Advertisement
ಸೇತುವೆಯಿಲ್ಲದೆ ಸ್ಥಳೀಯರು ಅನುಭವಿಸುವ ಸಂಕಷ್ಟದ ಕುರಿತು “ಉದಯವಾಣಿ’ ವರದಿ ಪ್ರಕಟಿಸಿತ್ತು.
Related Articles
ಹುಲ್ಕಡಿಕೆಯಲ್ಲಿ ಸೇತುವೆಯಿಲ್ಲದೆ ಅಲ್ಲಿನ ಸುರೇಶ್ ಅವರ ಮರಾಠಿ ನಾಯ್ಕ ಕುಟುಂಬವೊಂದು ವಿಶೇಷ ಚೇತನ ಮಕ್ಕಳಿಬ್ಬರನ್ನು ತುಂಬಿ ಹರಿಯುವ ಹೊಳೆಯಲ್ಲಿ ಹೆಗಲ ಮೇಲೆ ಎತ್ತಿಕೊಂಡೇ ಬರಬೇಕಿದ್ದು, ಅಲ್ಲಿಂದ 7 ಕಿ.ಮೀ. ದೂರದವರೆಗೆ ದ್ವಿಚಕ್ರ ವಾಹನದಲ್ಲಿ ಕಷ್ಟಪಟ್ಟು ಕರೆದೊಯ್ಯಬೇಕು ಅನ್ನುವ ಕುರಿತಾದ ವಿಶೇಷ ವರದಿಯನ್ನು “ಉದಯವಾಣಿ’ಯು ಜು.3ರಂದು ಮುಖಪುಟದಲ್ಲಿ ಪ್ರಕಟಿಸಿತ್ತು.
Advertisement
ಆ ವರದಿಗೆ ಸ್ಪಂದಿಸಿದ ಬೈಂದೂರು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಗಳು, ಭೇಟಿ ನೀಡಿ, ಸರಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದ್ದಾರೆ. ಶಾಸಕ ಗುರುರಾಜ್ ಗಂಟಿಹೊಳೆ ಅವರು ಮಂಗಳವಾರವೇ ಅಲ್ಲಿಗೆ ಭೇಟಿ ನೀಡಿ, ಅಗತ್ಯ ನೆರವು ನೀಡುವ ಭರವಸೆ ನೀಡಿದ್ದರು. ಇಲ್ಲಿ ಈ ಕುಟುಂಬ ಮಾತ್ರವಲ್ಲ 10ಕ್ಕೂ ಮಿಕ್ಕಿ ಮನೆಯವರು ಸೇತುವೆಯಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.