Advertisement
ಜಗತ್ತನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ದೇಶದ ಅಭಿಪ್ರಾಯಕ್ಕೆ ಈಗ ಮನ್ನಣೆ ಸಿಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ಮಾಹಿತಿ ನೀಡಿದ್ದಾರೆ.
Related Articles
14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 50 ನಗರ ಮತ್ತು ಪಟ್ಟಣಗಳಲ್ಲಿ ಸದ್ಯ 5ಜಿ ಸೇವೆ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಅ.1ರಿಂದ ದೇಶದಲ್ಲಿ 5 ಜಿ ಸೇವೆ ಶುರುವಾಗಿದೆ. ನ.26ರ ವರೆಗೆ ದೇಶದ 50 ನಗರಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.
Advertisement
ಯೋಚನೆ ಇಲ್ಲ:ಅಖಿಲ ಭಾರತ ನ್ಯಾಯಾಂಗ ಸೇವೆ (ಎಐಜೆಎಸ್)ಯನ್ನು ಜಾರಿಗೊಳಿಸುವ ಇರಾದೆ ಸದ್ಯಕ್ಕೆ ಇಲ್ಲವೆಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. ಈ ಬಗ್ಗೆ ವಿವಿಧ ರೀತಿಯ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವುದರಿಂದ ಸದ್ಯಕ್ಕೆ ಎಐಜೆಎಸ್ ಜಾರಿ ಮಾಡುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಪೌರತ್ವ ತ್ಯಜಿಸಿದ 16 ಲಕ್ಷ ಮಂದಿ:
2011ರಿಂದ ಈಚೆಗೆ 16 ಲಕ್ಷ ಮಂದಿ ದೇಶದ ಪೌರತ್ವ ತ್ಯಜಿಸಿದ್ದಾರೆ. ಈ ಪೈಕಿ ಪ್ರಸಕ್ತ ವರ್ಷವೇ 1,83,741 ಮಂದಿ ಇತರ ದೇಶಗಳ ಪೌರತ್ವ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. ಐಎಎಫ್ ನಲ್ಲಿ ಗರಿಷ್ಠವೆಂದರೆ ಶೇ.13.69 ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಹಾಯಕ ಸಚಿವ ಅಜಯ ಭಟ್ ಲೋಕಸಭೆಗೆ ತಿಳಿಸಿದ್ದಾರೆ. ಭೂಸೇನೆಯಲ್ಲಿ 10 ವಿಭಾಗಗಳಿಗೆ ಮಹಿಳೆಯರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಸೇನೆಯ ವೈದ್ಯ ಮತ್ತು ದಂತ ವೈದ್ಯ ವಿಭಾಗದಲ್ಲಿ ಶೇ.21.25ರಷ್ಟು ಮಹಿಳೆಯರಿದ್ದಾರೆ ಎಂದಿದ್ದಾರೆ. 50 ಖಾಸಗಿ ವಿಧೇಯಕ:
ಲೋಕಸಭೆಯೊಂದರಲ್ಲಿಯೇ 50 ಖಾಸಗಿ ವಿಧೇಯಕಗಳನ್ನು ಸಂಸದರು ಮಂಡಿಸಿದ್ದಾರೆ. ಇವಿಎಂಗಳನ್ನು ರದ್ದು ಮಾಡಿ, ಹಳೆಯ ವ್ಯವಸ್ಥೆಯಾಗಿರುವ ಮತಪತ್ರಗಳನ್ನೇ ಜಾರಿಗೆ ತರುವ ಬಗ್ಗೆ ಬಿಎಸ್‌ಪಿಯ ಕುನ್ವರ್ ಡ್ಯಾನಿಷ್ ಅಲಿ ವಿಧೇಯಕ ಮಂಡಿಸಿದ್ದಾರೆ. ಇಂಟರ್‌ನೆಟ್ ಸಂಪರ್ಕ ಕುಸಿತ, ಸಾಲಮನ್ನಾ ಮತ್ತು ಥಳಿಸಿ ಹತ್ಯೆ ತಡೆಯುವ ವಿಧೇಯಕಗಳನ್ನು ಮಂಡಿಸಲಾಗಿದೆ.