Advertisement

ಪತ್ನಿ ಹತ್ಯೆಗೈದಿದ್ದ ಆರೋಪಿಯ ಬಂಧನ

01:10 PM Oct 13, 2021 | Team Udayavani |

ಹುಣಸೂರು: ಪತ್ನಿಯ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪದಡಿ ಪತಿಯನ್ನು ಬಿಳಿಕೆರೆ ಪೋಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಘಟನೆ ನಡೆದಿದೆ.

Advertisement

ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೋರೇಗೌಡನಕೊಪ್ಪಲಿನ ಲವಕುಮಾರ್ ಬಂಧಿತ ಆರೋಪಿ.

ಈತ ತನ್ನ ಪತ್ನಿ ಪಂಕಜಳ ಶೀಲ ಶಂಕಿಸಿ ಒಂದೂವರೆ ತಿಂಗಳ ಹಿಂದೆ ಮನೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆಂದು ಮೃತಳ  ಕುಟುಂಬದವರು ದೂರು ನೀಡಿದ್ದರ ಹಿನ್ನೆಲೆಯಲ್ಲಿ  ಆರೋಪಿ ಪತ್ತೆಗಾಗಿ ಬಿಳಿಕೆರೆ ಠಾಣಾ ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡ ತಲಾಷ್ ನಡೆಸಿತ್ತು. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಆರೋಪಿ ಸಿಕ್ಕಿ ಬಿದ್ದಿದ್ದು. ಇದೀಗ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next