Advertisement
ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಷ್ಟಾಪನಾ ಸಮಿತಿಯು ಆಯೋಜಿಸಿದ್ದ ಅಂಬೇಡ್ಕರರ ಪುತ್ಥಳಿ ಪ್ರತಿಷ್ಟಾಪನೆಯ ಗುದ್ದಲಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಹುದಿನದ ಕನಸನ್ನು ಗ್ರಾಮಸ್ಥರು ಹಾಗೂ ಸರಕಾರಿ ನೌಕರರು,ಅಧಿಕಾರಿಗಳು, ನಿವೃತ್ತರು ಸೇರಿ ತಾಲೂಕಿಗೆ ಮಾದರಿ ರೀತಿಯಲ್ಲಿ ನನಸಾಗಿಸುತ್ತಿದ್ದೀರೆಂದು ಪ್ರಶಂಸಿಸಿ, ಕಟ್ಟೆಮಳಲವಾಡಿ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ತುಂಬಿದೆ. ಈ ಗ್ರಾಮವನ್ನು ಸಿದ್ದರಾಮಯ್ಯರ ಸರಕಾರದ ಅವಧಿಯಲ್ಲಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಿದ್ದೇನೆಂಬ ಆತ್ಮತೃಪ್ತಿ ಇದೆ ಎಂದರು.
Related Articles
Advertisement
ದಲಿತ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಶೋಷಿತರು ಬಹುಸಂಖ್ಯಾತರಾಗಿದ್ದರೂ ಎಡ-ಬಲವೆಂಬ ಹೆಸರಿನಲ್ಲಿ ಒಡೆದು ಹೋಗಿ ಅನಾಯಾಸವಾಗಿ ಪಡೆಯಬಹುದಾದ ಅಧಿಕಾರದಕ್ಕದಾಗಿದೆ. ಮಾನಸಿಕವಾಗಿ ಒಂದಾದಲ್ಲಿ ಮಾತ್ರ ನಮ್ಮತನವನ್ನು ಉಳಿಸಿಕೊಳ್ಳಲು ಸಾಧ್ಯವೆಂದರು.
ಸಮಿತಿಯ ಅಧ್ಯಕ್ಷ ನಾಗರಾಜ ಮಲ್ಲಾಡಿ, ಉಪಾಧ್ಯಕ್ಷ ನಿಂಗರಾಜ ಮಲ್ಲಾಡಿ ಮಾತನಾಡಿ, ಬರುವ ಡಿ.6 ಅಂಬೇಡ್ಕರ್ ಪರಿನಿಬ್ಬಾಣದಿನದಂದು ಪುತ್ಥಳಿ ಸ್ಥಾಪಿಸಲು ಎಲ್ಲರೂ ಸಹಕರಿಸಬೇಕೆಂದು ಕೋರಿದರು.
ಜಿ.ಪಂ. ಮಾಜಿ ಸದಸ್ಯ ಅಚ್ಚುತಾನಂದರವರು ಈ ಕಾರ್ಯಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.
ಬಿ. ಆರ್. ಸಿ. ಸಂತೋಷ್ ಕುಮಾರ್ ಶೋಷಿತರ ಬೆಳಕಾಗಿರುವ ಅಂಬೇಡ್ಕರರ ಪುತ್ಥಳಿಯನ್ನು ಸ್ಥಾಪಿಸುವ ಜೊತೆಗೆ ಇಲ್ಲಿ ಸಾವಿತ್ರಿಬಾಯಿ ಬಾಪುಲೆ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪಿಸಲಾಗುವುದು. ಬುದ್ದನ ಉದ್ಯಾನ ನಿರ್ಮಿಸಲಾಗುವುದೆಂದರೆ ಅಭಿಯೋಜಕ ರಮೇಶ್ ಬಾಬು ಗ್ರಂಥಾಲಯಕ್ಕೆ ಅವಶ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದರು.
ಜೆಡಿಎಸ್ ಉಪಾಧ್ಯಕ್ಷ ದೇವರಾಜ ಒಡೆಯರ್, ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ದಲಿತರು ತಮ್ಮೊಳಗಿನ ಈರ್ಷೆ ಬಿಟ್ಟು ಒಂದಾದಲ್ಲಿ ಮಾತ್ರ ಅಧಿಕಾರ ಹಿಡಿಯಲು ಸಾಧ್ಯವೆಂದರು. ಮಾಜಿ ಸಂಸದ ವಿಜಯಶಂಕರ್, ಜೆಡಿಎಸ್ ಅಧ್ಯಕ್ಷ ದೇವರಹಳ್ಳಿಸೋಮಶೇಖರ್, ಹುಡಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ನಗರಸಭೆ ಸದಸ್ಯ ದೊಡ್ಡಹೆಜ್ಜೂರು ರಮೇಶ್,ಕೆಂಪನಾಯಕ ಮಾತನಾಡಿದರು.
ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಸುಧಾತಗಡಯ್ಯ,ಸದಸ್ಯರು, ತಾ.ಪಂ.ಮಾಜಿ ಅಧ್ಯಕ್ಷೆ ಪದ್ಮಮ್ಮ, ತಾ.ಬಿಜೆಪಿ ಅಧ್ಯಕ್ಷ ನಾಗಣ್ಣ, ಮುಖಂಡರಾದ ನಟರಾಜ್, ತಗಡಯ್ಯ, ದೇವರಾಜ್, ಶ್ರೀಧರ್, ಬಸವಲಿಂಗಯ್ಯ, ಸಂಜು, ಕೃಷ್ಣಶೆಟ್ಟೆ, ಕೇಶವಮೂರ್ತಿ, ಹರೀಶ್, ಪ್ರಪುಲ್ಲಾಮಲ್ಲಾಡಿ ಸೇರಿದಂತೆ ಅನೇಕ ಮುಖಂಡರಿದ್ದರು.