Advertisement

ಆಫ್ಘನ್‌ಗೆ ಹೈದರಾಬಾದ್‌ ಸಂಸ್ಥೆ ನೆರವು?

06:00 AM Apr 14, 2018 | Team Udayavani |

ಕಾಬೂಲ್‌/ಹೈದರಾಬಾದ್‌: ಪದೇ ಪದೆ ಉಗ್ರರ ದಾಳಿಯನ್ನು ಎದುರಿಸುವಂಥ ಅಫ್ಘಾನಿಸ್ತಾನವು ಇದೀಗ ಡಿಎನ್‌ಎ ಫಿಂಗರ್‌ಪ್ರಿಂಟಿಂಗ್‌ ತಂತ್ರಜ್ಞಾನದ ಲ್ಯಾಬ್‌ ಸ್ಥಾಪನೆಗೆ ಮತ್ತು ಸಿಬ್ಬಂದಿ ತರಬೇತಿಗಾಗಿ ಹೈದರಾಬಾದ್‌ನ ಸಂಸ್ಥೆಯ ನೆರವು ಕೇಳಿದೆ.

Advertisement

ಹೈದರಾಬಾದ್‌ನಲ್ಲಿರುವ ಡಿಎನ್‌ಎ ಫಿಂಗರ್‌ಪ್ರಿಂಟಿಂಗ್‌ ಮತ್ತು ಡಯಾಗ್ನಾಸ್ಟಿಕ್ಸ್‌ ಕೇಂದ್ರ(ಸಿಡಿಎಫ್ಡಿ)ಕ್ಕೆ ಈ ಕುರಿತು ಮನವಿ ಸಲ್ಲಿಸಲಾಗಿದ್ದು, ಅದು ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ. ಒಪ್ಪಿಗೆ ಸಿಕ್ಕರೆ ಆಫ್ಘನ್‌ ಮಾತ್ರವಲ್ಲದೆ, ಮಾಲ್ಡೀವ್ಸ್‌ ಮತ್ತು ಇಥಿಯೋಪಿಯಾಗೂ ಸಂಸ್ಥೆ ನೆರವು ನೀಡಲಿದೆ. ಉಗ್ರ ದಾಳಿ ವೇಳೆ ದೇಹಗಳು ಛಿದ್ರವಾಗುವ ಕಾರಣ, ಗುರುತು ಪತ್ತೆ ಮಾಡಲು ಡಿಎನ್‌ಎ ತಂತ್ರಜ್ಞಾನ ಬಳಸಬೇಕಾಗುತ್ತದೆ. ಆಫ್ಘನ್‌ನಲ್ಲಿ ಇಂಥ ಘಟನೆಗಳು ಸಾಮಾನ್ಯವಾದ ಕಾರಣ, ಅಲ್ಲೇ ಲ್ಯಾಬ್‌ ತೆರೆಯಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next