Advertisement

ಚಂದ್ರಯಾನ 3: ಮತ್ತೊಂದು ಯಶಸ್ವಿ ಹೆಜ್ಜೆ… ಭೂಮಿಯ ಕಕ್ಷೆ ತೊರೆದು ಚಂದಿರನ ಅಂಗಳಕ್ಕೆ ಪಯಣ

01:01 PM Aug 01, 2023 | Team Udayavani |

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮಂಗಳವಾರ ಚಂದ್ರಯಾನ – 3 ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್‌ಲೂನಾರ್ ಕಕ್ಷೆಗೆ ಸೇರಿಸಿದೆ. “ಚಂದ್ರಯಾನ-3 ಭೂಮಿಯ ಸುತ್ತಲಿನ ತನ್ನ ಕಕ್ಷೆಯನ್ನು ಪೂರ್ಣಗೊಳಿಸಿ ಚಂದ್ರನ ಕಡೆಗೆ ಪಯಣ ಬೆಳೆಸಿದೆ ಎಂದು ಇಸ್ರೋ ತಿಳಿಸಿದೆ.

Advertisement

ಇದರೊಂದಿಗೆ ಚಂದ್ರಯಾನ-3 ತನ್ನ 3.8 ಲಕ್ಷ ಕಿಮೀ ಉದ್ದದ ಚಂದ್ರನಲ್ಲಿನ ಪ್ರಯಾಣವನ್ನು ಆರಂಭಿಸಿದ್ದು. ಆಗಸ್ಟ್ 5 ಮುಖ್ಯ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಪೆರಿಜಿ ಫೈರಿಂಗ್ ಅನ್ನು ಯಶಸ್ವಿಯಾಗಿ ಮಾಡಲಾಯಿತು. ಅದರ ನಂತರ ಬಾಹ್ಯಾಕಾಶ ನೌಕೆಯು ಚಂದ್ರನತ್ತ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಬಾಹ್ಯಾಕಾಶ ನೌಕೆಯ ಮುಂದಿನ ನಿಲುಗಡೆ ಕೇಂದ್ರ ಚಂದ್ರನ ಕಕ್ಷೆಯಾಗಿದ್ದು. ಇದು ಚಂದ್ರನತ್ತ ಆಗಮಿಸುತ್ತಿದ್ದಂತೆ ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಜೋಡಿಸುವ ಕಾರ್ಯಾಚರಣೆ ನಡೆಸಲಾಗುತ್ತದೆ” ಎಂದು ಇಸ್ರೋ ಟ್ವೀಟ್ ಮಾಡಿದೆ.

ಸೋಮವಾರ ನಸುಕಿನ ಜಾವಾ ಸುಮಾರು 12 ಗಂಟೆಯಿಂದ 12.30ರ ನಡುವೆ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಆಗಸ್ಟ್ 16 ರವರೆಗೆ, ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯ ಸುತ್ತ ಸುತ್ತುತ್ತದೆ. ಚಂದ್ರನ ಮೇಲ್ಮೈಯಿಂದ 100 ಕಿಮೀ ಎತ್ತರದಲ್ಲಿ ಆಗಸ್ಟ್ 17 ರಂದು ಲ್ಯಾಂಡರ್ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡುತ್ತದೆ. ಚಂದ್ರಯಾನ-3 ಆಗಸ್ಟ್ 23 ರಂದು ಸಂಜೆ 5.47 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂದ್ರಯಾನ 3ರ ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಆಗುವುದನ್ನೇ ಬಾಹ್ಯಾಕಾಶ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಏಕೆಂದರೆ, ಇದುವರೆಗೆ ಅಮೆರಿಕ, ಚೀನಾ, ರಷ್ಯಾ ರಾಷ್ಟ್ರಗಳು ಮಾತ್ರ ಯಶಸ್ವಿಯಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಗಗನ ನೌಕೆಯನ್ನು ಇಳಿಸಿವೆ. ಚಂದ್ರಯಾನ 3 ಸುರಕ್ಷಿತ ಮತ್ತು ಯಶಸ್ವಿಯಾಗಿ ಸಾಫ್ಟ್​ ಲ್ಯಾಂಡಿಂಗ್​ ಆದರೆ, ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಭಾರತವಾಗಲಿದೆ.

Advertisement

ಇದನ್ನೂ ಓದಿ: ಹರ್ಯಾಣ ಕೋಮು ಘರ್ಷಣೆ: 3 ಮಂದಿ ಮೃತ್ಯು, ಇಂಟರ್ನೆಟ್ ಸ್ಥಗಿತ, ಶಾಲೆಗಳಿಗೆ ರಜೆ

Advertisement

Udayavani is now on Telegram. Click here to join our channel and stay updated with the latest news.

Next