Advertisement
ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ-275 ರ ಎಪಿಎಂಸಿ ಯಾರ್ಡ್ ಮುಂಬಾಗದಿಂದ ಹಿಡಿದು ಆರ್.ಟಿ.ಓ.ಕಚೇರಿವರೆಗಿನ ಸುಮಾರು 3 ಕಿ.ಮೀ ರಸ್ತೆ ಅಕ್ಕಪಕ್ಕದಲ್ಲಿ ಅಂಗಡಿಗಳು ನಿರ್ಮಿಸಿಕೊಂಡು ಯಾರದೇ ಭಯವೂ ಇಲ್ಲದೆ ವಹಿವಾಟು ನಡೆಸುತ್ತಿದ್ದಾರೆ.
Related Articles
Advertisement
ಕಣ್ಣಿದ್ದೂ ಕುರುಡರಾದ ಅಧಿಕಾರಿಗಳು:ಹಿಂದೆ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿತ್ತು. ವರ್ಷದಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು. ಇತ್ತ ಲೋಕೋಪಯೋಗಿಯವರೂ ಕೇಳುತ್ತಿಲ್ಲ, ಮತ್ತೊಂದೆಡೆ ಹೆದ್ದಾರಿ ಪ್ರಾಧಿಕಾರವೂ ಇತ್ತ ತಿರುಗಿ ನೋಡಿಲ್ಲ, ಇನ್ನು ನಗರಸಭೆ ವ್ಯಾಪ್ತಿಯ ಹೆದ್ದಾರಿಯನ್ನು ಅತಿಕ್ರಮಣ ಮಾಡಿಕೊಂಡು ಅಂಗಡಿ ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿರುವ ಬಗ್ಗೆ ಹಾಗೂ ಎಂ. ಸ್ಯಾಂಡ್ ಸುರಿದು ವಹಿವಾಟು ನಡೆಸುತ್ತಿರುವ ಬಗ್ಗೆ ಪೊಲೀಸರು-ನಗರಸಭೆ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತಾಗಿದ್ದು, ಇಲ್ಲಿ ಹೇಳುವವರು-ಕೇಳುವವರು ಇಲ್ಲದಂತಾಗಿದೆ. ಯಾರಿಗೆ ದೂರು ನೀಡಬೇಕೆಂಬ ಜಿಜ್ಞಾಸೆ ಈ ರಸ್ತೆಯನ್ನು ಅವಲಂಬಿಸಿರುವ ವಾಹನ ಸವಾರರು, ಸಾರ್ವಜನಿಕರನ್ನು ಕಾಡುತ್ತಿದೆ. ಒತ್ತುವರಿ ತೆರವಾಗಲಿ:
ನಗರದ ಪ್ರಮುಖ ರಸ್ತೆಗಳು ಒತ್ತುವರಿಯಾಗಿವೆ, ಒತ್ತುವರಿ ತೆರವಿರಲಿ ಕನಿಷ್ಟ ಸುಗಮ ಸಂಚಾರಕ್ಕೂ ನಗರದೊಳಗೂ, ಹೊರಗೂ ಅವಕಾಶವೇ ಇಲ್ಲದಂತಾಗಿದೆ. ಆಡಳಿತವಂತೂ ಹಳ್ಳ ಹಿಡಿದಿದೆ. ಬೈಪಾಸ್ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವವರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು, ಎಂ.ಸ್ಯಾಂಡ್ ಮಾರಾಟಕ್ಕೆ ಎಪಿಎಂಸಿ ಆವರಣದೊಳಗೆ ಪ್ರತ್ರೇಕ ವ್ಯವಸ್ಥೆ ಕಲ್ಪಿಸಬೇಕು.
– ಪುರುಷೋತ್ತಮ್, ಕರವೆ ತಾಲೂಕು ಅಧ್ಯಕ್ಷ, ಹುಣಸೂರು. ಈಗಾಗಲೆ ಬೈಪಾಸ್ ರಸ್ತೆಯಲ್ಲಿ ಅಂಗಡಿ ನಿರ್ಮಿಸಿಕೊಂಡಿರುವವರಿಗೆ ಎಚ್ಚರಿಕೆ ನೀಡಲಾಗಿದ್ದು, ತೆರವುಗೊಳಿಸದಿದ್ದಲ್ಲಿ ಶೀಘ್ರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು.
– ರವಿಕುಮಾರ್,ಪೌರಾಯುಕ್ತ.ನಗರಸಭೆ. – ಸಂಪತ್ ಕುಮಾರ್, ಹುಣಸೂರು.