Advertisement

Hubballi: ಜ.15ರಿಂದ ವರೂರು ನವಗ್ರಹ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ: ಡಾ| ಹೆಗ್ಗಡೆ

01:10 AM Sep 04, 2024 | Team Udayavani |

ಹುಬ್ಬಳ್ಳಿ: ನಗರದ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮಹಾಮಸ್ತಕಾಭಿಷೇಕ ಹಾಗೂ 405 ಅಡಿ ಎತ್ತರದ ಸುಮೇರು ಪರ್ವತ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವವನ್ನು ಜನವರಿ 15ರಿಂದ 26ರ ವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಹಾಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.

Advertisement

ನವಗ್ರಹ ತೀರ್ಥಕ್ಷೇತ್ರದಲ್ಲಿ ಮಂಗಳವಾರ ನಡೆದ ಸ್ವಾಗತ ಸಮಿತಿ ಪದಾಧಿಕಾರಿಗಳು-ಪ್ರಮುಖರ ಸಭೆ ಹಾಗೂ ಮಹಾಮಸ್ತಕಾಭಿಷೇಕ ಮುಹೂರ್ತ ಉದ್ಘೋಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶ್ರವಣಬೆಳಗೊಳ, ಧರ್ಮಸ್ಥಳದಲ್ಲಿ ಸಾಕಷ್ಟು ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳನ್ನು ನನ್ನ ಅಧ್ಯಕ್ಷತೆಯಲ್ಲಿ ಮಾಡಿದ್ದೇನೆ. ಆದರೆ ವರೂರು ನವಗ್ರಹ ತೀರ್ಥಂಕರರ ಮಹಾಮಸ್ತಕಾಭಿಷೇಕವು ಅತ್ಯಂತ ವಿಶಿಷ್ಟ ಮತ್ತು ಬೃಹತ್‌ ಮಟ್ಟದಲ್ಲಿ ನಡೆಯುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದರು.

27 ಪದಾರ್ಥಗಳಿಂದ ಮಜ್ಜನ
ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಮಾತನಾಡಿ, ನವ ತೀರ್ಥಂಕರರ ಮಹಾ
ಮಜ್ಜನವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿ ಸಲು ನಿರ್ಧರಿಸಲಾಗಿದೆ. 27 ಪದಾರ್ಥಗಳಿಂದ ಮಹಾಮಸ್ತಕಾ ಭಿಷೇಕ ನಡೆಯಲಿದ್ದು, 200 ಪಂಡಿತರು ನೆರವೇರಿಸಲಿದ್ದಾರೆ. ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮಹಾಮಜ್ಜನವನ್ನು ಲೇಸರ್‌ ಶೋ ಮೂಲಕ ಪ್ರದರ್ಶಿಸಲಾಗುವುದು ಎಂದರು.

ದಸರಾ ಮಾದರಿಯಲ್ಲಿ ಬೃಹತ್‌ ಮೆರವಣಿಗೆ ಆಯೋಜಿಸಲಾಗುತ್ತಿದ್ದು, 24 ಕುದುರೆ, ರಥ, 9 ಆನೆ, 9 ಜಾಂಜ್‌ಪಥ ಒಳಗೊಂಡು ನಾನಾ ಪ್ರಕಾರ ಗಳು ಪಾಲ್ಗೊಳ್ಳಲಿವೆ. ಕೊನೆಯ ದಿನ 3,333 ಶ್ರಾವಕ-ಶ್ರಾವಕಿಯರಿಂದ ಮಹಾಅರ್ಚನೆ ನಡೆಯಲಿದೆ ಎಂದರು. ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next