Advertisement
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಆಯೋಜಿಸಿದ್ದ ದೇವರಾಜ ಅರಸರ 106ನೇ ಜನ್ಮದಿನದ ಅಂಗವಾಗಿ ನಗರದ ಎಪಿಎಂಸಿ ಬಳಿಯ ದೇವರಾಜ ಅರಸರ ಪುತ್ಥಳಿಗೆ ಎಂ.ಎಲ್.ಸಿ. ಅಡಗೂರು ಎಚ್.ವಿಶ್ವನಾಥರೊಂದಿಗೆ ಮಾಲಾರ್ಪಣೆ ಗೈದು, ನೂತನವಾಗಿ ನಿರ್ಮಿಸಿರುವ ಗೋಪುರವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಆಧುನಿಕ ಸ್ಪರ್ಶ ನೀಡಿದ ರಾಜೀವಗಾಂಧಿ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರ ಹುಟ್ಟು ಹಬ್ಬವೂ ಇಂದೇ ಆಗಿದ್ದು, ಅವರ ಆಡಳಿತದಲ್ಲಿ ದೇಶಕ್ಕೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ವಿಕೇಂದ್ರೀಕರಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆಂದು ಸ್ಮರಿಸಿದರು.
ಅರಸರ ಹೆಸರೇ ರೋಮಾಂಚನ: ಎಂ.ಎಲ್.ಸಿ.ವಿಶ್ವನಾಥರು ಮಾತನಾಡಿ ನನ್ನ ರಾಜಕೀಯ ಗುರು ದೇವರಾಜ ಅರಸರ ಹೆಸರೇ ಒಂದು ರೋಮಾಂಚನ, ಆವರ ಆಡಳಿತಾವಧಿಯಲ್ಲಿ ಉಳುವವನೇ ಭೂಮಿ ಒಡೆಯ, ಜೀತವಿಮುಕ್ತಿ- ಮಲಹೊರುವ ಪದ್ದತಿ ನಿಷೇಧದಂತಹ ಕ್ರಾಂತಿಕಾರಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದ್ದು, ಇವರ ಆಡಳಿತ ಅಜರಾಮರವಾಗಿದೆ ಎಂದು ಸ್ಮರಿಸಿದರು.
ರಕ್ತಪಾತವಿಲ್ಲದೆ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದ ಮಹಾನ್ ನಾಯಕ, ಇವರ ಅವಧಿಯಲ್ಲಿ ಭೂಮಿ,ನೀರು, ಉದ್ಯೋಗ,ಶಿಕ್ಷಣಕ್ಕೆ ಆಧ್ಯತೆ ನೀಡಿದ್ದಲ್ಲದೆ ಹಾವನೂರು ವರದಿಯನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳ ಜ್ಯೋತಿಯಾಗಿದ್ದಾರೆ. ಅರಸರ ಶತಮಾನೋತ್ಸವವನ್ನು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಹುಟ್ಟಿದ ಊರು ಬೆಟ್ಟದ ತುಂಗ, ಬೆಳೆದ ಹಳ್ಳಿ ಕಲ್ಲಹಳ್ಳಿಯನ್ನು ತಲಾ 10ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು.
ಶಿಕ್ಷಕ ಜೆ.ಮಹದೇವ್ ಅರಸರ ಹೋರಾಟ, ಬದುಕು, ಕಾರ್ಯಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಗಗರಸಭೆ ಉಪಾಧ್ಯಕ್ಷರು, ಅಧಿಕಾರಿಗಳು, ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಮಾಸ್ಕ್ ಧರಿಸದೆ ಸಾಮಾಜಿಕ ಅಂತರವೂ ಕಾಯ್ದುಕೊಳ್ಳದೆ ಭಾಗಿಯಾಗಿದ್ದರೂ ಸಹ ಹಿರಿಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು.
ಕಾರ್ಯಕ್ರಮದಲ್ಲಿ ಎ.ಸಿ.ವರ್ಣಿತ್ ನೇಗಿ, ತಾ.ಪಂ.ಇ.ಓ.ಗಿರೀಶ್, ತಹಸೀಲ್ದಾರ್ ಮೋಹನ್‌ಕುಮಾರ್, ನಗರಸಭೆ ಅಧ್ಯಕ್ಷೆ ಅನುಷಾ, ಉಪಾಧ್ಯಕ್ಷ ದೇವನಾಯ್ಕ ಹಾಗೂ ಸದಸ್ಯರು, ಹುಡಾ ಅಧ್ಯಕ್ಷ ಗಣೇಶಕುಮಾರಸ್ವಾಮಿ, ಹಿಂದುಳಿದವರ್ಗಗಳ ಕಲ್ಯಾಣಾಧಿಕಾರಿ ಸುಜೇಂದ್ರಕುಮಾರ್, ಡಿವೈಎಸ್‌ಪಿ ರವಿಪ್ರಸಾದ್, ಬಿಇಓ ನಾಗರಾಜ್, ಪೌರಾಯುಕ್ತ ರಮೇಶ್,ಎಇಇ ಬೋಜರಾಜ್, ಸಿದ್ದಪ್ಪ, ಕೃಷಿ ಅಧಿಕಾರಿ ವೆಂಕಟೇಶ್, ಮುಖಂಡರಾದ ದೇವರಾಜ್, ನಾರಾಯಣ್, ಕಲ್ಕುಣಿಕೆರಮೇಶ್, ನಾಗರಾಜಮಲ್ಲಾಡಿ, ವಕೀಲ ಶಿವಕುಮಾರ್, ನಿಂಗರಾಜಮಲ್ಲಾಡಿ, ಲೋಕೇಶ್, ರವಿಪ್ರಸನ್ನ, ಗಣಪತಿರಾವ್ ಇಂಡೋಲ್ಕರ್, ಪಾಂಡುಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.