Advertisement

ತಾಯಿ ಸ್ನಾನ ಮಾಡೋದನ್ನು ಕದ್ದು ನೋಡಿದ ಗೆಳೆಯನ ಹತ್ಯೆ

12:52 PM Jul 17, 2018 | Sharanya Alva |

ಹೈದರಾಬಾದ್:ತಾಯಿ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡುತ್ತಿದ್ದ ಗೆಳೆಯನ ಗಂಟಲು ಸೀಳಿ, ಚೂರಿಯಿಂದ ಇರಿದು ಹತ್ಯೆಗೈದ ಘಟನೆ ಹೈದರಾಬಾದ್ ನ ಸೆರಿಲಿಂಗಂಪಲ್ಲಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸುಮಾರು ಒಂದು ತಿಂಗಳ ಹಿಂದೆ ಈ ಘಟನೆ ನಡೆದಿತ್ತು. ಅಜಯ್ ದೇವರಾಜ್ (20ವರ್ಷ) ಎಂಬ ಯುವಕ ಗೆಳೆಯ ಸಂಪತ್ ಅವರ ತಾಯಿ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದ.

ಅದಕ್ಕೆ ಪ್ರತೀಕಾರ ಎಂಬಂತೆ ಆರ್.ಸಂಪತ್ ಕಳೆದ ಭಾನುವಾರ ಮೊಬೈಲ್ ಕರೆ ಮಾಡಿ ಅಜಯ್ ನನ್ನು ಕರೆಯಿಸಿಕೊಂಡಿದ್ದ. ತಾರಾನಗರದಲ್ಲಿ ಮದ್ಯ ಸೇವಿಸಿದ ಬಳಿಕ ಸಂಪತ್ ಮತ್ತೆ ತನ್ನಿಬ್ಬರು ಗೆಳೆಯರಿಗೆ ಫೋನ್ ಮಾಡಿ ಬರಲು ಹೇಳಿದ್ದ. ಅವರ ನೆರವಿನಿಂದ ಅಜಯ್ ನ ಗಂಟಲು ಸೀಳಿ, ಹಲವಾರು ಬಾರಿ ಇರಿದು ಆತನನ್ನು ಕೊಂದಿದ್ದರು.

ಅಜಯ್ ಫೋಟೋಗ್ರಾಫರ್, ಈತ ಸೆರಿಲಿಂಗಂಪಲ್ಲಿಯ ಚಂಡಾನಗರದಲ್ಲಿ ತನ್ನ ತಂದೆ, ತಾಯಿ ಹಾಗೂ ಅಣ್ಣನ ಜೊತೆ ವಾಸವಾಗಿದ್ದ. ಅಲ್ಲದೇ ಈತ ಬಿಡುವಿನ ವೇಳೆ ಕಾರು ಚಾಲಕನಾಗಿಯೂ ದುಡಿಯುತ್ತಿದ್ದ.

ಅಜಯ್ ಮತ್ತು ಲಿಂಗಂಪಲ್ಲಿ ನಿವಾಸಿ ಸಂಪತ್ ಇಬ್ಬರು ಗೆಳೆಯರು. ಘಟನೆ ನಡೆದಿರುವುದನ್ನು ತಿಳಿದ ಸಹೋದರ ಪ್ರಥ್ವಿ ಕೂಡಲೇ ಅಜಯ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದ, ಆದರೆ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದ. ತದನಂತರ ಸಂಪತ್ ಪೊಲೀಸರಿಗೆ ಶರಣಾಗಿ ಅಜಯ್ ನನ್ನು ಕೊಂದಿರುವ ಘಟನೆ ವಿವರಿಸಿದ್ದ. ಮತ್ತೊಬ್ಬ ಆರೋಪಿಯನ್ನು ಸೋಮವಾರ ಬಂಧಿಸಿರುವುದಾಗಿ ಚಂಡಾನಗರ್ ಇನ್ಸ್ ಪೆಕ್ಟರ್ ಎನ್.ತಿರುಪತಿ ರಾವ್ ತಿಳಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next