ಮುಂಬಯಿ: ದೇಶೀಯ ಕ್ರಿಕೆಟ್ ವಿಜೇತರ ಬಹುಮಾನ ಮೊತ್ತ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಹತ್ವದ ಘೋಷಣೆ ಮಾಡಿದ್ದಾರೆ. ಇದುವರೆಗೆ ರಣಜಿ ವಿಜೇತ ತಂಡಕ್ಕೆ 2 ಕೋಟಿ ರೂ. ನಗದು ಬಹುಮಾನವಿತ್ತು. ಇನ್ನು ಮುಂದೆ ಅದು 5 ಕೋಟಿ ರೂ.ಗೆ ಏರಲಿದೆ.
Advertisement
ರನ್ನರ್ ಅಪ್ ತಂಡ 1 ಕೋಟಿ ರೂ. ಬದಲು 3 ಕೋಟಿ ರೂ. ಪಡೆಯಲಿದೆ. ಇಲ್ಲಿಯವರೆಗೆ ಸೆಮಿಫೈನಲ್‌ನಲ್ಲಿ ಸೋತ ತಂಡಗಳು ತಲಾ 50 ಲಕ್ಷ ರೂ. ಪಡೆಯುತ್ತಿದ್ದವು. ಇನ್ನು ಮುಂದೆ 1 ಕೋಟಿ ರೂ. ಪಡೆಯಲಿವೆ. ರಾಷ್ಟ್ರೀಯ ಮಹಿಳಾ ಏಕದಿನ ಪ್ರಶಸ್ತಿ ಗೆದ್ದ ತಂಡ ಇಲ್ಲಿಯವರೆಗೆ ಕೇವಲ 6 ಲಕ್ಷ ರೂ. ಪಡೆಯುತ್ತಿತ್ತು. ಈಗದು 50 ಲಕ್ಷ ರೂ.ಗೆ ಏರಿಕೆಯಾಗಿದೆ.