Advertisement
ಹದಿನೈದು ಎಕರೆ ಜಮೀನಿನಲ್ಲಿ ಮಾವು ತೋಟ ಇದೆ. ರಸಪೂರಿ, ಬಾದಾಮಿ, ಮಲ್ಲಿಕಾ, ದಶೇರಿ ಇತ್ಯಾದಿ ತಳಿ ಮರಗಳಿವೆ. ಗಂಗಾಧರಯ್ಯ ಸ್ವಾಮಿ ಅವರ ತಂದೆ ಸಸಿಯಿಂದ ಸಸಿಗೆ 30 ಅಡಿ ಅಂತರ ಕೊಟ್ಟು ನೆಟ್ಟು ಬೆಳೆಸಿದ ಮರಗಳೂ ಇವೆ. “ಈಗ ಇಪ್ಪತ್ತು ಅಡಿ ದಾಯ ಕೊಟ್ಟರೂ ಸಾಕು. ಮುವತ್ತು ಅಡಿ ಅಂತರ ಕೊಟ್ಟರೆ ಸಾಕಷ್ಟು ಜಾಗ ಖಾಲಿ ಉಳಿಯುತ್ತದೆ. ವ್ಯರ್ಥ ಆಗುತ್ತದೆ. ಆದ್ದರಿಂದ ಗಿಡದಿಂದ ಗಿಡಕ್ಕೆ 20 ಅಡಿ ಅಂತರ ಕೊಟ್ಟರೆ ಹೆಚ್ಚು ಗಿಡಗಳನ್ನು ಕೂರಿಸಬಹುದು. ಇಳುವರಿಯೂ ಹೆಚ್ಚು ಬರುತ್ತದೆ. ಲಾಭವೂ ಹೆಚ್ಚಾಗುತ್ತದೆ. ಈ ಮರಗಳು 50 ವರ್ಷದ ತನಕ ಚೆನ್ನಾಗಿ ಇಳುವರಿ ಕೊಡುತ್ತವೆ’ ಎಂದು ಹೇಳುತ್ತಾರೆ.
Related Articles
ಕೊರೆಸಿದ್ದ ನಾಲ್ಕೈದು ಕೊಳವೆ ಬಾವಿಗಳಲ್ಲಿ ಒಂದರಲ್ಲಿ ಮಾತ್ರ ಜೀವವಿದೆ. ಇದರಲ್ಲಿಯೂ ನೀರಿನ ಪ್ರಮಾಣ ಹೆಚ್ಚೇನೂ ಇಲ್ಲ. ಹನಿ ನೀರಾವರಿ ಅಳವಡಿಸಿ ತೋಟಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ನೀರು ಹೆಚ್ಚಿದೆ ಎಂದು ಜಾಸ್ತಿ ಪೂರೈಸಿದರೂ ಬೆಳೆಗಾರರಿಗೆ ನಷ್ಟ. ಗಿಡ-ಮರಗಳ ಬೇರು ಕೊಳೆತು ಹೋಗುತ್ತದೆ. ಇಳುವರಿಯೂ ಕುಸಿಯುತ್ತದೆ ಎಂಬುದನ್ನು ಕಂಡು ಕೊಂಡಿದ್ದಾರೆ.
