Advertisement

ಸಿದ್ಧವಾಗುತ್ತಿದೆ 150 ಕೆಜಿ ತೂಕ ಹೊರಬಲ್ಲ ಡ್ರೋನ್‌!

11:10 AM Dec 13, 2021 | Team Udayavani |

ನವದೆಹಲಿ: ಡ್ರೋನ್‌ಗಳ ಮೂಲಕ ಔಷಧ, ಆಹಾರ ಮತ್ತಿತರ ಉಪಯುಕ್ತ ಸಾಮಗ್ರಿಗಳನ್ನು ತಲುಪಿಸುವ ಹೊಸ ಪದ್ಧತಿ ಆರಂಭವಾಗಿದೆ. ಆದರೆ, ಅದರಲ್ಲಿ 1ರಿಂದ 5 ಕೆಜಿ ತೂಕದ ವಸ್ತುಗಳನ್ನು ಮಾತ್ರ ಕಳುಹಿಸಬಹುದಾಗಿದೆ. ಈ ಮಿತಿಯನ್ನು ದೂರಮಾಡಲು ನಿರ್ಧರಿಸಿರುವ ಬೆಂಗಳೂರಿನ ಸ್ಟಾರ್ಟ್‌ ಅಪ್‌ ಕಂಪನಿಯೊಂದು, ಸುಮಾರು 150 ಕೆಜಿಯಷ್ಟು ಭಾರವನ್ನು ಹೊತ್ತೂಯ್ಯುವ ಹಾಗೂ ನಿಗದಿತ ದೂರವನ್ನು ಬೇಗನೇ ಕ್ರಮಿಸುವಂಥ ಡ್ರೋನ್‌ ಒಂದನ್ನು ತಯಾರಿಸಲು ಮುಂದಾಗಿದೆ.

Advertisement

ಬೆಂಗಳೂರಿನ “ನ್ಯೂ ಸ್ಪೇಸ್‌ ರಿಸರ್ಚ್‌ ಅಂಡ್‌ ಟೆಕ್ನಾಲಜೀಸ್‌’ ಸಂಸ್ಥೆಯು ಸ್ಪೈಸ್‌ಜೆಟ್‌ ಸಂಸ್ಥೆಯೊಂದಿಗೆ ಜಂಟಿಯಾಗಿ “ಹೆವಿ ಲಿಫ್ಟ್’ ಡ್ರೋನ್‌ಗಳನ್ನು ತಯಾರಿಸುತ್ತಿದೆ. ಈ ಡ್ರೋನ್‌ ಸುಮಾರು 150ಕೆ.ಜಿ ತೂಕದ ಸಾಮಾಗ್ರಿಯನ್ನು 150 ಕಿ.ಮೀ ದೂರದವರೆಗೆ ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರಲಿದೆ.

ಸದ್ಯಕ್ಕೆ 150 ಕಿ.ಮೀ. ದೂರದ ಹಾದಿಯನ್ನು ಕ್ರಮಿಸಲು ಸಾಮಾನ್ಯ ಡ್ರೋನ್‌ಗಳು 72 ಗಂಟೆ ತೆಗೆದುಕೊಳ್ಳುತ್ತಿವೆ. ಆದರೆ, ಈ ಡ್ರೋನ್‌, 8 ರಿಂದ 12 ಗಂಟೆಯೊಳಗೆ ಇಷ್ಟು ದೂರವನ್ನು ಕ್ರಮಿಸುತ್ತವೆ ಎಂದು ಹೇಳಲಾಗಿದೆ. ಹಾಗಾಗಿ, ಇದನ್ನು ಗಂಟೆಗೆ 100ಕಿ.ಮೀ ವೇಗದಲ್ಲಿ ಸಾಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಸೂರ್ಯ ಶಕ್ತಿಯ ಬಳಕೆಯ ವಿಸ್ತಾರಕ್ಕೆ ಪ್ರಯತ್ನ; ಮೋಹನ ಭಾಸ್ಕರ ಹೆಗಡೆ ಕರೆ

ಎಚ್‌ಎಎಲ್‌ ಸಹಕಾರ:
ಈ ವಿಶೇಷ ಡ್ರೋನ್‌ ತಯಾರಿಕೆಗೆಂದೇ ಹಿಂದೂಸ್ಥಾನ್‌ ಏರೋನಾಟಿಕಲ್‌ ಸಂಸ್ಥೆ(ಎಚ್‌ಎಎಲ್‌)ನೊಂದಿಗೂ ಕೈ ಜೋಡಿಸಲಾಗಿದೆ. ಎಚ್‌ಎಎಲ್‌ನಲ್ಲಿ ಸೇನಾ ಬಳಕೆಯ ಡ್ರೋನ್‌ಗಳಿಗಾಗಿ ಮಾನವರಹಿತ ವೈಮಾನಿಕ ವಾಹನ(ಯುಎವಿ) ತಯಾರಿಸಲಾಗುತ್ತದೆ. ವಿವಿಧ ಯುಎವಿ ಬಳಸಿ, ಡ್ರೋನ್‌ಗಳನ್ನೂ ತಯಾರಿಸಲಾಗುತ್ತದೆ. ಈ ತಂತ್ರಜ್ಞಾನವನ್ನು ಈ ಹೊಸ ಡ್ರೋನ್‌ ತಯಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ.

Advertisement

ಅಂಕಿ-ಅಂಶ:
150 ಕಿ.ಮೀ.  - ಸಂಭಾವ್ಯ ಡ್ರೋನ್‌ ಪ್ರತಿ ಗಂಟೆಗೆ ಸಾಗಬಲ್ಲ ವೇಗ

8 ರಿಂದ 12- ಎಪ್ಪತ್ತೆರಡು ಕಿ.ಮೀ. ದೂರವನ್ನು ಕ್ರಮಿಸಲು ಡ್ರೋನ್‌ ತೆಗೆದುಕೊಳ್ಳುವ ಸಮಯ

Advertisement

Udayavani is now on Telegram. Click here to join our channel and stay updated with the latest news.

Next