Advertisement

ಜಲವಿದ್ಯುತ್‌ ಯೋಜನೆ ಜಾರಿಗೆ ಬಿಡಲ್ಲ

12:27 PM Nov 06, 2021 | Team Udayavani |

ಹಟ್ಟಿಚಿನ್ನದಗಣಿ: ಗೋಲಪಲ್ಲಿ ಬಳಿ ರಾಜ್ಯ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಜಲವಿದ್ಯುತ್‌ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್‌.ಮಾನಸಯ್ಯ ಹೇಳಿದರು.

Advertisement

ಗೌಡೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೃಷ್ಣಾನದಿ ತಿರುವು ಗೋಲಪಲ್ಲಿ ಜಲವಿದ್ಯುತ್‌ ಯೋಜನೆ ತಡೆಯೋಣ ಜನಜಾಗೃತಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

1200 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಲು ಕೃಷ್ಣಾ ನದಿಗೆ ಅಡ್ಡಲಾಗಿ ಗೋಡೆ ಕಟ್ಟಿ ನದಿ ನೀರನ್ನು ಗೋಲಪಲ್ಲಿ ಹಳ್ಳಕ್ಕೆ ತಿರುಗಿಸುವ ಯೋಜನೆ ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ನದಿಯು ತುಂಬಿ ಹರಿಯುವುದರಿಂದ ಗೌಡೂರು, ಗೌಡೂರು ತಾಂಡ, ಹೊಸಗುಡ್ಡ, ಬಂಡೆಬಾವಿ, ಯರಜಂತಿ, ಮಾಚನೂರು, ಯಲಗಟ್ಟಾ, ತವಗ ಸೇರಿದಂತೆ 14 ಗ್ರಾಮಗಳಿಗೆ ನೀರು ನುಗ್ಗಿ ಮುಳುಗಡೆಯಾಗುತ್ತವೆ. ಈ ಭಾಗದಲ್ಲಿರುವ ಫಲವತ್ತಾದ ಭೂಮಿಯನ್ನು ರೈತರು ಕಳೆದುಕೊಳ್ಳಬೇಕಾಗುತ್ತದೆ.

ಇಡೀ ಕರ್ನಾಟಕಕ್ಕೆ ತಿಂಗಳ ಬಳಕೆಗೆ ಬೇಕಾಗಿರುವುದು 13,000 ಮೆಗಾವ್ಯಾಟ್‌ ವಿದ್ಯುತ್‌. ಈಗಾಗಲೇ ಶಕ್ತಿನಗರ 1700, ವೈಟಿಪಿಎಸ್‌ 1500, ಲಿಂಗನಮಕ್ಕಿ ಸೇರಿದಂತೆ ಜಲವಿದ್ಯುತ್‌ ಉತ್ಪಾದಕ ಘಟಕಗಳಿಂದ 3700, ಒಂದು ಟರ್ಬೈನ್‌ನಿಂದ 50 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಹೆಚ್ಚಿನ ವಿದ್ಯುತ್‌ ಉತ್ಪಾದಿಸುವ ಅವಶ್ಯಕತೆ ಇಲ್ಲ. ವಿದ್ಯುತ್‌ ಉತ್ಪಾದಿಸಲೇಬೇಕು ಎಂದಾದರೆ ಇನ್ನು 24 ಟರ್ಬೈನ್‌ಗಳನ್ನು ಅಳವಡಿಸಿದರೆ 1200 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಬಹುದು. ಅದಕ್ಕೇಕೆ 10 ಸಾವಿರ ಕೋಟಿ ಖರ್ಚು ಮಾಡಿ, 14 ಗ್ರಾಮಗಳನ್ನು ಮುಳುಗಿಸುವ ಯೋಜನೆ ಜಾರಿಗೆ ತರಬೇಕೆಂದು ಹೇಳಿದರು. ಈ ವೇಳೆ ರಾಜಾಗುರುರಾಜ ನಾಯಕ, ಚಿನ್ನಪ್ಪ ಕೊಟ್ರಿಕಿ, ಅಬ್ದುಲ್‌ ರಶೀದ್‌ ಜಮಾದಾರ, ಅಮರೇಗೌಡ, ಗುರುಸ್ವಾಮಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next