Advertisement
ಉಪ ಕಸುಬುಹಸು-ಕುರಿ-ಆಡು-ಕೋಳಿ ಸಾಕಣೆಯ ಉಪ ಕಸುಬು ಚೆನ್ನಾಗಿ ಕೈ ಡಿದಿವೆ. ಜಮೀನು/ ತೋಟದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು ಬೆಳೆಯುತ್ತದೆ. ಅಲ್ಲಿಯೇ ಮೇಯಲು ಬಿಡುತ್ತಿದ್ದಾರೆ. ಗ್ರಾಮಸ್ಥರು ಜಾನುವಾರುಗಳಿಗೆಂದೆ ಬಹು ಮುತುವರ್ಜಿಯಿಂದ ನಿರ್ವಹಣೆ ಮಾಡುತ್ತಿರುವ ಊರ ಕಟ್ಟೆಯಲ್ಲಿ ನೀರು ಕುಡಿಯುತ್ತವೆ. ‘ದಿನದಲ್ಲಿ ಆರೇಳು ಗಂಟೆ ಹೊರಗೆ ಬಿಟ್ಟರೂ ಸಾಕು. ಚೆನ್ನಾಗಿ ಮೇಯ್ದು, ನೀರು ಕುಡಿದು ಬರುತ್ತವೆ. ಸದ್ಯ ನೂರು ಕುರಿ, ಹತ್ತು ಟಗರು, ಒಂದಷ್ಟು ಆಡು ಇವೆ. ಬಂಡೂರು ಮತ್ತು ಸ್ಥಳೀಯ ತಳಿ ಕುರಿಗಳು. ಇದೊಂದು ರೀತಿ ಎಟಿಎಂ ಇದ್ದಂತೆ. ಬೇಕೆಂದಾಗ ಮಾರಿದರೆ ಸ್ಥಳದಲ್ಲಿಯೇ ಹಣ ಸಿಗುತ್ತದೆ. ಪ್ರತಿ ತಿಂಗಳು ಕುರಿ ಮಾರಾಟದಿಂದ ಕನಿಷ್ಟ 20 ಸಾರ ರೂಪಾಯಿ ದೊರೆಯುತ್ತಿದೆ. ಇದರಿಂದ ಮನೆ ಖರ್ಚು-ವೆಚ್ಚ ನಿಭಾುಸಲು ಸಾಧ್ಯವಾಗಿದೆ’ ಎನ್ನುತ್ತಾರೆ. ಇವರು ಮಾಡುತ್ತಿರುವ ಕೋಳಿ ಸಾಕಣೆ ಕೂಡ ಲಾಭದಾಯಕವಾಗಿದೆ. ಇವುಗಳ ಮಾರಾಟದಿಂದ ವಾರ್ಷಿಕ 50 ಸಾರ ರೂ.ಗೂ ಹೆಚ್ಚು ಹಣ ದೊರೆಯುತ್ತಿದೆ. ಕೋಳಿ ಸಾಕಣೆಗೆ ಪ್ರತ್ಯೇಕ ಖರ್ಚು ಮಾಡುತ್ತಿಲ್ಲ. ತೋಟದಲ್ಲಿ ಅಡ್ಡಾಡ್ಡಿ ಹುಳ-ಹುಪ್ಪಟ್ಟೆ, ಕಾಳು-ಕಡ್ಡಿ ಮೇಯುತ್ತವೆ. ಮನೆಯಲ್ಲಿ ಉಳಿದ ಆಹಾರ, ಒಂದಿಷ್ಟು ಧಾನ್ಯ ಹಾಕುತ್ತಾರೆ. ಅವುಗಳನ್ನೇ ತಿಂದು ಚೆನ್ನಾಗಿ ಬೆಳೆಯುತ್ತವೆ. ಕುರಿ-ಕೋಳಿ ಸಾಕಣೆಯಿಂದ ವಾರ್ಷಿಕ ಏನಿಲ್ಲ ಎಂದರೂ 28 ರಿಂದ 30 ಲೋಡು ಗೊಬ್ಬರ ದೊರೆಯುತ್ತದೆ. ಈ ಗೊಬ್ಬರಕ್ಕೆ ಭಾರಿ ಬೇಡಿಕೆ ಇರುವುದರಿಂದ ಅಗತ್ಯ ಇರುವವರು ಸ್ಥಳಕ್ಕೆ ಬಂದು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಸಧ್ಯ ಕುರಿ ಗೊಬ್ಬರಕ್ಕೆ ಭಾರಿ ಬೆಲೆ ಇದೆ. ವರ್ಷಕ್ಕೆ ಕನಿಷ್ಟ 28 ಟ್ರಾಕ್ಟರ್ ಮಾರಾಟ ಗೊಬ್ಬರ ಮಾರಾಟ ಮಾಡುತ್ತಾರೆ. ಹಸುಗಳನ್ನು ಸಾಕಣೆ ಮಾಡಿದ್ದಾರೆ. ಪ್ರತಿವರ್ಷ ಐದಾರು ಹಸುಗಳನ್ನು ಮಾರಾಟ ಮಾಡುತ್ತಾರೆ. ಸಾವಯವ ಮಾವಿಗೆ ಬೇಡಿಕೆ:
