Advertisement
ನೀರು ಬಸಿದುಹೋಗುವ ಎಲ್ಲ ತರಹದ ಮಣ್ಣಿನಲ್ಲೂ ಇದನ್ನು ಬೆಳೆಯಬಹುದು. ಸಮತಟ್ಟಾದ ನೀರು ನಿಲ್ಲದ ಭೂಮಿಯಲ್ಲಿ ಉತ್ತಮ ಇಳುವರಿ ನೀಡುತ್ತದೆ. ಹೀಗಾಗಿ ಅಗಲವಾದ ಪಾಟ್ ಗ ಳಲ್ಲೂ ಮಣ್ಣು ಗೊಬ್ಬರ ಮಿಶ್ರಣ ಮಾಡಿ ಮನೆಯಂಗಳ, ತಾರಸಿ ಮೇಲೂ ಬೆಳೆಯಬಹುದು.
ಹೆಬ್ಟಾಳೆ ಅವರೆ- ಇದು ಬಿತ್ತಿದ 70ರಿಂದ 75 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಇದನ್ನು ವರ್ಷದ ಯಾವುದೇ ಕಾಲದಲ್ಲೂ ಬೆಳೆಯಬಹುದು. ಅರ್ಕಾ ಜಯ್- ಇದರ ಗಿಡಗಳು ಗಿಡ್ಡವಾಗಿದ್ದು ಪೊದೆಯಾಕಾರದಲ್ಲಿ ಬೆಳೆಯುತ್ತವೆ. ಹೂವು ನೇರಳೆ ಬಣ್ಣ ಹೊಂದಿರುತ್ತದೆ. ಕಾಯಿ ಉದ್ದವಾಗಿದ್ದು ತಿಳಿ ಹಸುರು ಬಣ್ಣ ಹೊಂದಿದೆ. ಈ ತಳಿಗೆ ಕಡಿಮೆ ತೇವಾಂಶ ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 75 ದಿನ. ಅರ್ಕಾ ವಿಜಯ್- ಇದನ್ನು ಕೂಡ ಎಲ್ಲ ಕಾಲದಲ್ಲೂ ಬೆಳೆಯಬಹುದು. ಇದರ ಹೂವುಗಳು ಬಿಳಿ ಬಣ್ಣದಿಂದ ಕೂಡಿದ್ದು ಕಾಯಿ ಹಸುರು ಬಣ್ಣ ಹೊಂದಿದೆ. ಇದಲ್ಲದೆ ಅರ್ಕಾ ಸಂಭ್ರಮ್, ಶಿಲ್ಪ ಮತ್ತು ಖಾಸಗಿ ಕಂಪೆನಿಯ ಅಧಿಕ ಇಳುವರಿ ಕೊಡುವ ಬೀಜಗಳು ದೊರೆಯುತ್ತವೆ. ರೈತರು ತಜ್ಞರಿಂದ ಮಾಹಿತಿ ಪಡೆದು ತಮಗೆ ಬೇಕಾದ ಉತ್ತಮ ಇಳುವರಿ ಕೊಡುವ ಬೀಜಗಳನ್ನು ತಾವೇ ಆರಿಸಿ ತಂದು ಬೆಳೆಯಬಹುದು.
Related Articles
Advertisement
ಬಿತ್ತನೆ ವಿಧಾನ- ಕೊಯ್ಲುತರಕಾರಿಗೆ ಉಪಯೋಗಿಸಲು ಇದರ ಎಳೆಯ ಕಾಯಿಗಳನ್ನು ಕೀಳಬೇಕು. ಬಿತ್ತನೆ ಮಾಡಿದ 70ರಿಂದ 75 ದಿನಗಳಲ್ಲಿ ಹಸುರು ಕಾಯಿಗಳನ್ನು, 100ರಿಂದ 105 ದಿನಗಳಲ್ಲಿ ಒಣಕಾಯಿ ಗಳನ್ನು ಕೊಯ್ಲು ಮಾಡಬಹುದು. ಸರಿಯಾಗಿ ಮಣ್ಣನ್ನು ಹದ ಮಾಡಿದ ಬಳಿಕ ಸುಮಾರು ಒಂದೂವರೆ ಅಡಿಯಲ್ಲಿ ಬೀಜದಿಂದ ಬೀಜಕ್ಕೆ 15 ಸೆ.ಮೀ. ಅಂತರದಲ್ಲಿ ಬಿತ್ತನೆ ಮಾಡ ಬೇಕು. ಬಿತ್ತನೆಗೆ ಮೊದಲು ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರಗಳನ್ನು ಸಾಲುಗಳಲ್ಲಿ ಹಾಕಿ ಚೆನ್ನಾಗಿ ಮಣ್ಣಿನಲ್ಲಿ ಬೆರೆಸಬೇಕು.ಬಿತ್ತನೆಗೆ ಹವಾಮಾನಕ್ಕೆ ಅನುಗುಣ ವಾಗಿ 3ರಿಂದ 4 ದಿನಕ್ಕೊಮ್ಮೆ ನೀರು ಹಾಯಿಸಬಹುದು. ಭೂಮಿ ಯಲ್ಲಿ ನೀರು ನಿಲ್ಲದಂತೆ ನೋಡಿ ಕೊಳ್ಳುವುದು ಮುಖ್ಯ. ಬಿತ್ತನೆ ಕಾಲ
ಅವರೆಯನ್ನು ವರ್ಷದಲ್ಲಿ ಎರಡು ಬಾರಿ ಅದರಲ್ಲೂ ಡಿಸೆಂಬರ್, ಜನವರಿಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.