Advertisement
ಇತ್ತೀಚೆಗೆ ನಡೆದಿದ್ದ ಅಧಿವೇಶನದ ಸಂದರ್ಭ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿ ಹೋಗಿದ್ದ ಮಸೂದೆಗೆ ವಿಧಾನಪರಿಷತ್ತಿನಲ್ಲಿ ಹಿನ್ನಡೆಯುಂಟಾಗಿತ್ತು. 10 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗಿನ ವರಮಾನದಲ್ಲಿ ಶೇ. 5 ರಷ್ಟನ್ನು ಹಾಗೂ 1 ಕೋಟಿ ರೂ.ಗೂ ಅಧಿಕ ವರಮಾನವಿರುವ ದೇಗುಲಗಳ ಹುಂಡಿಯಿಂದ ಶೇ.10 ರಷ್ಟು ಹಣವನ್ನು ಸಾಮಾನ್ಯ ಸಂಗ್ರಹಣಾ ನಿಧಿಗೆ ಸಲ್ಲಿಸಬೇಕು ಎಂಬುದು ಈ ತಿದ್ದುಪಡಿ ಮಸೂದೆಯಲ್ಲಿ ಉಲ್ಲೇಖವಾಗಿತ್ತು.
1997ರ ಈ ಕಾಯ್ದೆಗೆ 2011 ಮತ್ತು 2012ರಲ್ಲಿ ಅಂದಿನ ರಾಜ್ಯ ಸರಕಾರ ತಂದಿದ್ದ ತಿದ್ದುಪಡಿಗೆ ಧಾರವಾಡ ಹೈಕೋರ್ಟ್ ತಡೆ ನೀಡಿದೆ. ಇದನ್ನು ರಾಜ್ಯ ಸರಕಾರವೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಪ್ರಕರಣವು ಅಂತಿಮ ಹಂತದ ವಿಚಾರಣೆಯಲ್ಲಿದೆ.
Related Articles
Advertisement
ಮತ್ತೆ ರಾಜ್ಯಪಾಲರಿಗೆಇತರ ಧಾರ್ಮಿಕ ಸಂಸ್ಥೆಗಳಿಗೂ ಇದೇ ಮಸೂದೆ ರೀತಿಯಲ್ಲಿ ಯಾವುದಾದರೂ ಶಾಸನ ರಚಿಸುವ ಯೋಚನೆ ರಾಜ್ಯ ಸರಕಾರಕ್ಕಿದೆಯೇ? ಸ್ಪಷ್ಟನೆಗಳೊಂದಿಗೆ ಕಡತವನ್ನು ಮರುಸಲ್ಲಿಕೆ ಮಾಡುವಂತೆ ನಿರ್ದೇ ಶನ ನೀಡಿ ರಾಜ್ಯ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಈ ಕಡತವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಗೆ ಕಳುಹಿಸಲಾಗಿದ್ದು, ಸೂಕ್ತ ಸ್ಪಷ್ಟನೆಗಳೊಂದಿಗೆ ರಾಜ್ಯಪಾಲರಿಗೆ ಮತ್ತೆ ಕಳುಹಿಸುವುದಾಗಿ ಸರಕಾರದ ಮೂಲಗಳು ಸ್ಪಷ್ಟಪಡಿಸಿವೆ.