Advertisement

ಮನೋಗಣಿತದ ಉತ್ಸವದಲ್ಲಿ ಪಾಲ್ಗೊಂಡ ನೂರಾರು ಮಕ್ಕಳು

05:22 PM Aug 21, 2022 | Team Udayavani |

ಬೆಂಗಳೂರು: ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 241 ಮಕ್ಕಳು ಇಲ್ಲಿಯ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ 2022ನೇ ಸಾಲಿನ ಬ್ರೈನೋಬ್ರೈನ್‌ ಚಾಂಪಿಯನ್‌ ಎನಿಸಿಕೊಂಡು ಚಿನ್ನದ ಪದಕ ಗೆದ್ದುಕೊಂಡರು. 235 ಮಕ್ಕಳು ಬೆಳ್ಳಿ ಪದಕ ಪಡೆದರು.

Advertisement

ಮಕ್ಕಳಿಗೆ ಮನೋಗಣಿತದಲ್ಲಿರುವ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಕರ್ನಾಟಕ ಬ್ರೈನೋಬ್ರೈನ್‌ ಉತ್ಸವ ಅವಕಾಶ ಕಲ್ಪಿಸಿತ್ತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 800 ಮಂದಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು ಮಾತ್ರವಲ್ಲದೇ ಬೆಳಗಾವಿ, ರಾಯಚೂರು, ಮಡಿಕೇರಿ, ತುಮಕೂರು, ಕೋಲಾರ, ಕಲಬುರಗಿ, ಬಳ್ಳಾರಿ, ಮಂಗಳೂರು, ದೊಡ್ಡಬಳ್ಳಾಪುರ, ಬಾಗಲಕೋಟೆ ಜಿಲ್ಲೆಗಳಿಂದಲೂ ಪೋಷಕರು ಮಕ್ಕಳೊಂದಿಗೆ ಉತ್ಸವದಲ್ಲಿ ಪಾಲ್ಗೊಂಡರು.

ವಿವಿಧ ವಯೋಮಾನಗಳು ಮತ್ತು ಕಲಿಕೆಯ ಹಂತಕ್ಕೆ ಅನುಗುಣವಾಗಿ ಒಟ್ಟು 285 ಸ್ಪರ್ಧೆಗಳು ನಡೆದವು. 4ರಿಂದ 14 ವರ್ಷದ ಮಕ್ಕಳಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಬೆಳಿಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನದವರೆಗೆ ಸ್ಪರ್ಧೆಗಳು ನಡೆದರೆ, ಬಳಿಕ ಗಣಿತದಲ್ಲಿರುವ ಮಕ್ಕಳ ಪ್ರತಿಭಾ ಪ್ರದರ್ಶನ ಮತ್ತು ಬಹುಮಾನ ವಿತರಣೆ ನಡೆಯಿತು.

ಕಬ್ಬಿಣದ ಕಡಲೆ ಎಂದೆನಿಸುವ ಸವಾಲುಗಳನ್ನು ಕ್ಷಣಾರ್ಧದಲ್ಲಿ ಮಕ್ಕಳು ಬಿಡಿಸಿ ಪ್ರೇಕ್ಷಕರು ಆವಕ್ಕಾಗುವಂತೆ ಮಾಡಿದರು. ಬ್ರೈನೋಬ್ರೇನ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕ ಆನಂದ ಸುಬ್ರಮಣ್ಯಮ್‌, ಪ್ರಾದೇಶಿಕ ನಿರ್ದೇಶಕ ಅರುಳ್ ಸುಬ್ರಮಣ್ಯಮ್ ಮುಖ್ಯ ಅತಿಥಿಗಳಾಗಿ ಬಹುಮಾನಗಳನ್ನು ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next