Advertisement
ಇಂಥ ಸಂದರ್ಭದಲ್ಲಿ,ಅನಿರೀಕ್ಷಿತವಾಗಿ ಒದಗಿ ಬಂದಿರುವರಜೆಯ ಸದುಪಯೋಗ ಹೇಗೆ ಎಂಬ ಕುರಿತು ಒಂದಿಷ್ಟು ಟಿಪ್ಸ್ ಇಲ್ಲಿದೆ.
Related Articles
Advertisement
ಕೊರೊನಾ ಕಾರಣಕ್ಕೆ ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯದಲ್ಲಿಕಡಿತವಾಗಿದೆ. ಮುಖ್ಯ ಪರೀಕ್ಷೆಗಳು ಇಲ್ಲದೆ ಪಾಸ್‌ಆಗಿದ್ದಾಗಿದೆ. ಇದು ಒಂದು ಹಂತಕ್ಕೆ ಅಂದರೆತಾತ್ಕಾಲಿಕವಾಗಿ ರಿಲೀಫ್, ಖುಷಿ ತಂದಿರಬಹುದು.ಆದರೆ ನೆನಪಿರಲಿ. ಈ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟುಓದಿದರೂ ಕಡಿಮೆಯೇ. ಹೀಗಾಗಿ ತರಗತಿ ಪಠ್ಯಗಳಜೊತೆಗೆ ಈ ಹಿಂದಿನ ತರಗತಿಗಳ ವಿಷಯಗಳನ್ನುಪುನಃ ಅಭ್ಯಾಸ ಮಾಡಿ.
ಸಿಕ್ಕಿದ್ದನ್ನೆಲ್ಲಾ ಓದಿ
ಇಷ್ಟು ದಿನ ಕೇವಲ ಪಠ್ಯದ ವಿಷಯಗಳ ಮೇಲೆ ಪೂರ್ಣ ಗಮನ ಕೇಂದ್ರೀಕರಿಸುತ್ತಿದ್ದ ಕಾರಣಕ್ಕೆ ಸಾಮಾನ್ಯ ಜ್ಞಾನ, ಸಾಹಿತ್ಯ..ಮತ್ತಿತರ ವಿಷಯಗಳನ್ನು ಓದಲು ಆಗಿರಲಿಲ್ಲ ತಾನೆ? ಈಗ ಸಾಕಷ್ಟುಸಮಯ ಸಿಕ್ಕಿದೆ. ದಿನವೂ ಎಲ್ಲಾಪತ್ರಿಕೆಗಳು, ನಿಯತಕಾಲಿಕೆಗಳನ್ನುಓದುತ್ತಾ ಹೋಗಿ. ಇದಕ್ಕೆ ಪೂರಕವಾಗಿಅಂತರ್ಜಾಲವನ್ನೂ ಬಳಸಿ. ಇದರಿಂದ ಭವಿಷ್ಯದಲ್ಲಿಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಕೂಲವಾಗುತ್ತದೆ.
ಜನಜಾಗೃತಿ ಮೂಡಿಸಿ
ನೀವಿರುವ ಪರಿಸರದಲ್ಲಿ ಎಲ್ಲವೂ ನೆಟ್ಟಗಿರಲ್ಲ. ಅದಕ್ಕೆದನಿಯಾಗಿ. “ಊರು ನಮ್ಮದು’ ಎನ್ನುವ ಭಾವನಿಮ್ಮಲ್ಲಿ ಬರಲಿ. ನಂತರ ಇದೇ ಮನೋಭಾವವನ್ನುಜನರಲ್ಲಿ ಮೂಡಿಸಲು ಪ್ರಯತ್ನಿಸಿ. ಅದಕ್ಕಾಗಿಗೆಳೆಯರ, ಸಮಾನ ಮನÓರ R ತಂಡ ಕಟ್ಟಿಕೊಳ್ಳಿ.ಮರಗಿಡಿಗಳನ್ನು ಬೆಳೆಸಿ, ಪೋಷಿಸುವ ಸಂಕಲ್ಪ ಮಾಡಿ.ಊರಿನ ಸ್ವತ್ಛತೆ ಮತ್ತು ನೈರ್ಮಲ್ಯಕ್ಕೆ ಪ್ರಯತ್ನಿಸಿ. ಈನಿಟ್ಟಿನಲ್ಲಿ ಜನಜಾಗೃತಿ ಮೂಡಿಸಿ.
ಕೊರೊನಾ ಸೇನಾನಿಗಳಾಗಿ
ವರ್ಷ ಕಳೆದರೂ ಕೊರೊನಾ ತಡೆಯಲುಕೈಗೊಳ Ûಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಸ್ಪಷ್ಟಮಾಹಿತಿ ಇಲ್ಲ. ಗಾಳಿ ಸುದ್ದಿ, ತಪ್ಪು ತಿಳಿವಳಿಕೆಗಳಿಂದಜನ ಅಧೀರರಾಗಿದ್ದಾರೆ. ಇಂಥ ಸಂದರ್ಭದಲ್ಲಿಅಗತ್ಯವಿರುವ ಎಲ್ಲಾ ಮಾಹಿತಿ ಸಂಗ್ರಹಿಸಿ. ರೋಗಹರಡುವ ಬಗೆ, ಹರಡದಂತೆ ಕೈಗೊಳ್ಳಬೇಕಾದಮುಂಜಾಗ್ರತೆ ಕ್ರಮಗಳು, ಸೋಂಕಿತರ ಆರೈಕೆ..ಇತ್ಯಾದಿಯ ಕುರಿತು ಜಾಗೃತಿ ಮೂಡಿಸಿ.
ಸ್ವರೂಪಾನಂದ ಕೊಟ್ಟೂರು