Advertisement

ಜು.4ಕ್ಕೆ ಎಚ್‌.ವಿಶ್ವನಾಥ್‌ ಜೆಡಿಎಸ್‌ ಸೇರ್ಪಡೆ

03:45 AM Jun 29, 2017 | Team Udayavani |

ಮೈಸೂರು: ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಂಸದ ಎಚ್‌.ವಿಶ್ವನಾಥ್‌, ಜುಲೈ 4ರಂದು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್‌ ಸೇರಲಿದ್ದಾರೆ.

Advertisement

ವಿಶ್ವನಾಥ್‌ ಜೆಡಿಎಸ್‌ ಸೇರುತ್ತಾರೆ, ಹುಣಸೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವಿಷಯ ಕಳೆದ 2 ತಿಂಗಳಿಂದಲೂ ಹರಿದಾಡುತ್ತಿದ್ದರೂ ವಿಶ್ವನಾಥ್‌ ಅವರು ಜೆಡಿಎಸ್‌, ಬಿಜೆಪಿ ಎರಡೂ ಪಕ್ಷದಿಂದ ತಮಗೆ ಆಹ್ವಾನ ಬಂದಿದ್ದು, ಜುಲೈ 2ರಂದು ಯಾವ ಪಕ್ಷ ಸೇರುತ್ತೇನೆ ಎಂಬುದನ್ನು ಪ್ರಕಟಿಸುತ್ತೇನೆ ಎಂದು ಹೇಳಿದ್ದರು.

ಈ ಮಧ್ಯೆ ಅವರ ಪುತ್ರ ಪೂರ್ವಜ್‌ ವಿಶ್ವನಾಥ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮಂಗಳವಾರ ರಾತ್ರಿ ತಮ್ಮ ತಂದೆ ಜೆಡಿಎಸ್‌ ಸೇರುವ ಕುರಿತು ಬರೆದುಕೊಂಡಿದ್ದಾರೆ. ಜುಲೈ 4ರಂದು ವಿಶ್ವನಾಥ್‌ ಅವರು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಜೆಡಿಎಸ್‌ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next