Advertisement

ಬಿಡಬ್ಲ್ಯುಎಫ್ ಫೈನಲ್ಸ್‌: ಪ್ರಣಯ್‌ಗೆ ಮತ್ತೆ ಸೋಲು

08:30 PM Dec 08, 2022 | Team Udayavani |

ಬ್ಯಾಂಕಾಕ್‌: ಭಾರತದ ಎಚ್‌. ಎಸ್‌. ಪ್ರಣಯ್‌ ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲ್ಸ್‌ನ “ಎ’ ಬಣದ ಹೋರಾಟದಲ್ಲಿ ಮತ್ತೆ ಸೋಲು ಕಂಡಿದ್ದು ಸೆಮಿಫೈನಲಿಗೇರುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದ್ದಾರೆ.

Advertisement

ತೀವ್ರ ಪೈಪೋಟಿಯಿಂದ ಸಾಗಿದ ಈ ಪಂದ್ಯದಲ್ಲಿ ಪ್ರಣಯ್‌ ಚೀನಾದ ಲು ಗ್ವಾಂಗ್‌ ಝು ಅವರೆದುರು 21-23, 21-17, 19-21 ಗೇಮ್‌ಗಳಿಂದ ಸೋಲನ್ನು ಕಂಡರು. ಈ ವರ್ಷದ ಫ್ರೆಂಚ್‌ ಓಪನ್‌ನಲ್ಲೂ ಪ್ರಣಯ್‌ ಇದೇ ಎದುರಾಳಿಯೆದುರು ಆಡಿ ಸೋತಿದ್ದರು.

“ಎ’ ಬಣದ ಹೋರಾಟದಲ್ಲಿ ಇದು ಪ್ರಣಯ್‌ ಅವರ ಎರಡನೇ ಸೋಲು ಆಗಿದೆ. ಈ ಮೊದಲ ಪಂದ್ಯದಲ್ಲಿ ಅವರು ಜಪಾನಿನ ಕೊಡೈ ನರವೋಕ ಅವರೆದುರು ಸೋತಿದ್ದರು. ವಿಶ್ವದ 12ನೇ ರ್‍ಯಾಂಕಿನ ಪ್ರಣಯ್‌ ಶುಕ್ರವಾರ ನಡೆಯುವ ಪಂದ್ಯದಲ್ಲಿ ವಿಶ್ವದ ನಂ.1 ಮತ್ತು ಒಲಿಂಪಿಕ್‌ ಚಾಂಪಿಯನ್‌ ವಿಕ್ಟರ್‌ ಆಕ್ಸೆಲ್ಸೆನ್‌ ಅವರನ್ನು ಎದುರಿಸಲಿದ್ದಾರೆ.

ಸತತ ಎರಡು ಸೋಲುಗಳಿಂದ ಪ್ರಣಯ್‌ ನಾಕೌಟ್‌ ಹಂತಕ್ಕೇರುವ ಸಾಧ್ಯತೆ ಬಹುತೇಕ ಅಂತ್ಯಗೊಂಡಿದೆ. ಬಣದ ಇನ್ನುಳಿದ ಪಂದ್ಯಗಳಲ್ಲಿ ಏನಾದರೂ ಏರುಪೇರಿನ ಫ‌ಲಿತಾಂಶ ಘಟಿಸಿದರೆ ಅವರು ಮುನ್ನಡೆಯಲೂಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next