ಮುಂಬೈ: ಬಾಲಿವುಡ್ ಎವರ್‌ಗ್ರೀನ್ ಸುಂದರಿ ಶಿಲ್ಪಾ ಶೆಟ್ಟಿ ಕುಂದ್ರಾ ಶನಿವಾರ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅದರಲ್ಲಿ ವಿಶೇಷವೇನೆಂದರೆ, ಅವರ ಪತಿ ರಾಜ್ ಕುಂದ್ರಾ ಅವರು ಅತ್ಯಂತ ಸುಂದರ ಕೇಕ್‌ವೊಂದರ ಮೂಲಕ ಶಿಲ್ಪಾರ ಹುಟ್ಟುಹಬ್ಬವನ್ನು ಆಚರಿಸಿದ್ದು. ಈ ಕೇಕ್ “ಸೂಪರ್ ಸೆ ಊಪರ್’ ಕೇಕ್ ಎಂದು ಕರೆಸಿಕೊಂಡಿದೆ.
ಏಕೆಂದರೆ, ಈ ಆಕರ್ಷಕ ಕೇಕ್ ಮೇಲೆ ಶಿಲ್ಪಾ ಅವರ ಪುಟ್ಟ ಪ್ರತಿಮೆಯನ್ನು ನಿಲ್ಲಿಸಲಾಗಿತ್ತು. ಜೊತೆಗೆ “ಟು ದ ಸೂಪರ್ ಸೆ ಊಪರ್, ಡಾಟರ್, ಸಿಸ್ಟರ್, ವೈಫ್ ಆ್ಯಂಡ್ ಮಮ್’ ಎಂದು ಬರೆಯ ಲಾಗಿತ್ತು.
ರಿಯಾಲಿಟಿ ಕಾರ್ಯಕ್ರಮವೊಂದರ ತೀರ್ಪುಗಾರರಾಗಿರುವ ಶಿಲ್ಪಾ ಉತ್ತಮ ಪ್ರದರ್ಶನಗಳನ್ನು ನೋಡಿದೊಡನೆ, “ಸೂಪರ್ ಸೆ ಊಪರ್’ ಎಂದು ಪ್ರಶಂಸಿಸುತ್ತಾರೆ. ಅವರ ಈ ಪದ ಪ್ರಯೋಗ ಭಾರೀ ಜನಪ್ರಿಯತೆ ಪಡೆದಿರುವಾಗಲೇ, ಪತಿ ರಾಜ್‌ಕುಂದ್ರಾ ಅವರು ಪತ್ನಿಗೆ ಅದೇ ಪದ
ಪ್ರಯೋಗಿಸಿ ಹುಟ್ಟುಹಬ್ಬದ ಸರ್‌ಪ್ರೈಸ್ ಕೊಟ್ಟಿರುವುದು ವಿಶೇಷ.