Advertisement

Scams; ಹೆಗ್ಗಣಗಳನ್ನು ನಿಯಂತ್ರಿಸದಿದ್ದರೆ ರಾಜ್ಯದ ಖಜಾನೆಯೇ ಇರುವುದಿಲ್ಲ: ಸಿ.ಟಿ .ರವಿ ಕಿಡಿ

05:44 PM Jul 13, 2024 | |

ದಾವಣಗೆರೆ :ಸಿದ್ದರಾಮಯ್ಯ ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಟಿ .ರವಿ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ‘ವಾಲ್ಮೀಕಿ ನಿಗಮನ ಹಗರಣದ ಬಗ್ಗೆ ಐಡಿ, ಇಡಿ ಎಸ್ ಐ ಟಿ ತನಿಖೆ ನಡೆಸುತ್ತಿದೆ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂದು ಸಿಎಂ ಹೇಳುತ್ತಾರೆ. ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಯಾರು ಭಾಗಿಯಾಗಿದ್ದಾರೋ ಅವರು ಹಣ ವಾಪಸ್ಸು ಕೊಡಬೇಕು ಹಾಗೂ ಶಿಕ್ಷೆ ಕೂಡ ಅನುಭವಿಸಬೇಕು’ ಎಂದರು.

‘ಯಾವ ಯಾವ ಇಲಾಖೆ ಹಗರಣ ಆಗಿದೆ ಎನ್ನುವುದು ಗೊತ್ತಿಲ್ಲ. ರಾಜ್ಯದ ಖಜಾನೆಗೆ ಕನ್ನ ಹಾಕುವ ಹೆಗ್ಗಣಗಳೇ ಹೆಚ್ಚು ಇರುವಾಗ ಇನ್ನೇಲ್ಲಿ ಖಜಾನೆ ಉಳಿಯುತ್ತೆ. ತೆರಿಗೆ ಏರಿಸಿದರೂ ಖಜಾನೆ ಖಾಲಿ ಎಂದರೆ ಹೆಗ್ಗಣಗಳು ಖಾಲಿ ಮಾಡಿವೆ ಎಂದರ್ಥ. ಜನಸಾಮಾನ್ಯರ ತೆರಿಗೆ ಭಾರ ಹೆಚ್ಚಿಸಿ ಖಜಾನೆ ತುಂಬಿಸಲು ಆಗುತ್ತಾ. ಮೊದಲು ಹೆಗ್ಗಣಗಳನ್ನು ನಿಯಂತ್ರಣ ಮಾಡಬೇಕು. ನಿಯಂತ್ರಣ ಮಾಡದೇ ಇದ್ದರೆ ರಾಜ್ಯದ ಖಜಾನೆ ಇರುವುದಿಲ್ಲ’ ಎಂದು ಕಿಡಿ ಕಾರಿದರು.

‘ ಮುಡಾ ಪ್ರಕರಣದಂತಹ ಹಗರಣವನ್ನು ಬೇರೆಯವರು ಮಾಡಿದರೆ ಸಿಎಂ ಸಮರ್ಥನೆ ಮಾಡಿಕೊಳ್ಳುತ್ತಿದ್ದರೆ ? ಒಂದು ಕ್ಷಣ ಕೂಡ ಕುರ್ಚಿ ಮೇಲೆ ಕೂರುವಂತಿಗಿಲ್ಲ. ರಾಜೀನಾಮೆ ನೀಡಬೇಕು. ಅವರೀಗ ಆಪಾದಿತರು ಆಗಿರುವ ಕಾರಣಕ್ಕೆ ಸಮರ್ಥನೆ ಮಾಡಿಕೊಳ್ಳಲು ಆಗುತ್ತದೆಯೇ? ಸಮರ್ಥನೆ ಮಾಡಿಕೊಳ್ಳುವುದರಿಂದ ಅವರ ಸಾರ್ವಜನಿಕ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತೆ ವಿನಃ ಅವರ ಅಂತರಾತ್ಮವೂ ಸಹ ಒಪುವುದಿಲ್ಲ. ಈ ಹಗರಣ ಅಂಗೈಯಲ್ಲಿನ ಹುಣ್ಣಿನ ರೀತಿ ಸ್ಪಷ್ಟವಾಗಿದೆ. ಸದನದಲ್ಲಿ ದಾಖಲೆ ಸಮೇತ ಸಾಕ್ಷಿ ಕೊಡುತ್ತೇವೆ. ಆಗಲೂ ಸಿಎಂ ರಾಜೀನಾಮೆ ನೀಡದೇ ಇದ್ದರೆ, ನಿಮ್ಮನ್ನು ಆರಿಸಿದ ಕುರ್ಚಿ ಮೇಲೆ ಕೂರಿಸಿರುವ ಜನರ ಮುಂದೆ ಇಡುತ್ತೇವೆ’ ಎಂದು ಕಿಡಿ ಕಾರಿದರು.

