Advertisement
ಹೀಗೆ ಪ್ರತಿಬಾರಿಯಂತೆ ಈ ಬಾರಿಯೂ ಹಳೆಯ ವಿಷಯಗಳೇ ಪ್ರಸ್ತಾಪವಾದರೂ, ಫೆಕ್ಸ್ ಅಳವಡಿಕೆಗೆ ಕಡಿವಾಣ, ಬೀದಿ ನಾಯಿ-ಹಂದಿಗಳ ಹಾವಳಿ ನಿಯಂತ್ರಣಗೊಳಿಸಲು ನಿರ್ಣಯಿಸಿದರು.
Related Articles
Advertisement
ಖಾತಾ ಅದಾಲತ್ ನಡೆಸಿ;ನಗರಸಭೆಯಲ್ಲಿ ನಾಗರೀಕರು ಖಾತೆ ಬದಲಾವಣೆ, ನಮೂನೆ-3 ಸೇರಿದಂತೆ ಯಾವುದೇ ದಾಖಲಾತಿ ಪಡೆದುಕೊಳ್ಳಲು ವರ್ಷಗಟ್ಟಲೆ ಅಧಿಕಾರಿ-ಸಿಬ್ಬಂದಿಗಳು ಅಲೆದಾಡಿಸುತ್ತಾರೆ. ತೆರಿಗೆ ಪಾವತಿಸಲು ಬರುವ ಸಾಮಾನ್ಯರಿಗೂ ಕಿರುಕುಳವಿದೆ. ಸದಸ್ಯರ ಕೆಲಸವು ಆಗುತ್ತಿಲ್ಲ, ಹಳೇ ದಾಖಲೆಗಳನ್ನು ಕೇಳಿ ಸತಾಯಿಸುತ್ತಾರೆ. ನಿಮ್ಮಿಂದಾಗಿ ಜನರು ಶಾಪ ಹಾಕುತ್ತಿದ್ದಾರೆ. ಜನರ ಪಾಲಿಗೆ ನರಕಸಭೆಯಾಗಿದೆ ಎಂದು ಬಿಜೆಪಿ ಸದಸ್ಯ ಗಣೇಶ್‌ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರೆ, ಶರವಣ, ಕೃಷ್ಣರಾಜಗುಪ್ತ, ಸ್ವಾಮಿಗೌಡ, ವಿವೇಕ್, ಹರೀಶ್ ಮತ್ತಿತರ ಸದಸ್ಯರು ಇದು ಸತ್ಯಸಂಗತಿ, ಅಗತ್ಯ ಕ್ರಮವಾಗಬೇಕೆಂದು ಪೌರಯುಕ್ತರನ್ನು ಒತ್ತಾಯಿಸಿದರೆ, ಗುಪ್ತರವರು ಇದಕ್ಕಾಗಿ ಪ್ರತಿ ಮಾಹೆ ಖಾತಾಅದಾಲತ್ ನಡೆಸಿರೆಂಬ ಸಲಹೆಗೆ ಹಾಗೂ ಸ್ವಾಮಿಗೌಡ ಈ ಹಿಂದಿನ ಸಭೆಗಳಲ್ಲಿ ನಿರ್ಣಯಿಸಿದ ಯಾವೊಂದು ಸಲಹೆ, ತೀರ್ಮಾನಗಳು ಅನುಷ್ಟಾನಗೊಳ್ಳುತ್ತಿಲ್ಲ, ಮುಂದೆ ಹೀಗಾಗದಂತೆ ಕ್ರಮವಹಿಸಿರೆಂಬ ಆಗ್ರಹಕ್ಕೆ, ಇಲ್ಲಿ ಸಿಬ್ಬಂದಿಗಳ ಕೊರತೆಇದೆ. ಆದರೂ ಅಗತ್ಯಕ್ರಮ ತೆಗೆದುಕೊಳ್ಳುವುದಾಗಿ ಪೌರಾಯುಕ್ತರು ತಿಳಿಸಿದರು. ಕಳಪೆ ಕಾಮಗಾರಿ ಬಿಲ್ ಸ್ಥಗಿತಕ್ಕೆ ಒತ್ತಾಯ;
