Advertisement

ಕೋವಿಡ್  ವಾರಿಯರ್ಸ್ ಸೇವೆಗೆ ನಡಹಳ್ಳಿ ಮೆಚ್ಚುಗೆ

06:32 PM May 03, 2020 | Naveen |

ಹೂವಿನಹಿಪ್ಪರಗಿ: ಕೊರೊನಾ ಸೋಂಕು ತಡೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಸ್ಥಳೀಯ ಎಂ.ಜಿ. ಕೋರಿ ಹಾಗೂ ಡಾ| ಬಿ.ಜಿ. ಬ್ಯಾಕೋಡ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್‌ ವಿತರಿಸಿ ಅವರು ಮಾತನಾಡಿದರು. ಆಶಾ ಕಾರ್ಯಕರ್ತೆಯರ ಸಂಬಳವನ್ನು 8ರಿಂದ 10 ಸಾವಿರಕ್ಕೇರಿಸಬೇಕು. ಜನಪ್ರತಿನಿಧಿಗಳ ಸಂಬಳ, ಭತ್ಯೆ ಕಡಿತಗೊಳಿಸಿ ಕೊರೊನಾ ವಾರಿಯರ್ಸ್ ಗೆ ನೀಡುವಂತೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡುವುದುಆಗಿ ಹೇಳಿದರು. ಬೇರೆ ರಾಜ್ಯಗಳಿಗೆ ದುಡಿಯಲು ಹೋಗಿ ಈಗ ಸ್ವಗ್ರಾಮಕ್ಕೆ ಮರಳುತ್ತಿರುವ ಕಾರ್ಮಿಕರ ಆರೋಗ್ಯದತ್ತ ನಿಗಾ ವಹಿಸಬೇಕು. ನಿರ್ಗತಿಕ ಕುಟುಂಬಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಅವರಿಗೆ ಅಗತ್ಯ ನೆರವು ನೀಡುವುದಾಗಿ ಹೇಳಿದರು.

ಈ ವೇಳೆ ಮಾತನಾಡಿದ ಶಾಸಕರ ಪತ್ನಿ ಮಹಾದೇವಿ ಪಾಟೀಲ, ದೇವರಹಿಪ್ಪರಗಿ ಕ್ಷೇತ್ರದ ಜನತೆ ಎ.ಎಸ್‌. ಪಾಟೀಲರನ್ನು ಎರಡು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ದೇವರಹಿಪ್ಪರಗಿ ಹಾಗೂ ಮುದ್ದೇಬಿಹಾಳ ಎರಡು ಕ್ಷೇತ್ರದ ಜನರ ಹಿತ ಕಾಪಡುವುದು ನಮ್ಮ ಕರ್ತವ್ಯವಾಗಿದೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ| ಎಸ್‌.ಎಸ್‌. ಓತಗೇರಿ, ಡಾ|ಬಿ.ಎಸ್‌. ಸಂದಿಮನಿ, ರಾಜಶೇಖರ ಚಿಂಚೋಳಿ, ಡಾ| ಕಲ್ಪನಾ ಬಸವರಾಜ, ಮಾಜಿ ಸೈನಿಕ ರಾಮನಗೌಡ ಬಿರಾದಾರ, ಎಸ್‌.ಎಸ್‌. ತಾಳಿಕೋಟಿ, ಸಂಗಮ್ಮ ದೇವರಹಳ್ಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next