ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಸಂಸತ್ ಭವನದಲ್ಲಿ ಭಾನುವಾರ(ಜನವರಿ 02) ಸಂಭವಿಸಿದ ಭಾರೀ ಅಗ್ನಿ ಅನಾಹುತದಿಂದಾಗಿ ಇಡೀ ಸಂಸತ್ ಭವನವೇ ನಾಶವಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಪಾಕ್ ಆಲ್ ರೌಂಡರ್ ಮೊಹಮ್ಮದ್ ಹಫೀಜ್
ಕೇಪ್ ಟೌನ್ ನಲ್ಲಿರುವ ಸಂಸತ್ ಭವನದೊಳಗೆ ಸಂಸದರು ಕುಳಿತುಕೊಳ್ಳುವ ಇಡೀ ಚೇಂಬರ್ ಸುಟ್ಟು ಕರಕಲಾಗಿದ್ದು, ರಾತ್ರಿಯವರೆಗೂ ಬೆಂಕಿ ನಿಯಂತ್ರಣಕ್ಕೆ ಬಂದಿರಲಿಲ್ಲ ಎಂದು ನ್ಯಾಷನಲ್ ಅಸೆಂಬ್ಲಿ ವಕ್ತಾರರು ತಿಳಿಸಿದ್ದಾರೆ.
ಬೆಂಕಿಯಿಂದಾಗಿ ಸಂಸತ್ ಹಳೆಯ ಕಟ್ಟಡ ಕುಸಿದು ಬಿದ್ದು ನಾಶವಾಗಿದೆ ಎಂದು ಕೇಪ್ ಟೌನ್ ನ ಮೇಯರಲ್ ಸಮಿತಿಯ ಸದಸ್ಯ ಜೀನ್ ಪಿರ್ರೆ ಸ್ಮಿತ್ ಸುದ್ದಿಗಾರರ ಜತೆ ಮಾತನಾಡುತ್ತ ಮಾಹಿತಿ ನೀಡಿದ್ದಾರೆ.
ಸಂಸತ್ ಭವನಕ್ಕೆ ಹೇಗೆ ಬೆಂಕಿ ಹೊತ್ತಿಕೊಂಡಿತ್ತು ಎಂಬ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಹಳೆಯ ಅಸೆಂಬ್ಲಿ ಕಟ್ಟಡದಲ್ಲಿ ಅಪರೂಪದ ಕೃತಿಗಳಿದ್ದವು, ಅಷ್ಟೇ ಅಲ್ಲ ದ ವೈಸ್ ಆಫ್ ಸೌತ್ ಆಫ್ರಿಕಾ ಎಂಬ ರಾಷ್ಟ್ರಗೀತೆಯ ಮೂಲ ಪ್ರತಿ ಕೂಡಾ ಭಾಗಶಃ ಹಾನಿಗೊಂಡಿದೆ ಎಂದು ವರದಿ ವಿವರಿಸಿದೆ.