ಇತ್ತೀಚೆಗೆ 32ಲಕ್ಷರೂ ವೆಚ್ಚದಡಿ ನಗರದ ಪ್ರಮುಖ ರಸ್ತೆಗಳ ಗುಂಡಿ ಮುಚ್ಚುವಿಕೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಯಾವ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೆ ಇಷ್ಟ ಬಂದ ಹಾಗೆ ಕಳಪೆ ಕಾಮಗಾರಿ ನಡೆಸಿದ್ದಾರೆ. ಗುತ್ತಿಗೆದಾರನಿಗೆ ಬಿಲ್ ಪಾವತಿಸಬಾರದೆಂದು ಕ್ರಷ್ಣರಾಜಗುಪ್ತ ಓತ್ತಾಯಕ್ಕೆ ಬಹುತೇಕ ಸದಸ್ಯರು ಬೆಂಬಲಿಸಿದರು. ಮೂರನೇ ಸಂಸ್ಥೆಯಿಂದ ತನಿಖೆ ನಂತರವಷ್ಟೆ ಸದಸ್ಯರ ಗಮನಕ್ಕೆ ತಂದು ಬಿಲ್ ಪಾವತಿಸಲಾಗುವುದೆಂದು ಪೌರಾಯುಕ್ತರು ಭರವಸೆ ಇತ್ತರು. ಥೀಯೇಟರ್ ಮರುಹರಾಜು ಮಾಡಿ;
ನಗರಸಭೆಯ ಎಸ್‌ಸಿವಿಡಿಎಸ್ ಸಿನಿಮಾ ಥಿಯೇಟರ್ ಬಾಡಿಗೆ ಬಾಕಿ 75ಲಕ್ಷ ಮೀರಿದ್ದು, ಅವರಿಂದ ಬಾಕಿ ವಸೂಲಿಗೆ ಕ್ರಮವಹಿಸಬೇಕೆಂದು ಸದಸ್ಯ ಶರವಣ ಒತ್ತಾಯಕ್ಕೆ, ಎರಡುವರ್ಷಗಳಿಂದ ಥಿಯೇಟರ್ ನಡೆಯುತ್ತಿಲ್ಲಾ, ಕಟ್ಟಡ ಹಾಳಾಗಲಿದ್ದು, ತಕ್ಷಣವೇ ನಗರಸಭೆ ವಶಕ್ಕೆ ಪಡೆದು ಬೇರೆಯವರಿಗೆ ಬಾಡಿಗೆ ನೀಡುವಂತೆ ಸದಸ್ಯರು ಸೂಚನೆಗೆ ಕ್ರಮವಹಿಸುವುದಾಗಿ ಪೌರಾಯುಕ್ತರು ತಿಳಿಸಿದರು. ಮಳಿಗೆಗಳ ಹರಾಜಾಗಿ ಎರಡು ತಿಂಗಳಾಗುತ್ತಿದ್ದರೂ ಇನ್ನೂ ಒಪ್ಪಂದವೇಕೆ ಮಾಡಿಕೊಂಡಿಲ್ಲಾ, ಇದರಿಂದ ಲಕ್ಷಾಂತರರೂ ಆದಾಯ ಖೋತವಾಗುತ್ತಿದೆ ಎಂಬ ಸದಸ್ಯರ ಆರೋಪಕ್ಕೆ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ ಎಂದರು. ಹಂದಿ-ನಾಯಿ ಹಾವಳಿ ತಪ್ಪಸಿ;
ನಗರದಾದ್ಯಂತ ಹಂದಿ-ನಾಯಿಗಳ ಹಾವಳಿ ವಿಪರೀತವಾಗಿ ನಾಗರೀಕರು ತೊಂದರೆ ಅನುಭವಿಸುತ್ತಿದ್ದಾರೆ. ಅಗತ್ಯ ಕ್ರಮವಹಿಸಬೇಕೆಂದು ಸದಸ್ಯರಾದ ಆಂಡಿ, ಸಮೀನಾಬಾನು, ರಾಧ, ಗೀತಾನಿಂಗರಾಜು, ರಾಣಿಪೆರುಮಾಳ್ ಒತ್ತಾಯಕ್ಕೆ ಅಗತ್ಯಕ್ರಮವಹಿಸಲಾಗಿದೆ ಎಂದು ಪೌರಾಯುಕ್ತ ತಿಳಿಸಿದರು. ಪ್ರಿಯಾಂಕಥಾಮಸ್ ಮಳೆಹಾನಿಯಿಂದ ತಿಟ್ಟಿನಲ್ಲಿ ಕೂಲಿ ಕಾರ್ಮಿಕ ನಜೀರ್‌ಷರೀಫ್ ಮನೆ ನೀಡಿಲ್ಲವೆಂಬ ದೂರಿಗೆ ಈ ಬಾರಿಯೇ ಮನೆ ನಿರ್ಮಿಸಿಕೊಡಲಾಗುವುದೆಂಬಭರವಸೆ ಸಿಕ್ಕಿತು. ಚರ್ಚೆಯಲ್ಲಿ ದೇವರಾಜು ಸೇರಿದಂತೆ ಹಲವು ಸದಸ್ಯರು ಭಾಗವಹಿಸಿದ್ದರು.