Advertisement

Hunsur: ಸಂಸದ ಪ್ರತಾಪಸಿಂಹ ವಿರುದ್ದ ಕ್ರಮ ಕೈಗೊಳ್ಳಲು ವಕೀಲರ ಮನವಿ

02:25 PM Oct 06, 2023 | Team Udayavani |

ಹುಣಸೂರು: ಜನರನ್ನು ಕೆರಳಿಸುವಂತ ಹೇಳಿಕೆ ನೀಡುತ್ತಿರುವ ಸಂಸದ ಪ್ರತಾಪಸಿಂಹ ವಿರುದ್ದ ಕ್ರಮ ಕೈಗೊಳ್ಳಲು ವಕೀಲ ಪುಟ್ಟರಾಜು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Advertisement

ಹುಣಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಿಷ ಒಬ್ಬ ರಾಜನಾಗಿದ್ದು, ಮಹಿಷ ದಸರಾ ಆಚರಿಸುತ್ತಿದ್ದೇವೆಯೇ ಹೊರತು ಬೇರೆಯವರಿಗೆ ನೋವುಂಟು ಮಾಡಲು ಅಲ್ಲ. ನಾವೇನು ಸಂಸದರಂತೆ ಜನರನ್ನು ಎತ್ತಿಕಟ್ಟುತ್ತಿಲ್ಲ. ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ ಸಂಸದರು ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತ ಹೇಳಿಕೆ ನೀಡಿ ಅಶಾಂತಿ ಉಂಟು ಮಾಡಲು ಹೊರಟಿದ್ದಾರೆರೆಂದರು.

ಸಂಸದರು ಅಭಿವೃದ್ದಿ ಕಡೆ ಗಮನ ಹರಿಸುವುದನ್ನು ಬಿಟ್ಟು ಮಹಿಷ ದಸರಾ ಹೆಸರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇದು ಅವರಿಗೆ ಶೋಬೆ ತರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಧಾರ್ಮಿಕ ಆಚರಣೆಗೆ ಅವಕಾಶವಿದೆ ಎಂದರು.

ಎಲ್ಲರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ಅ.13 ರಂದು ನಡೆಸಲುದ್ದೇಶಿಸಿರುವ ಮಹಿಷ ದಸರಾ ದಂಧೆ ವ್ಯತಿರಿಕ್ತವಾಗಿ ಚಾಮುಂಡಿ ಬೆಟ್ಟ ಚಲೋ ಮಾಡುತ್ತಿರುವುದು ತರವಲ್ಲ. ಆ ಪಕ್ಷದ ಹಿರಿಯರು ಸಂಸದರಿಗೆ ತಿಳಿ ಹೇಳಬೇಕು. ಮಹಿಷ ದಸರಾ ತಡೆದಲ್ಲಿ ಆಗುವ ಅನಾಹುತಗಳಿಗೆ ಸಂಸದರೇ ನೇರ ಹೊಣೆಗಾರರಾಗಲಿದ್ದಾರೆಂದರು.

ಬೈಕ್ ರ್ಯಾಲಿ:

Advertisement

ಹುಣಸೂರು ಅ.13 ರ ಮಹಿಷ ದಸರಾಕ್ಕೆ ತಾಲೂಕಿನಿಂದ 200 ಕ್ಕೂ ಹೆಚ್ಚು ಬೈಕ್ ಗಳು, 15 ಬಸ್ ಗಳಲ್ಲಿ ಬುದ್ದನ ಅನುಯಾಯಿಗಳು ತೆರಳುತ್ತಿರುವುದಾಗಿ ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನರು  ಬಾಗವಹಿಸುವಂತೆ ಬಿ.ಎಸ್.ಪಿ. ತಾಲೂಕು ಅಧ್ಯಕ್ಷ ಸೋಮನಹಳ್ಳಿ ಪ್ರಸನ್ನ ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ದಲಿತ ಮುಕಲಂಡ ವರದರಾಜು, ಕಾಂತರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next