‘ವಾಲ್ಮೀಕಿ ನಿಗಮದಲ್ಲಿ ಸಮಾಜದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕಾದ ಹಣ ದುರ್ಬಳಕೆ ಮಾಡಿಕೊಂಡಿದ್ದೀರಿ. ಗಂಗಾ ಕಲ್ಯಾಣಕ್ಮೆ ಬೇಕಾದ ಹಣ ಕೂಡ ದುರ್ಬಳಕೆ ಮಾಡಿಕೊಂಡಿದ್ದೀರಿ. ಜಿಲ್ಲಾಧಿಕಾರಿಗಳನ್ನು ಕೇಳಿ ವಾಲ್ಮೀಕಿ ನಿಗಮದ ಟಾರ್ಗೇಟ್ ಜೀರೋ ಇದೆ. ಇದೆಲ್ಲ ಸಿದ್ದರಾಮಯ್ಯ ನವರ ಆಪ್ತರ ನಕಲಿ ಖಾತೆಗೆ ಜಮಾವಾಗಿದೆ’ ಎಂದರು.

Advertisement

‘ಮುಡಾದಲ್ಲಿ ಪಿಂಚಣಿ ಹಣ, ಕೂಡಿಟ್ಟ ಹಣ ಸೇರಿಸಿ ಸೈಟ್ ಗೆ ಅರ್ಜಿ ಹಾಕಿದವರಿಗೆ ಸೈಟ್ ಇಲ್ಲ. ಆದರೆ ಸಿದ್ದರಾಮಯ್ಯ ನವರ ಮನೆಯವರ ಹೆಸರಿಗೆ 16 ಸೈಟ್ ಗಳು ಇವೆ. ಮಹಾನಗರ ಪಾಲಿಕೆಯಲ್ಲಿ ಕೂಡ ಸಮಗ್ರ ತನಿಖೆಯಾಗಲಿ’ ಎಂದು ಒತ್ತಾಯಿಸಿದರು.

‘ಸಿಎಂ ಆರ್ಥಿಕ ಸಲಹೆಗಾರರೇ ಅಭಿವೃದ್ಧಿ ಗೆ ಹಣ ಇಲ್ಲ. ಎಲ್ಲವನ್ನು ಗ್ಯಾರೆಂಟಿಗೆ ಹಾಕಲಾಗಿದೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರೆಂಟಿಗಳನ್ನು ನಿಲ್ಲಿಸಬಾರದು. ತೆರಿಗೆಯೂ ಹೆಚ್ಚಿಸಬಾರದು. ಅಭಿವೃದ್ಧಿ ಕೆಲಸ ಮಾಡಬೇಕು.ನಿಮ್ಮನ್ನು ಜನ ಅಭಿವೃದ್ಧಿ ಮಾಡುವ ಸ್ಥಾನದಲ್ಲಿ ಕೂರಿಸಿದ್ದಾರೆ, ನಮ್ಮನ್ನು ಪ್ರಶ್ನೆ ಕೇಳುವ ಸ್ಥಾನದಲ್ಲಿ ಕೂರಿಸಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next