ಹಣ್ಣಿನ ನೊಣಗಳಿಂದ ಮಾವು ರಕ್ಷಿಸುವುದು ಬಹಳ ಕಷ್ಟ. ರಾಸಾಯನಿಕ ಕೀಟನಾಶಕ ಸಿಂಪಡಿಸಿದರೂ ಪ್ರಯೋಜನ ಇಲ್ಲ. ಒಮ್ಮೆ ನೊಣ ಹೊಡೆದರೆ ಹಣ್ಣು ಒಳಗೆ ಕೊಳೆಯಲು ಆರಂಭ ಆಗುತ್ತದೆ. ಮೇಲ್ನೋಟಕ್ಕೆ ಇದು ಗೊತ್ತೇ ಆಗುವುದಿಲ್ಲ. ಇದೇ ರೀತಿ ಸಾವಿರಾರು ಸಂಖ್ಯೆಯಲ್ಲಿ ಹಣ್ಣುಗಳು ಹಾಳಾಗುತ್ತವೆ. ‘ಜೈವಿಕ ವಿಧಾನದಿಂದ ಹಣ್ಣಿನ ನೊಣಗಳನ್ನು ನಿಯಂತ್ರಿಸುವ ಬಗ್ಗೆ ಚಾರಿಸಿದಾಗ ಬ್ಯಾರಿಕ್ಸ್ ಫೆರಮೋನ್ ಟ್ರ್ಯಾಪ್-ಲ್ಯೂರ್ ಮತ್ತು ಸ್ಟಿಕ್ಕಿ ಟ್ರಾಪ್‌ಗ್ಳ ಬಗ್ಗೆ ತಿಳಿಯಿತು. ಒಂದು ಎಕರೆ ತೋಟಕ್ಕೆ ಎಂಟರಿಂದ ಹತ್ತು ಫೆರಮೋನ್ ಟ್ರ್ಯಾಪ್ ಹಾಕಿದರೂ ಸಾಕು. ಇವುಗಳನ್ನು ನೇತು ಹಾಕಿದ ಕೆಲವೇ ನಿಮಿಷಗಳಲ್ಲಿ ಹಣ್ಣಿನ ನೊಣಗಳು ಆಕರ್ಷಿತವಾಗಿ ಬಂದು ಬೀಳುತ್ತವೆ. ನಮ್ಮ ಕಣ್ಣಿಗೂ ಕಾಣದ ಸಣ್ಣಸಣ್ಣ ಕೀಟಗಳು ಸ್ಟಿಕ್ಕಿ ಟ್ರ್ಯಾಪ್‌ಗೆ ಬಂದು ಅಂಟಿಕೊಳ್ಳುತ್ತವೆ. ಇವೆರಡು ಕೀಟ ನಿಯಂತ್ರಕಗಳಿಂದ ಪ್ರತಿವರ್ಷ ಅಪಾರ ಹಣ, ಸಮಯ, ಶ್ರಮ ಉಳಿತಾಯ ಆಗಿದೆ’ ಎಂದು ವಿವರಿಸುತ್ತಾರೆ ಗಂಗಾಧರಯ್ಯ. ಗಂಗಾಧರಯ್ಯ ಸ್ವಾಮಿ ಅವರ ಇಷ್ಟೆಲ್ಲ ಶ್ರಮ ಫಲ ನೀಡಿದೆ. ಇವರು ಬೆಳೆಯುತ್ತಿರುವ ಮಾವಿಗೆ ವಿಶೇಷವಾಗಿ ಬೆಂಗಳೂರಿನ ಸಾವಯವ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. “ಮೊದಲು ಸ್ಥಳಕ್ಕೆ ಬಂದ ವ್ಯಾಪಾರಿಗಳಿಗೆ ಮಾರಿ ಬಿಡುತ್ತಿದ್ದೆವು. ದೊರೆಯುತ್ತಿದ್ದ ಲಾಭಾಂಶ ತುಂಬ ಕಡಿಮೆ ಇರುತ್ತಿತ್ತು. ಒಮ್ಮೆ ನಮ್ಮ ತೋಟಕ್ಕೆ ಭೇಟಿ ನೀಡಿದ ಪರಿಚಿತರೊಬ್ಬರು ನೀವೇ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಎಂದರು. ಆನಂತರ ಅದೇ ರೀತಿ ಮಾರಾಟ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಕೆಲವೊಂದು ಅಪಾರ್ಟ್‌ಮೆಂಟ್‌ಗಳವರು ಮುಂಚಿತವಾಗಿ ಮಾಗೆ ಬುಕ್ ಮಾಡುತ್ತಾರೆ. ಬುಟ್ಟಿಗಳಲ್ಲಿ ಹಣ್ಣುಗಳನ್ನು ಪ್ಯಾಕ್ ಮಾಡಿ ತೆಗೆದುಕೊಂಡು ಹೋಗಿ ಕೊಡುತ್ತೇವೆ. ತಕ್ಷಣವೇ ಹಣ ದೊರೆಯುತ್ತದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ. ಹೆಚ್ಚಿನ ಮಾತಿಗೆ ಸಂಪರ್ಕಿಸಿ: 87220 65215 – ಕುಮಾರ ರೈತ