Advertisement

ಹುಣಸೂರು ನಗರಸಭೆ ಪೌರಾಯುಕ್ತರಾಗಿ ಸಿ.ಚಂದ್ರಪ್ಪ

11:28 AM Feb 18, 2023 | Team Udayavani |

ಹುಣಸೂರು: ನಗರಸಭೆಗೆ ನೂತನ ಪೌರಾಯುಕ್ತರಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಿ.ಚಂದ್ರಪ್ಪರನ್ನು ವರ್ಗಾಯಿಸಿ ನಗರಾಭಿವೃದ್ದಿ ಇಲಾಖೆಯ ಅಧಿನ ಕಾರ್ಯದರ್ಶಿ ಟಿ.ಮಂಜುನಾಥ್ ಅದೇಶಿಸಿದ್ದಾರೆ.

Advertisement

2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಅಯೋಗದ ನಿರ್ದೇಶನದ ಮೇರೆಗೆ ಹುಣಸೂರು ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೌರಾಯುಕ್ತೆ ಎಂ.ಮಾನಸರನ್ನು ಕೊಳ್ಳೆಗಾಲ ನಗರಸಭೆಗೆ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರಸಭೆಯಲ್ಲಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಚಂದ್ರಪ್ಪರನ್ನು ಹುಣಸೂರು ನಗರಸಭೆಗೆ ಪೌರಾಯುಕ್ತರನ್ನಾಗಿ ನೇಮಕ ಮಾಡಿ ನಗಾರಾಭಿವೃದ್ದಿ ಇಲಾಖೆಯ ಅಧಿನ ಕಾರ್ಯದರ್ಶಿ ಟಿ.ಮಂಜುನಾಥ್ ಅದೇಶ ಹೊರಡಿಸಿದ್ದಾರೆ.

ಅಭಿವೃದ್ದಿಗೆ ಹಿನ್ನಡೆ:

ಕಳೆದ ಮೂರು ತಿಂಗಳ ಹಿಂದಷ್ಟೆ ಶ್ರೀರಂಗಪಟ್ಟಣದಿಂದ ಇಲ್ಲಿಗೆ ವರ್ಗಾವಣೆಗೊಂಡಿದ್ದ ಎಂ.ಮಾನಸ ಸ್ಥಳೀಯರು ಎಂಬ ಕಾರಣದಿಂದ ಮತ್ತೆ ವರ್ಗಾವಣೆಗೊಳಿಸಿದೆ. ಆದರೆ ನಾಲ್ಕು ವರ್ಷದಲ್ಲಿ ಎರಡುವರ್ಷ ಪೌರಾಯುಕ್ತರೇ ಇರಲಿಲ್ಲ.

ನಂತರ ಎರಡು ವರ್ಷದಲ್ಲಿ ನಾಲ್ಕು ಮಂದಿ ಪೌರಾಯುಕ್ತರು ಬಂದು ಹೋಗಿದ್ದು. ನಗರದ ಅಭಿವೃದ್ದಿ ಇರಲಿ ಕಚೇರಿಯಲ್ಲಿ ಕಂದಾಯಕಟ್ಟಿದ್ದರೂ ತಮ್ಮ ಆಸ್ತಿಯ ಮಾಲಿಕತ್ವದ ನಮೂನೆ 3 ಪಡೆದುಕೊಳ್ಳುವುದಕ್ಕೂ ಸಾದ್ಯವಾಗದ ಸ್ಥಿತಿ ಇಲ್ಲಿದ್ದು.

Advertisement

ಮಾನಸ ರವರು ಬಂದ ಮೂರು ತಿಂಗಳಿನಲ್ಲೇ ಸಾಕಷ್ಟು ಬದಲಾವಣೆ ತಂದಿದ್ದರಲ್ಲದೆ ಸಿಬ್ಬಂದಿಗಳ ಕಳ್ಳಾಟಕ್ಕೆ ಕಡಿವಾಣ ಹಾಕಿ. ಮೂಲ ಹುದ್ದೆಯ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ಬದಲಾಯಿಸಿ . ಅನಾವಶ್ಯಕ ವಿಳಂಬಕ್ಕೆ ಕಡಿವಾಣ ಹಾಕಿದ್ದರು.

ಈ ವೇಳೆಯಲ್ಲೇ ಮತ್ತೆ ವರ್ಗಾವಣೆಯಾಗಿದ್ದು, ಸಣ್ಣ ಪುಟ್ಟ ಕೆಲಸಕ್ಕೂ ನಾಗರೀಕರು ಚುನಾವಣೆ ವರೆಗೆ ಕಾಯುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next