Advertisement
ಒಂದು ದೊಡ್ಡ ಗ್ಯಾಪ್‌ನ ನಂತರ ಬರುತ್ತಿದ್ದೀರಿ. ಹೇಗನಿಸುತ್ತಿದೆ?
Related Articles
Advertisement
ಈ ಚಿತ್ರ ನಿಮಗೆಷ್ಟು ಸ್ಪೆಷಲ್?
ಈ ಸಿನಿಮಾನಾ ಯಾವುದೋ ಒಂದು ಕಾರಣಕ್ಕೆ ಸ್ಪೆಷಲ್ ಎಂದು ಹೇಳ್ಳೋಕೆ ಆಗಲ್ಲ. ಏಕೆಂದರೆ ಇದು ನಮ್ಮ ಕನಸು. ಆಗಲೇ ಹೇಳಿದಂತೆ ಮೊದಲ ಚಿತ್ರಕ್ಕಿಂತಲೂ ಹೆಚ್ಚು ನಿರೀಕ್ಷೆ ಇದೆ. ಅದಕ್ಕೆ ಕಾರಣ ಸಿನಿಮಾದ ಕಂಟೆಂಟ್. ತುಂಬಾ ಹೊಸದಾದ ಕಥಾಹಂದರವಿರುವ ಸಿನಿಮಾವಿದು. ಈ ಎಲ್ಲಾ ಕಾರಣಗಳಿಂದಾಗಿ ಚಿತ್ರ ನನಗೆ ತುಂಬಾ ಸ್ಪೆಷಲ್.
ನೀವು ಫ್ರೆಂಡ್ಸ್ ಒಟ್ಟಾಗಿ ಸೇರಿ ಮಾಡಿರುವ ಚಿತ್ರವಿದು?
ಹೌದು, ಹೀಗೊಂದು ಸಿನಿಮಾ ಮಾಡಬೇಕು, ಯಾವತ್ತಿಗೂ ನಾವು ಜೊತೆಗಿರಬೇಕು ಎಂಬ ಆಲೋಚನೆ ಹುಟ್ಟಿದ್ದು ಚಿರು ಅವರಿಂದ. ಈಗ ಅವರ ಕನಸಿನಂತೆ ಸಿನಿಮಾ ಮಾಡಿ ದ್ದೇವೆ. ಚಿರುಗೆ ನಮ್ಮ ಕಡೆಯಿಂದ ಕಿರು ಕಾಣಿಕೆ ಇದು
ಟ್ರೇಲರ್ ನೋಡಿದವರಿಂದ ಬಂದ ಪ್ರತಿಕ್ರಿಯೆ?
ಟ್ರೇಲರ್ ನೋಡಿದವರು ಇದೊಂದು ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಸಿನಿಮಾ ಎನ್ನುತ್ತಿದ್ದಾರೆ. ಸಿನಿಮಾದ ಕುತೂಹಲವನ್ನು ಹೆಚ್ಚಿಸುವಂತೆ ಟ್ರೇಲರ್ ಕಟ್ ಮಾಡಿದ್ದೀರಿ ಎಂಬ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಈ ವರ್ಷದ ಬೆಸ್ಟ್ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿ “ತತ್ಸಮ ತದ್ಭವ’ ಹೊರಹೊಮ್ಮಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಜ್ವಲ್ ಪಾತ್ರದ ಬಗ್ಗೆ ಹೇಳಿ?
ಪ್ರಜ್ವಲ್ ದೇವರಾಜ್ ಅವರು ಈ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರದ ತೂಕ ಹೆಚ್ಚಿಸಿದ್ದಾರೆ. ಅವರಿಲ್ಲಿ ಅರವಿಂದ್ ಅಶ್ವತ್ಥಾಮ ಎಂಬ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ಹಾಗಂತ ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಲ್ಲಿ ಇರುವಂತಹ ಪಾತ್ರವಲ್ಲ, ಬೇರೆ ರೀತಿಯ ಪಾತ್ರ. ಈ ಪಾತ್ರವನ್ನು ಪ್ರಜ್ವಲ್ ಮಾಡಿದರೆ ಚೆಂದ ಎಂದು ಪನ್ನಗ ಹಾಗೂ ವಿಶಾಲ್ ನಿರ್ಧರಿಸಿದರು. ಅದರಂತೆ ಪ್ರಜ್ವಲ್ ಕೂಡಾ ಒಪ್ಪಿ ಮಾಡಿದ್ದಾರೆ.
ಈ ಚಿತ್ರದ ಮೇಲೆ ನಿಮ್ಮ ನಿರೀಕ್ಷೆ ಎಷ್ಟು?
ತುಂಬಾ ನಿರೀಕ್ಷೆ ಇದೆ. ಜನ “ನೀವು ಯಾವಾಗ ಮತ್ತೆ ಸಿನಿಮಾ ಮಾಡ್ತೀರಿ’ ಎಂದು ಕೇಳುತ್ತಿದ್ದರು. ಅದರಂತೆ ಮಾಡಿದ್ದೇನೆ. ಈಗ ಬಂದು ಸಿನಿಮಾ ನೋಡುವ ಜವಾಬ್ದಾರಿ ಅವರದ್ದು.
ರವಿಪ್ರಕಾಶ್ ರೈ