ಹುಣಸೂರು: ಮಹಿಳಾ ಸರಕಾರಿ ಪದವಿ ಕಾಲೇಜಿಗೆ ಇಲ್ಲಿನ ತುಳಸಿ ಜ್ಯುವೆಲ್ಲರ್ಸ್‌ನಿಂದ ದಿ. ಶಾಂತಿಲಾಲ್ ಸ್ಮರಣಾರ್ಥ ಕೊಡುಗೆಯಾಗಿ ನೀಡಿದ ಶುದ್ದ ಕುಡಿಯುವ ನೀರಿನ ಘಟಕವನ್ನು ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಶಾಸಕ ಎಚ್.ಪಿ.ಮಂಜುನಾಥರು ಉಧ್ಘಾಟಿಸಿದರು.
ಮೈಸೂರಿನ ಸನ್ ರೈಸ್ ವೆಂರ್ಸ್ ವತಿಯಿಂದ ನೀಡಿರುವ ಆಟೋ ಕೋಲ್ಡ್ ಅಂಡ್ ಹಾಟ್ ವಾಟರ್ ಡಿಸ್ಪೆನ್ಪರ್ ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಎ.ಟಿ. ಸಿದ್ದೇಶ್ ನೀಡಿರುವ ಇನ್ ಸ್ಟಂಟ್ ಗೀಸರ್ ಅನ್ನು ಸಹ ಇದೇ ವೇಳೆ ಉದ್ಘಾಟಿಸಿದ ಶಾಸಕರು ತುಳಸಿ ಜ್ಯುವೆಲ್ಲರ್ಸ್ ನ ಮಾಲಕ ದಿನೇಶ್ ಪಟೇವರ, ತಾಯಿ ಜಮುನಾಬಾಯಿ ಹಾಗೂ ಎ.ಟಿ.ಸಿದ್ದೇಶ್‌ರ ಕೊಡುಗೆಯನ್ನು ಸ್ಮರಿಸಿ, ಕಾಲೇಜು ವತಿಯಿಂದ ಸನ್ಮಾನಿಸಿ, ಸೇವೆಯನ್ನು ಪ್ರಶಂಸಿಸಿ, ಉಳ್ಳವರು ಹೀಗೆ ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುವುದರಿಂದ ಶೈಕ್ಷಣಿಕ ಪ್ರಗತಿಗೆ, ಕಾಲೇಜು ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು.
ಕಟ್ಟಡ ಶೀಘ್ರ ಉಧ್ಘಾಟನೆ; ಕಾಲೇಜು ಆವರಣದಲ್ಲಿ ಐದು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನಾಲ್ಕು ಅಂತಸ್ತಿನ ಕಟ್ಟಡವನ್ನು ಪರಿಶೀಲಿಸಿದ ಶಾಸಕರು, ಉನ್ನತ ಶಿಕ್ಷಣ, ಉಸ್ತುವಾರಿ ಸಚಿವರನ್ನು ಕರೆಸಿ ಶೀಘ್ರ ಉಧ್ಘಾಟಿಸಲಾಗುವುದು ಎಂದರು.
ಕಾಲೇಜು ಆವರಣದಲ್ಲಿನ ಉಳಿಕೆ ಕಟ್ಟಡ ಸಾಮಾಗ್ರಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಗುತ್ತಿಗೆದಾರನಿಗೆ ಹಾಗೂ ಕಾಲೇಜು ಆವರಣವನ್ನು ಸ್ವಚ್ಚಗೊಳಿಸಲು ಕ್ರಮ ವಹಿಸುವಂತೆ ನಗರಸಭೆ ಅಧ್ಯಕ್ಷೆ ಸಮೀನಾ ಪರ್ವಿನ್‌ರಿಗೆ ಸೂಚಿಸಿದರು.
ನ್ಯಾಕ್‌ಗೆ ಸಜ್ಜಾಗಿ; ಇದೇ ವೇಳೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕಾಲೇಜು ಅಭಿವೃದ್ದಿ ಸಮಿತಿ ಸಭೆಯಲ್ಲಿ ಕಾಲೇಜು ನ್ಯಾಕ್ ಮಾನ್ಯತೆ ಪಡೆಯಲು ಅದ್ಯಾಪಕ ವೃಂದ ಅಗತ್ಯ ಸಿದ್ದತೆ ಮಾಡಿಕೊಳ್ಳಿ. ಕಾಲೇಜು ಅಭಿವೃದ್ದಿಗೆ ಸಂಬಂಧಿಸಿದಂತೆ ಈ ಭಾಗದ ಬಾಲಕಿಯರ ಹೈಸ್ಕೂಲ್, ಬಾಲಕಿಯರ ಪದವಿ ಪೂರ್ವ ಕಾಲೇಜು, ಮಹಿಳಾ ಪದವಿ ಕಾಲೇಜು ಸೇರಿದಂತೆ ಇಡೀ ಕ್ಯಾಂಪಸ್‌ನ್ನು ಸಾವಿತ್ರಿ ಬಾಪುಲೆ ಕ್ಯಾಂಪಸನ್ನಾಗಿಸಲು ಅಗತ್ಯ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು, ಕಾಲೇಜಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹಳೇ ವಿದ್ಯಾರ್ಥಿಗಳು ಹಾಗೂ ದಾನಿಗಳನ್ನು ಸಿಡಿಸಿ ಸದಸ್ಯರು ಗುರುತಿಸಿ ದೇಣಿಗೆ ಹಾಗೂ ಸಾಮಾಗ್ರಿ ರೂಪದಲ್ಲಿ ಪಡೆದು ಪ್ರಗತಿಗೆ ಮುಂದಾಗಿ ಎಂದು ಸಲಹೆ ನೀಡಿದರು.
ಈಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸಮೀನಾ ಪರ್ವಿನ್, ಮಾಜಿ ಅಧ್ಯಕ್ಷೆ ಅನುಷಾರಘು, ಪ್ರಾಚಾರ್ಯ ಜ್ಞಾನಪ್ರಕಾಶ್, ಸಿಡಿಸಿ ಕಾರ್ಯಾಧ್ಯಕ್ಷ ಹನಗೋಡುನಟರಾಜ್, ಸದಸ್ಯರಾದ ಎ.ಟಿ.ಸಿದ್ದೇಶ್, ನಾಗರಾಜ್, ಚಿನ್ನವೀರಯ್ಯ, ನಿಂಗರಾಜಪ್ಪ, ಹಕೀಬ್, ಬಾಬು, ಸಂಚಾಲಕ ಪುಟ್ಟ ಶೆಟ್ಟಿ ಸೇರಿದಂತೆ ಅದ್ಯಾಪಕ ವೃಂದ ಬಾಗವಹಿಸಿದ್ದರು.