Advertisement

Donald Trump: ಹತ್ಯೆಗೆ ಯತ್ನ ಹಿನ್ನೆಲೆ: ಇನ್ನು ಟ್ರಂಪ್‌ ಬಹಿರಂಗ ಚುನಾವಣಾ ಪ್ರಚಾರ ಇಲ್ಲ?

09:37 PM Jul 24, 2024 | Team Udayavani |

ವಾಷಿಂಗ್ಟನ್‌: ತಮ್ಮ ಹತ್ಯೆಗೆ ಜು.13ರಂದು ಯತ್ನ ನಡೆದ ಹಿನ್ನೆಲೆಯಲ್ಲಿ ಇನ್ನು ಮುಂದೆ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಭಾಗಹಿಸದೇ ಇರಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Advertisement

ಈ ಬಗ್ಗೆ ಅವರ ಪ್ರಚಾರ ನೇತೃತ್ವ ವಹಿಸಿರುವ ತಂಡ ತೀರ್ಮಾನಿಸಿದೆ ಎನ್ನಲಾಗಿದೆ. ಸದ್ಯಕ್ಕೆ ಒಳಾಂಗಣದಲ್ಲಿ ಮಾತ್ರ ಪ್ರಚಾರ ನಡೆಸುವ ಯೋಜನೆಯಿದೆ.

ಜತೆಗೆ ಸಣ್ಣ ಮಟ್ಟದ ಗುಂಪಿನ ನಡುವೆ ಪ್ರಚಾರ ಕೈಗೊಳ್ಳುವ ಹಾಗೂ ದೊಡ್ಡ ಮೈದಾನದಂತಹ ಸುರಕ್ಷಿತವಲ್ಲದ ಸ್ಥಳಗಳಲ್ಲಿ ಪ್ರಚಾರ ನಡೆಸದಿರುವಂತೆ ಟ್ರಂಪ್‌ಗೆ ತಂಡ ಸಲಹೆ ಮಾಡಿದೆ.

ಪ್ರವೇಶ ದ್ವಾರಗಳಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ವಹಿಸಿಕೊಂಡಿರುವಂತಹ ಸ್ಥಳಗಳಲ್ಲಿ ಮಾತ್ರ ಪ್ರಚಾರ ಕೈಗೊಳ್ಳುವ ಬಗ್ಗೆಯೂ ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Madikeri: ಕಾವೇರಿ ನದಿಗೆ ಹಾರಿ ಪ್ರಥಮ ದರ್ಜೆ ಸಹಾಯಕ ಆತ್ಮಹತ್ಯೆಗೆ ಶರಣು

Advertisement
Advertisement

Udayavani is now on Telegram. Click here to join our channel and stay updated with the latest news.

Next