ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಕೈಗೊಂಡಕ್ರಮ ರಾಜಕೀಯ ಪಕ್ಷಗಳನ್ನು ನಿದ್ದೆಗೆಡುವಂತೆ ಮಾಡಿದೆ.ಚುನಾವಣೆ ನಡೆಯುವುದು ಅನುಮಾನ ಎಂಬ ಚಿಂತನೆಯಲ್ಲೇ ಇದ್ದ ರಾಜಕೀಯ ಪಕ್ಷಗಳಿಗೆ ಚುನಾವಣೆ ಘೋಷಣೆ ದಿಢೀರ್ ಯುದ್ಧ ತಯಾರಿ ಸನ್ನಿವೇಶಸೃಷ್ಟಿಸುವಂತೆ ಮಾಡಿದೆ.
ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳನ್ನುಗುರುತಿಸುವುದು, ಭಿನ್ನಮತ, ಬಂಡಾಯ ಶಮನ, ಪಕ್ಷದಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ, ಅಭ್ಯರ್ಥಿಗಳಿಗೆಬಿ ಫಾರಂ ನೀಡಿಕೆ, ಪ್ರಚಾರಕ್ಕಾಗಿ ಕರಪತ್ರ ಮುದ್ರಣ,ಸಭೆಗಳ ಆಯೋಜನೆ ಹೀಗೆ ವಿವಿಧ ಕಾರ್ಯಗಳನ್ನುಮಾಡಬೇಕಾಗಿದೆ. ಆದರೆ ಇದಾವುದಕ್ಕೂ ಪುರುಸೊತ್ತುಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.
ಅಧಿಕಾರಿಗಳುಸಹ ಯುದೊœàಪಾದಿಯಲ್ಲಿ ಚುನಾವಣೆ ಕಾರ್ಯಕ್ಕೆಸಜ್ಜಾಗಬೇಕಾಗಿದೆ.ಯಾರದ್ದು ಸ್ಪಷ್ಟ ತಯಾರಿ ಇಲ್ಲ: ಪಾಲಿಕೆ ಚುನಾವಣೆಆಗಬೇಕು ಎಂಬ ಒತ್ತಡ ಎಲ್ಲ ರಾಜಕೀಯ ಪಕ್ಷಗಳದ್ದುಇತ್ತಾದರೂ, ವಾರ್ಡ್ ಪುನರ್ ವಿಂಗಡಣೆ, ಮೀಸಲುಜಾರಿ, ಆಕ್ಷೇಪ, ಕೋರ್ಟ್ ಮೊರೆ, ಕೋವಿಡ್‌ಕಾರಣದಿಂದ ಚುನಾವಣೆ ಮುಂದೂಡಿಕೆಯ ಸರಕಾರದನಿರ್ಧಾರದಂತಹ ಕಾರಣದಿಂದ ಪ್ರಮುಖ ರಾಜಕೀಯಪಕ್ಷಗಳು ಅನುಮಾನದಲ್ಲೇ ಇದ್ದವು.
ಧುತ್ತೆಂದುಚುನಾವಣೆ ಬಂದಿರುವುದು ಒಂದು ರೀತಿಯ ಶಾಕ್‌ನೀಡಿದ್ದರೆ, ಇದಕ್ಕಿಂತ ದೊಡ್ಡ ಶಾಕ್ ಎಂದರೆ ಚುನಾವಣೆಪ್ರಕ್ರಿಯೆಯಲ್ಲಿ ಪ್ರಚಾರಕ್ಕೂ ಅವಕಾಶ ಹೆಚ್ಚಿನ ಅವಕಾಶಇಲ್ಲದ ರೀತಿಯಲ್ಲಿ ವೇಳಾಪಟ್ಟಿ ಇರುವುದು ರಾಜಕೀಯಪಕ್ಷಗಳನ್ನು ಚಿಂತೆಗೀಡು ಮಾಡಿದೆ.ಗ್ರಾಪಂನಿಂದ ಹಿಡಿದು, ಲೋಕಸಭೆ ವರೆಗೆ ಯಾವುದೇಸ್ವರೂಪದ ಚುನಾವಣೆ ಇದ್ದರೂ, ಚುನಾವಣೆ ತಯಾರಿ,ಪ್ರಚಾರದಲ್ಲಿ ಬಿಜೆಪಿ ಸದಾ ಮುಂದೆ ಇರುತ್ತದೆ. ಆದರೆ,ಪಾಲಿಕೆ ಚುನಾವಣೆ ಗಮನಿಸಿದರೆ ಚುನಾವಣೆಗೆ ಪೂರ್ಣಪ್ರಮಾಣದ ತಯಾರಿಯನ್ನು ಬಿಜೆಪಿ ಸಹ ಕೈಗೊಂಡಿಲ್ಲಎಂದೆನಿಸುತ್ತಿದೆ.
