Advertisement
ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಹಾಕಿಕೊಂಡು ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತಿದೆ. ಅದರಂತೆ ಕಾಮಗಾರಿ ಕೂಡ ಚುರುಕಾಗಿ ನಡೆಯುತ್ತಿದೆ. ಹುಣಸಗಿ ತಾಲೂಕು ಮಾಳನೂರು ಗ್ರಾಪಂ ವ್ಯಾಪ್ತಿಯಲ್ಲಿ 1100 ಉದ್ಯೋಗ ಚೀಟಿಗಳಿವೆ. ಒಟ್ಟು 150 ಕಾಮಗಾರಿ ಅನುಮೋದಿಸಲಾಗಿದೆ. ಇವುಗಳ ಪೈಕಿ 100ಕ್ಕೂ ಹೆಚ್ಚು ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿಯಲ್ಲಿ ನಮ್ಮ ಹೊಲ ನಮ್ಮದಾರಿ, ಕೆರೆ ಹೂಳು, ಬದು ನಿರ್ಮಾಣ, ಕೃಷಿ ಹೊಂಡ ತೆಗೆಯುವುದು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಜೋರಾಗಿ ನಡೆಯುತ್ತಿದೆ. ಮಹಿಳೆಯರು ಮತ್ತು ಪುರುಷರಿಗೆ ಸಮನಾಗಿ 275 ರೂ. ಕೂಲಿ ನೀಡಲಾಗುತ್ತಿದೆ. ವಾರಕೊಮ್ಮೆ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಸುರಕ್ಷತೆಗಾಗಿ ಎಲ್ಲರಿಗೂ ಮಾಸ್ಕ್ ಹಾಗೂ ಸಾನಿಟೈಜರ್ ವಿತರಿಸಲಾಗಿದೆ. ಅಗತ್ಯ ಬಿದ್ದರೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಮಲ್ಲನಗೌಡ ಹುಣಸಗಿ,
ಅಭಿವೃದ್ಧಿ ಅಧಿಕಾರಿ ಮಾಳನೂರು ಗ್ರಾಪಂ