Advertisement

ಎಂಎನ್‌ಎಸ್‌ನ ಎಷ್ಟು ಮತಗಳು ಕಾಂಗ್ರೆಸ್‌ಗೆ ?

12:46 PM May 04, 2019 | Team Udayavani |

ಮುಂಬಯಿ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಅಂತಿಮ ಹಂತದ ಮತದಾನವು ಸೋಮವಾರ ಮುಕ್ತಾಯಗೊಂಡರೂ ಎನಿಕೆಗಾಗಿ ಮೇ 23ರ ವರೆಗೆ ಕಾಯಬೇಕಾಗಿದೆ. ಈ ನಡುವೆ ಎಲ್ಲ ಪಕ್ಷಗಳ ಅಭ್ಯರ್ಥಿಗಳು ತಮಗೆ ಹೆಚ್ಚಿನ ಮತಗಳು ದೊರೆತಿದ್ದು, ನಾವೇ ಗೆಲ್ಲಲಿದ್ದೇ ವೆ ಎಂದು ಬಲ ಪ್ರದರ್ಶಿಸುತ್ತಿವೆ. ಹಾಗೆಯೇ ಕಾಂಗ್ರೆಸ್‌ – ಎನ್‌ಸಿಯ ಮಹಾಮೈತ್ರಿ ಅಭ್ಯರ್ಥಿಗಳು ಮರಾಠ ಮತಗಳು ಹಾಗೂ ಅದರಲ್ಲೂ ಎಂಎನ್‌ಎಸ್‌ ರ್ಯಾಲಿಗಳ ಪರಿಣಾಮ ಎಷ್ಟಾಗಿದೆ ಎಂದು ಅಂದಾಜಿಸಲು ಪ್ರಾರಂಭಿಸಿದ್ದಾರೆ.

Advertisement

ಕಾಂಗ್ರೆಸ್‌ನ ಹಿರಿಯ ನಾಯಕರಯೋರ್ವರ ಪ್ರಕಾರ, ಎಂಎನ್‌ಎಸ್‌ನ ಏಷ್ಟು ಮತಗಳು ಕಾಂಗ್ರೆಸ್‌ಗೆ ದೊರೆತಿರಬಹುದು, ಇದರ ಅಂದಾಜು ಹಾಕುವುದು ಕಷ್ಟವಾಗಿದೆ. ಆದರೇ ಎಂಎನ್‌ಎಸ್‌ನ ಜತೆ ಶಿವಸೇನೆಯ ಕೆಲವು ಪಾರಂಪರಿಕ ಮತಗಳು ಕಾಂಗ್ರೆಸ್‌ಗೆ ದೊರತಿದೆ ಎಂದರು.

ಕಾಂಗ್ರೆಸ್‌ ನಾಯಕರ ಪ್ರಕಾರ, ದಕ್ಷಿಣ ಮುಂಬಯಿ, ದಕ್ಷಿಣ ಮಧ್ಯ ಮುಂಬಯಿ ಹಾಗೂ ಉತ್ತರ ಮಧ್ಯ ಮುಂಬಯಿ ಕ್ಷೇತ್ರಗಳಲ್ಲಿ ಸುಮಾರು 70ರಿಂದ 80 ಸಾವಿರ ಮರಾಠಿ ಮತಗಳು ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆ ಅವರ ಪ್ರಚಾರದಿಂದ ಕಾಂಗ್ರೆಸ್‌ಗೆ ದೊರೆತಿದೆ. ಈ ಮತಗಳು ಚುನಾವಣೆಯ ಫಲಿತಾಂಶದ ಚಿತ್ರ ಬದಲಾಗಲಿದೆ.

ಉತ್ತರ ಪಶ್ಚಿಮ ಮುಂಬಯಿ ಲೋಕಸಭೆ ಕ್ಷೇತ್ರದಲ್ಲಿ ರಾಜ್‌ ಠಾಕ್ರೆ ಅವರ ಪ್ರಭಾವ ಬೀಳದಿದ್ದರೂ ಕೂಡ, ಕಾಂಗ್ರೆಸ್‌ ಅಭ್ಯರ್ಥಿ ಸಂಜಯ್‌ ನಿರುಪಮ್‌ ಅವರನ್ನು ನೋಡಿ ಮತಗಳು ನೀಡಿದ್ದಾರೆ. ಈ ಕ್ಷೇತ್ರಗಳಲ್ಲಿ ಮರಾಠಿ ಮತಗಳು ಕಾಂಗ್ರೆಸ್‌ಗೆ ದೊರೆಯದಿದ್ದರೂ, ಉ¤ತರ ಭಾರತೀಯ ಹಾಗೂ ಮುಸ್ಲಿಂ ಮತಗಳು ನಿರ್ಣಯ ಮಾಡಲಿವೆ.

6 ಲೋಕಸಭೆ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಮತಗಳು ಕಾಂಗ್ರೆಸ್‌ಗೆ ದೊರೆತಿವೆ ಎನ್ನುವುದು ನಾಯಕರ ಅನಿಸಿಕೆಯಾಗಿದೆ. ಆದರೆ ಕಾಂಗ್ರೆಸ್‌ ತನ್ನ ಎಲ್ಲಾ ಸೀಟುಗಳಲ್ಲಿ ಗೆಲುವು ಪಡೆಯಲಿದೆ ಎನ್ನುವ ಭರವಸೆ ಮಾತ್ರ ಕಾಂಗ್ರೆಸ್‌ ನಾಯಕರಿಗಿಲ್ಲ. ಯಾವ ಕ್ಷೇತ್ರದಲ್ಲಿ ದಲಿತ ಹಾಗೂ ಮುಸ್ಲಿಂ ಮತಗಳ ಸಂಖ್ಯೆ ಹೆಚ್ಚಾಗಿವೆ. ಈ ಮತಗಟ್ಟೆಗಳಲ್ಲಿ ಮರಾಠಿ ಮತಗಳು ಕಾಂಗ್ರೆಸ್‌ಗೆ ದೊರತೆಯುವ ಸಾಧ್ಯತೆ ಹೆಚ್ಚಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next