Advertisement

Hunsur:ಆಡಳಿತ ಸೌಧದ ಸೀಲಿಂಗ್ ಕಳಚಿಬಿದ್ದು ಮಹಿಳೆ ಕಾಲ್ಬೆರಳು ತುಂಡು!

09:56 PM Mar 18, 2024 | Team Udayavani |

ಹುಣಸೂರು: ಹುಣಸೂರು ತಾಲೂಕು ಆಡಳಿತ ಸೌಧದ ಮೇಲ್ಚಾವಣಿ ಸೀಲಿಂಗ್ ಕಳಚಿಬಿದ್ದು, ಮಹಿಳೆಯೊಬ್ಬರ ಕಾಲು ಬೆರಳು ಕಟ್ಟಾಗಿದ್ದರೆ, ಮತ್ತೆರಡು ಬೆರಳಿನ ಮೂಳೆ ಮುರಿದಿದ್ದು, ಅಪಾಯದಿಂದ ಪಾರಾಗಿದ್ದಾರೆ.

Advertisement

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಕಳ್ಳಿಕೊಪ್ಪಲಿನ ಮಹದೇವರ ಪತ್ನಿ ನಾಗಮ್ಮ(66) ಮದ್ಯದ ಬೆರಳು ಕಳೆದುಕೊಂಡು, ಇದೀಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡು ಬೆರಳಿನ ಶ ಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಇವರು ಕಾರ್ಯ ನಿಮಿತ್ತ ಪುತ್ರ ಗಿರಿಧರ್‌ರೊಂದಿಗೆ ಮಿನಿ ವಿಧಾನಸೌಧದಲ್ಲಿರುವ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು. ಕಾರಿಡಾರ್‌ನ ಮೆಟ್ಟಲುಗಳ ಮೇಲೆ ಮಧ್ಯಾಹ್ನ ಕುಳಿತಿದ್ದ ವೇಳೆ ಆರ್.ಸಿ.ಸಿ.ಯ ದಪ್ಪದಾದ ಸೀಲಿಂಗ್‌ನ ಒಮ್ಮೆಲೆ ಕಳಚಿ ಕಾಲಿನ ಮೇಲೆ ಬಿದ್ದ ಪರಿಣಾಮ ಮದ್ಯದ ಬೆರಳು ತುಂಡಾಗಿದೆ ಆದರೆ, ಮತ್ತೆರಡು ಬೆರಳಿನ ಮೂಳೆ ಮುರಿದು ಅಪಾರ ರಕ್ತ ಸುರಿಯಿತು. ಚುನಾವಣಾ ಕಾರ್ಯದಿಂದಾಗಿ ಕಚೇರಿಯಲ್ಲಿ ಯಾವ ಅಧಿಕಾರಿಗಳು ಇರಲಿಲ್ಲ, ಇದರಿಂದ ಸ್ಥಳದಲ್ಲಿ ಬಿಗುವಿನ ವಾತವರಣ ಸೃಷ್ಟಿಯಾಯಿತು. ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಗಾವಡಗೆರೆ ಉಪ ತಹಶೀಲ್ದಾರ್ ಅರುಣ್‌ಕುಮಾರ್ ಮತ್ತು ಸಿಬಂದಿ ತತ್ ಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಸಂಜೆ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಘಟನೆಯಿಂದ ಆಕ್ರೋಶಗೊಂಡ ನಾಗಮ್ಮರ ಪುತ್ರ ಗಿರಿಧರ್ ಹಾಗೂ ಸಾರ್ವಜನಿಕರು ಸರಕಾರಕ್ಕೆ ಕನಿಷ್ಠ ಕಟ್ಟಡ ದುರಸ್ತಿ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಸ್ಥಳಕ್ಕೆ ಶಾಸಕರು, ಹಿರಿಯ ಅಧಿಕಾರಿಗಳು ಆಗಮಿಸಬೇಕೆಂದು ಆಗ್ರಹಿಸಿದರು. ಇದರಿಂದ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು.

Advertisement

ಎಸಿ-ತಹಶೀಲ್ದಾರ್ ಭೇಟಿ
ಆಸ್ಪತ್ರೆಗೆ ಉಪವಿಬಾಗಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರಾ, ತಹಶೀಲ್ದಾರ್ ನಯನಕುಮಾರಿ ದೌಡಾಯಿಸಿ ಗಾಯಾಳು ಹಾಗೂ ಅವರ ಪುತ್ರನನ್ನು ಸಮಾಧಾನಿಸಿ ಆಸ್ಪತ್ರೆಯ ವೆಚ್ಚವನ್ನು ಭರಿಸುವ ಹಾಗೂ ಸರಕಾರದಿಂದ ಪರಿಹಾರ ಕೊಡಿಸಲಾಗುವುದೆಂದು ಭರವಸೆ ಇತ್ತರು.

ಅಭದ್ರ ಕಟ್ಟಡದ ಬಗ್ಗೆ ವರ್ಷದ ಹಿಂದೆಯೇ ಪತ್ರಿಕೆಗಳಲ್ಲಿ ವರದಿಯಾಗಿತ್ತು. 2019 ರಿಂದಲೂ ಹೊಸ ಸೌಧ ನಿರ್ಮಿಸುವ ಬಗ್ಗೆ ಪ್ರಸ್ತಾಪವಾಗುತ್ತಿದೆಯೇ ಹೊರತು ಈವರೆಗೆ ಯಾವ ಕ್ರಮವು ಆಗಿಲ್ಲಾ, ಕನಿಷ್ಟ ದುರಸ್ತಿಯು ಆಗಲಿಲ್ಲ.

ದಸಂಸ ಒತ್ತಾಯ
ಮಿನಿ ವಿಧಾನಸೌಧ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು, ಹಲವಾರು ಬಾರಿ ಮನವಿ ಮಾಡಿದ್ದರೂ ಸರಕಾರ ಗಮನ ಹರಿಸಿಲ್ಲ, ಈಗಲಾದರೂ ದೊಡ್ಡ ಅನಾಹುತವಾಗುವ ಮೊದಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಈ ಬಗ್ಗೆ ಗಮನಹರಿಸಿ ತಕ್ಷಣವೇ ದುರಸ್ತಿಗೆ ಮುಂದಾಗ ಬೇಕೆಂದು ದಸಂಸದ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಅವರು ಎಸಿ ಮಹಮ್ಮದ್ ಹ್ಯಾರಿಸ್‌ಸುಮೇರರಿಗೆ ಮನವಿ ಸಲ್ಲಿಸಿದರು. ಸಾರ್ವಜನಿಕರು ಹಾಗೂ ಆಡಳಿತ ಸೌಧದ ಸಿಬಂದಿ ಸಹ ಹೊಸದಾಗಿ ಪ್ಲಾಸ್ಟಿಂಗ್ ಮಾಡುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next