Advertisement

ನಾನು ರಾಷ್ಟ್ರ ಭಕ್ತ, ಡಿಕೆಶಿ ರಾಜಿನಾಮೆ ಕೊಡಲಿ: ಸಚಿವ ಈಶ್ವರಪ್ಪ

10:42 AM Feb 17, 2022 | Team Udayavani |

ಬೆಂಗಳೂರು: ರಾಷ್ಟ್ರಧ್ವಜ ಇಲ್ಲದೇ ಇರುವುದನ್ನು ಇದೆ ಎಂದು ಹೇಳಿ ಸಮಸ್ಯೆ ಸೃಷ್ಟಿಸಿದವರು ಡಿ.ಕೆ ಶಿವಕುಮಾರ್, ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಡಿಕಿಶಿ ರಾಜೀನಾಮೆ ಕೊಡಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ರಾಷ್ಟ್ರದ್ರೋಹ ಮಾಡಿದ್ದಾರೋ ಅವರು ರಾಜೀನಾಮೆ ಕೊಡಲಿ. ಹೀಗಾಗಿ ಡಿಕೆಶಿಯೇ ರಾಜೀನಾಮೆ ಕೊಡಲಿ ನಾನು ರಾಷ್ಟ್ರಭಕ್ತ ಎಂದರು.

ತಿರಂಗ ಯಾತ್ರೆ ಮಾಡಿದವನು ನಾನು, ತುರ್ತುಪರಿಸ್ಥಿತಿ ವೇಳೆ ಜೈಲಿಗೆ ಹೋಗಿ ಬಂದವನು ನಾನು. ಕೆಂಪುಕೋಟೆಯಲ್ಲಿ ಕೇಸರಿ ಧ್ವಜ 300ರಿಂದ 500 ವರ್ಷದಲ್ಲಿ ಹಾರಿಸಬಹುದು ಎಂದು ಹೇಳಿದ್ದೀವಿ ಅಷ್ಟೇ ಎಂದು ಹೇಳಿದ್ದಾರೆ.

ಕಾಶ್ಮೀರದ ಲಾಲ್ ಚೌಕ್ ನಲ್ಲಿ ಉಗ್ರಗಾಮಿಗಳ ಭಯವಿಲ್ಲದೇ ಮುರಳಿ ಮನೋಹರ ಜೋಷಿ, ನರೇಂದ್ರ ಮೋದಿ ನೇತೃತ್ವದಲ್ಲಿ ರಾಷ್ಟ್ರಧ್ವಜ ಹಾರಿಸಿಬಂದವನು ನಾನು. ರಾಷ್ಟ್ರಭಕ್ತನಾದ ನಾನು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ. ಇವರು ಲೂಟಿ ಮಾಡಿದ್ದಾರೆ, ಬೇಲ್ ಮೇಲೆ ಇದ್ದಾರೆ, ಅವರೇ ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next