂಡ ಕಚೇರಿ ಮುತ್ತಿಗೆ: ಸಿ.ಟಿ ರವಿ

12:59 PM Jul 11, 2024 | Team Udayavani |

ಚಿಕ್ಕಮಗಳೂರು: ಮೂಡ ಅಕ್ರಮ ಹಗರಣ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನಿಯಮಬಾಹಿರ ಕೊಟ್ಟಿರುವ ನಿವೇಶನಗಳ ಹಕ್ಕುಪತ್ರ ರದ್ದು ಪಡಿಸಬೇಕು. ಫಲಾನುಭವಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡುವಂತೆ ಆಗ್ರಹಿಸಿ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ರಾದ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಮೂಡ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

Advertisement

ಗುರುವಾರ ನಗರದಲ್ಲಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿ, ಪ್ರಕರಣದ ಸಾಕ್ಷ್ಯಾಧಾರಗಳನ್ನು ಗಮನಿಸಿದಾಗ ಸೃಜನಪಕ್ಷಪಾತ, ಸರ್ಕಾರಿ ಆಸ್ತಿ ಲೂಟಿ ಸ್ಪಷ್ಟವಾಗುತ್ತದೆ. ಈ ಹಿನ್ನಲೆಯಲ್ಲಿ ಸಿ.ಎಂ ರಾಜೀನಾಮೆ ನೀಡಬೇಕು ಮತ್ತು ಎಲ್ಲಾ ನಿವೇಶನ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರು ಸಿ.ಎಂ. ಆಗಿ 13 ತಿಂಗಳ ಆಡಳಿತ ಅವಲೋಕಿಸಿದಾಗ ಬೆಲೆ ಏರಿಕೆ, ಭ್ರಷ್ಟಾಚಾರ ಹೊರತುಪಡಿಸಿ ಯಾವುದರ ಕಡೆಗೂ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ ಎಂದರು

Advertisement

Udayavani is now on Telegram. Click here to join our channel and stay updated with the latest news.

Next