Advertisement

Hybrid nanoparticles ಕ್ಯಾನ್ಸರ್‌ ನಾಶಕ್ಕೆ ಹೊಸ ಕ್ರಮ: ಐಐಎಸ್‌ಸಿ ಸಾಧನೆ

07:50 PM Sep 11, 2023 | Team Udayavani |

ನವದೆಹಲಿ: ಬೆಂಗಳೂರಿನ ಐಐಎಸ್ಸಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌) ಮಹತ್ವದ ಸಂಶೋಧನೆಯೊಂದನ್ನು ಮಾಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಭವಿಷ್ಯದಲ್ಲಿ ಕ್ಯಾನ್ಸರ್‌ಗೆ ಅತ್ಯಂತ ಪರಿಣಾಮಕಾರಿ, ಸುಲಭ ಚಿಕಿತ್ಸೆ ಸಿಗಲಿದೆ. ಅಂತಹದ್ದೊಂದು ಪರಿಣಾಮಕಾರಿ ಕ್ಯಾನ್ಸರ್‌ ಕೋಶಗಳ ಪತ್ತೆ ಮತ್ತು ನಾಶ ಮಾಡುವ ಕ್ರಮ-ಹೈಬ್ರಿಡ್‌ ನ್ಯಾನೋಪಾರ್ಟಿಕಲ್ಸ್‌ ಅನ್ನುಐಐಎಸ್‌ಸಿ ಸಿದ್ಧಪಡಿಸಿದೆ.

Advertisement

ಹೈಬ್ರಿಡ್‌ ನ್ಯಾನೋಪಾರ್ಟಿಕಲ್ಸ್‌ನಲ್ಲಿ ಚಿನ್ನ ಮತ್ತು ತಾಮ್ರದ ಸಲ್ಫೆ„ಡ್‌ ಅನ್ನು ಅಡಕ ಮಾಡಲಾಗಿದೆ. ಕೇವಲ 8 ನ್ಯಾನೋಮೀಟರ್‌ ಗಾತ್ರದ ಈ ಕಣಗಳಿಗೆ ಸುಲಭವಾಗಿ ಕ್ಯಾನ್ಸರ್‌ ಕೋಶಗಳನ್ನು ಪತ್ತೆ ಮಾಡಿ, ನಾಶ ಮಾಡುವ ಸಾಮರ್ಥ್ಯವಿದೆ. ಈಗಾಗಲೇ ಇದನ್ನು ಗರ್ಭಕೋಶ ಮತ್ತು ಶ್ವಾಸಕೋಶದ ಕ್ಯಾನ್ಸರ್‌ ರೋಗದ ಮೇಲೆ ಪ್ರಾಯೋಗಿಕವಾಗಿ ಬಳಸಲಾಗಿದೆ. ಈ ಕುರಿತ ಮಾಹಿತಿ ಎಸಿಎಸ್‌ ಅಪ್ಲೆ„ಡ್‌ ನ್ಯಾನೋ ಮೆಟೀರಿಯಲ್ಸ್‌ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಹೇಗೆ ಕೆಲಸ ಮಾಡುತ್ತೆ?:
ಹೈಬ್ರಿಡ್‌ ನ್ಯಾನೋಪಾರ್ಟಿಕಲ್ಸ್‌ಗಳನ್ನು ಬೆಳಕಿಗೆ ಒಡ್ಡಿದಾಗ ಅವು ಉಷ್ಣವನ್ನು ಉತ್ಪತ್ತಿ ಮಾಡುತ್ತವೆ. ಹಾಗೆಯೇ ಬೆಳಕನ್ನು ಹೀರಿಕೊಂಡು ಶರೀರದ ಕೋಶಗಳೊಳಗೆ ಸರಾಗವಾಗಿ ಚಲಿಸುತ್ತವೆ. ಅದರಿಂದ ಎಲ್ಲಿ ಕ್ಯಾನ್ಸರ್‌ ಕೋಶಗಳಿವೆ ಎಂಬ ಚಿತ್ರಗಳು ಲಭ್ಯವಾಗುತ್ತವೆ. ಇದೇ ವೇಳೆ ಬೆಳಕನ್ನು ಹೀರಿಕೊಳ್ಳುವುದರಿಂದ ಉಂಟಾಗುವ ಉಷ್ಣಾಂಶ ಕೋಶಗಳನ್ನು ನಾಶ ಮಾಡುತ್ತವೆ.

ಈ ಹಿಂದೆಯೇ ಈ ಕ್ರಮವನ್ನು ಸಿದ್ಧಪಡಿಸಲಾಗಿತ್ತು. ಆಗಿನ ನ್ಯಾನೋಪಾರ್ಟಿಕಲ್ಸ್‌ಗಳ ಗಾತ್ರ ತುಸು ದೊಡ್ಡದಾಗಿತ್ತು. ಹೊಸತಾಗಿ ವಿಶೇಷ ತಂತ್ರಜ್ಞಾನ ಬಳಸಿ ಚಿನ್ನದ ಕಣಗಳ ಗಾತ್ರವನ್ನು ಅತಿಸೂಕ್ಷ¾ಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next