Advertisement

ಅ.3 ಮತ್ತು 4: ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಬೃಹತ್‌ ಇ-ಶ್ರಮ ಯೋಜನೆ ನೋಂದಣಿ ಅಭಿಯಾನ

01:45 PM Oct 02, 2021 | Team Udayavani |

ಉಡುಪಿ: ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನದ ಪ್ರಯುಕ್ತ ಅ. 2ರ ಬೆಳಗ್ಗೆ 9.30ರಿಂದ ಸಂಜೆ 5ರ ತನಕ ಕೇಂದ್ರ ಸರಕಾರದ ಇ-ಶ್ರಮ ಯೋಜನೆ ನೋಂದಣಿ ಅಭಿಯಾನವು ಸಿಟಿ ಬಸ್‌ನಿಲ್ದಾಣದಲ್ಲಿ ನಡೆಯಲಿದೆ.

Advertisement

ಅಸಂಘಟಿತ ಕಾರ್ಮಿಕರ ಕಾರ್ಡ್‌ ನೋಂದಣಿಗೆ ಸಣ್ಣ ಮತ್ತು ಕನಿಷ್ಠ ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ಪಶು ಸಾಕಾಣಿಕೆದಾರರು, ಬೀಡಿ ತಯಾರಕರು, ಚರ್ಮದ ಕೆಲಸಗಾರರು, ನೇಕಾರರು, ಅಟೋ ಚಾಲಕರು, ಗೃಹ ಸೇವಕರು, ರೇಷ್ಮೆ ಕೃಷಿ ಕಾರ್ಮಿಕರು, ಕೆಲಸಗಾರರು, ಆಶಾ  ಕಾರ್ಯಕರ್ತೆಯರು, ಹಾಲು ಹಾಕುವವರು, ಇಟ್ಟಿಗೆ ತಯಾರಕರು, ಕಲ್ಲು ಕೋರೆ ಕೆಲಸಗಾರರು, ಗೃಹ ಕಾರ್ಮಿಕರು, ಕ್ಷೌರಿಕರು, ಗರಗಸ ಕಾರ್ಖಾನೆ ಕೆಲಸಗಾರರು, ತರಕಾರಿ/ಹಣ್ಣು ಮಾರಾಟಗಾರರು, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು, ಸುದ್ದಿ ಪತ್ರಿಕೆ ಮಾರಾಟಗಾರರು, ರಿಕ್ಷಾ ಚಾಲಕರು, ರೈತರು, ವಲಸೆ ಕಾರ್ಮಿಕರು, ಟ್ಯಾನರಿ ಕೆಲಸಗಾರರು, ಬೀದಿ ವ್ಯಾಪಾರಿಗಳು ಅರ್ಹರಾಗಿದ್ದಾರೆ.

ನೋಂದಣಿ ಉಚಿತವಾಗಿ ಇರಲಿದ್ದು, ಈ ಕಾರ್ಡ್‌ ಜೀವಿತಾವಧಿವರೆಗೆ ಮಾನ್ಯವಿರುತ್ತದೆ. ಡೇಟಾಬೇಸ್‌ ಆಧಾರದ ಮೇಲೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸರಕಾರ ಜಾರಿಗೊಳಿಸುತ್ತದೆ. ಪಿಎಂ ಸುರಕ್ಷಾ ಬಿಎಂ ಯೋಜನೆ ಲಭಿಸಲಿದೆ. ಹೊಸ ನೋಂದಾಯಿತ ಕಾರ್ಮಿಕರ ಪಿಎಂ ಸುರಕ್ಷಾ ಭೀಮಾ ಯೋಜನೆಯನ್ನು ತೆಗೆದುಕೊಳ್ಳಬಹುದು. ಪಿಎಂ ಸುರಕ್ಷಾ ಪ್ರೀಮಿಯಂ 12 ರೂ.ಯನ್ನು 1 ವರ್ಷದ ವರೆಗೆ ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಫ‌ಲಾನುಭವಿಗಳು ಮೊಬೈಲ್‌ ಅನ್ನು ಕಡ್ಡಾಯವಾಗಿ ತರಬೇಕು ಎಂದು ಉಡುಪಿ ನಗರ ಬಿಜೆಪಿ ಪ್ರಕಟನೆ ತಿಳಿಸಿದೆ.

ಇ-ಶ್ರಮ ಯೋಜನೆಯ ಪ್ರಯೋಜನಗಳು

ಉಚಿತವಾಗಿ ನೋಂದಣಿ ಹಾಗೂ ಈ ಕಾರ್ಡ್‌ ಜೀವಿತಾವಾಧಿಯವರೆಗೆ ಮಾನ್ಯವಿರುತ್ತದೆ. ಈ ಡೇಟಾ ಬೇಸ್‌ ಆಧಾರದ ಮೇಲೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸರಕಾರ ಜಾರಿಗೊಳಿಸುತ್ತದೆ.

Advertisement

ಪಿಎಂ ಸುರಕ್ಷಾ ಭೀಮಾ ಯೋಜನೆ:
ಹೊಸ ನೋಂದಾಯಿತ ಕಾರ್ಮಿಕರು ಪಿಎಂ ಸುರಕ್ಷಾ ಬೀಮಾ ಯೋಜನೆಯನ್ನು ತೆಗೆದುಕೊಳ್ಳಬಹುದು. ಪಿಎಂ ಸುರಕ್ಷಾ ಪ್ರೀಮಿಯಂರೂ.12ನ್ನು 1ವರ್ಷದ ವರೆಗೆ ಉಚಿತವಾಗಿ ನೀಡಲಾಗುತ್ತದೆ.

ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ:

ಆಧಾರ್‌ ಕಾರ್ಡ್‌ (ಮೊಬೈಲ್‌ ಸಂಖ್ಯೆ ಜೋಡಣೆಯಾಗಿರಬೇಕು)
ಬ್ಯಾಂಕ್‌ ಪಾಸ್‌ಬುಕ್‌
ಮೊಬೈಲ್‌ ಕಡ್ಡಾಯವಾಗಿ ಫ‌ಲಾನುಭವಿ ತರತಕ್ಕದ್ದು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ನಾಗರಾಜ ಶೇಟ್‌, ವಕ್ತಾರರು ಸಾಮಾನ್ಯ ಸೇವಾ ಕೇಂದ್ರ:8722369673

ಸುರೇಶ್‌ ಅಮೀನ್‌:9686400362

ನಿತ್ಯಾನಂದ: 9342112619,

ಸತೀಶ್‌ ಪ್ರಸ್‌:8277406272

ರವೀಂದ್ರ:9449615336

ಶ್ಯಾಮ:7353068588

ಹರೀಶ್‌:9880161214

ಪ್ರಶಾಂತ್‌:8749006725

ಕೇಶವ:9008514158

ಪ್ರಕಾಶ್‌ ಹೊಸಬೀಡು:8050476220

ಇ-ಶ್ರಮ ನೋಂದಣಿ ಅಭಿಯಾನವು ಅ. 3 ಮತ್ತು 4ರಂದು ಬೆಳಗ್ಗೆ 9ರಿಂದ ಸಂಜೆ 5ರ ತನಕ ಉಡುಪಿ ನಗರ ಬಿಜೆಪಿ ಕಚೇರಿಯಲ್ಲಿಯೂ ನಡೆಯಲಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next