ಇನ್ನು ಕಾಂಗ್ರೆಸ್ ಪಕ್ಷ ಪಾಲಿಕೆಚುನಾವಣೆಗೆಂದೇ ಮಾಡಿದ ಸಭೆಗಳು, ತಯಾರಿ ಇನ್ನುಕಡಿಮೆ ಎನ್ನಬಹುದು. ಜೆಡಿಎಸ್ ಎರಡು ಸಭೆ ನಡೆಸಿದ್ದುಬಿಟ್ಟರೆ ಹೆಚ್ಚಿನ ತಯಾರಿ ಕೈಗೊಂಡಿಲ್ಲ.ಇದೇ ಮೊದಲ ಬಾರಿಗೆ ಹು-ಧಾ ಮಹಾನಗರಪಾಲಿಕೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಆಮ್ ಆದ್ಮಿ ಪಕ್ಷ ಕೆಲ ತಿಂಗಳುಗಳಿಂದ ಅಭ್ಯರ್ಥಿಗಳ ಮಾಹಿತಿ ಸಂಗ್ರಹ, ವಾರ್ಡ್ ಕಚೇರಿಗಳ ಉದ್ಘಾಟನೆ,ಜನರ ಸಮಸ್ಯೆ ಆಲಿಸುವಿಕೆ, ಆಕಾಂಕ್ಷಿಗಳು, ಪಕ್ಷದಪ್ರಮುಖರೊಂದಿಗೆ ಸಂವಾದದಂತಹ ಕಾರ್ಯಗಳನ್ನುಕೈಗೊಂಡಿದ್ದರೂ ಆ ಪಕ್ಷದಲ್ಲೂ ಪೂರ್ಣ ತಯಾರಿ,ಅಭ್ಯರ್ಥಿಗಳ ಪಟ್ಟಿ ಅಖೈರು ಪೂರ್ಣ ಪ್ರಮಾಣದಲ್ಲಿಆದಂತಿಲ್ಲ.
ಎಐಎಂಐ ಪಕ್ಷ ಸಹ ಪಾಲಿಕೆ ಚುನಾವಣೆಗೆ ಧುಮುಕುವ ತವಕದಲ್ಲಿದ್ದು, ಅಲ್ಲಿಯೂ ಪೂರ್ಣಪ್ರಮಾಣದ ತಯಾರಿಕೆ ಕೊರತೆ ಕಾಣುತ್ತಿದೆ.ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಎಲ್ಲ 82 ವಾರ್ಡ್‌ಗಳಿಗೆ ಸ್ಪರ್ಧಿಸುವ ನಿಟ್ಟಿನಲ್ಲಿ ತಮ್ಮದೇಕಾರ್ಯತಂತ್ರಕ್ಕೆ ಮುಂದಾಗಿವೆ. ಜತೆಗೆ ಆಮ್ ಆದ್ಮಿಪಕ್ಷ ಸಹ ಎಲ್ಲ ವಾರ್ಡ್‌ಗಳಿಗೆ ಸ್ಪರ್ಧಿಸುವ ಇಂಗಿತವ್ಯಕ್ತಪಡಿಸಿದೆಯಾದರೂ, ಸಂಘಟನೆ ಆ ಮಟ್ಟಕ್ಕೆಗಟ್ಟಿಯಾಗಿದೆಯೇ, ಎಲ್ಲ ಕಡೆಗೂ ಪಕ್ಷದ ಅಸ್ತಿತ್ವನೆಲೆಗೊಂಡಿದೆಯೇ ಎಂಬುದು ಸ್ಪಷ್ಟವಾಗಬೇಕಾಗಿದೆ.ಅದೇ ರೀತಿ ಜೆಡಿಎಸ್ ಎಲ್ಲ ವಾರ್ಡ್‌ಗಳಿಗೆಸ್ಪರ್ಧಿಸುವುದಾಗಿ ತಿಳಿಸಿದೆಯಾದರೂ, ಎಲ್ಲ ಕಡೆಗೂಅಭ್ಯರ್ಥಿಗಳ ಗುರುತಿಸುವಿಕೆ, ಕಾರ್ಯಕರ್ತರ ಪಡೆಇದೆಯೇ ಎಂಬ ಪ್ರಶ್ನೆಗೆ ಆ ಪಕ್ಷದ ನಾಯಕರೇಉತ್ತರಿಸಬೇಕಾಗಿದೆ. ಉಳಿದ ಪಕ್ಷಗಳು ಎಷ್ಟುವಾರ್ಡ್‌ಗಳಿಗೆ ಸ್ಪರ್ಧಿಸಲಿವೆ ಎಂಬುದನ್ನು ಕಾದುನೋಡಬೇಕಾಗಿದೆ.
ಅಮರೇಗೌಡ ಗೋನವಾರ