Advertisement

ಬಿಲ್ ಗೇಟ್ಸ್ ಗೆ ಪಾಕಿಸ್ತಾನದ ನಖ್ವಿ 100 ಮಿಲಿಯನ್ ಪಂಗನಾಮ ಹಾಕಿದ್ದು ಹೇಗೆ..?

05:03 PM Aug 22, 2021 | Team Udayavani |

ಖಾಸಗಿ ಇಕ್ವಿಟಿ ಸಂಸ್ಥೆ ದಿ ಅಬ್ರಾಜ್ ಗ್ರೂಪ್ ಮುಖ್ಯಸ್ಥರಾಗಿ, ನಖ್ವಿ ಹೂಡಿಕೆ ಕ್ಷೇತ್ರದಲ್ಲಿ ಪ್ರಭಾವಿ ಪ್ರವರ್ತಕರಾಗಿದ್ದರು. ಬಿಲ್ ಗೇಟ್ಸ್, ಬಿಲ್ ಕ್ಲಿಂಟನ್, ಮತ್ತು ಆಗಿನ ಗೋಲ್ಡ್ಮನ್ ಸ್ಯಾಕ್ಸ್ ಸಿಇಒ ಲಾಯ್ಡ್ ಬ್ಲಾಂಕ್ಫೀನ್ ಸೇರಿದಂತೆ ವಿಶ್ವದ ಕೆಲವು ಶ್ರೀಮಂತ ಮತ್ತು ಅತ್ಯಂತ ಪ್ರಭಾವಿಗಳೊಂದಿಗೆ ಸಂರ್ಕವನ್ನು ಹೊಂದಿದ್ದರು.

Advertisement

ನಖ್ವಿ ತನ್ನ ಉದ್ಯಮ ಕ್ಷೇತ್ರದಲ್ಲಿ ಮಾಡಿದ ನಯ ವಂಚನೆಗಳು ಈಗ ಬಟಾಬಯಲಾಗಿದೆ. ಲೇಖಕ ಸೈಮನ್ ಕ್ಲಾರ್ಕ್, “ದಿ ಕೀ ಮ್ಯಾನ್: ದಿ ಟ್ರೂ ಸ್ಟೋರಿ ಆಫ್ ದಿ ಗ್ಲೋಬಲ್ ಎಲೈಟ್ ದ ಡೂಪ್ಡ್ ದಿ ಕ್ಯಾಪಿಟಲಿಸ್ಟ್ ಫೇರಿ ಟೇಲ್” (ಹಾರ್ಪರ್ ಬ್ಯುಸಿನೆಸ್)  ಎಂಬ ಹೊಸ ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ನಖ್ವಿ ಬಿಲಿಯನೆರ್ ಬಿಲ್ ಗೇಟ್ಸ್ ಅವರನ್ನು ವಂಚಿಸಿದ ಪ್ರಕರಣವೂ ಇರುವುದು ಈಗ ಭಾರಿ ಸುದ್ದಿ ಮಾಡುತ್ತಿದೆ.

ಇದನ್ನೂ ಓದಿ : ದೇಶಕ್ಕೆ ಸ್ವಾತಂತ್ರ್ಯ ಬಂದದ್ದೇ ಸಿ.ಟಿ. ರವಿ ಅವರಿಂದ: ಡಿ.ಕೆ. ಶಿವಕುಮಾರ್ ಲೇವಡಿ

ಈ ಪುಸ್ತಕದಲ್ಲಿ ನಖ್ವಿ ಹೂಡಿಕೆ ಕ್ಷೇತ್ರಗಳಲ್ಲಿ ನಡೆಸಿದ ಕುತಂತ್ರಗಳ ಬಗ್ಗೆ ಸವಿವರವಾಗಿ ಲೇಖಕರು ವಿವರಿಸಿದ್ದಾರೆ. ಪುಸ್ತಕದಲ್ಲಿ ಉಲ್ಲೇಖಿಸಲಾದ ಪ್ರಮುಖ  ವಿಚಾರಗಳನ್ನು ಗಮನಿಸುವುದಾದರೇ..

  • 2008 ರಲ್ಲಿ ಕರಾಚಿ ಎಲೆಕ್ಟ್ರಿಕ್ ಎಂಬ ತನ್ನ ಸ್ಥಳೀಯ ಎಲೆಕ್ಟ್ರಿಕ್ ಕಂಪನಿಯ ಮೇಲೆ ಹಿಡಿತ ಸಾಧಿಸಿದ ನಂತರ, ನಖ್ವಿ ವಿದ್ಯುತ್ ಅನ್ನು ವಿಶ್ವಾಸಾರ್ಹವಾಗಿ ಮತ್ತು ಕಂಪನಿಯನ್ನು ಲಾಭದಾಯಕವಾಗಿಸಿದರು. ಆದರೆ ಅವರು 6,000 ಉದ್ಯೋಗಿಗಳಿಂದ ಸಂಖ್ಯೆಯನ್ನು ಕಡಿಮೆ ಮಾಡಿದರು, ಇದು ಗಲಭೆಗೆ ಕಾರಣವಾಯಿತು.
  • ಆರಿಫ್ ಅಮೆರಿಕಾದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸೇರಿದಂತೆ ವಿಶ್ವದಾದ್ಯಂತದ ವಿಶ್ವವಿದ್ಯಾನಿಲಯಗಳಿಗೆ ಲಕ್ಷಾಂತರ ಡಾಲರ್‌ ಗಳನ್ನು ನೀಡಿದರು ಎಂದು ಲೇಖಕರು ಬರೆಯುತ್ತಾರೆ. “ಬಿಲ್ ಮತ್ತು ಮೆಲಿಂಡಾ ಗೇಟ್ಸ್ ನಂತಹ ಬಿಲಿಯನೇರ್ ಗಳ ಹೆಜ್ಜೆಗಳನ್ನು ಅನುಸರಿಸಿ, ಆರಿಫ್ ಪಾಕಿಸ್ತಾನದಲ್ಲಿ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣವನ್ನು ಸುಧಾರಿಸಲು ಅಮನ್ ಫೌಂಡೇಶನ್ ಎಂಬ 100 ಮಿಲಿಯನ್ ದತ್ತಿ ಸಂಸ್ಥೆಯನ್ನು ಆರಂಭಿಸಿದರು.” ಎನ್ನುವುದನ್ನೂ ಕೂಡ ಈ ಪುಸ್ತಕ ಉಲ್ಲೇಖ ಮಾಡುತ್ತದೆ.
  • ಒಂದು ಕಡೆ “ಬಿಲ್ ಮತ್ತು ಆರಿಫ್ ಈ ಕುರಿತಾಗಿ ಇನ್ನೂ ಗಂಭೀರವಾಗಿ ಚರ್ಚಿಸಬೇಕಿತ್ತು, ”ಎಂದು ಲೇಖಕರು ಬರೆಯುತ್ತಾರೆ. “ಅವರ ದತ್ತಿ ಪ್ರತಿಷ್ಠಾನಗಳು ಪಾಕಿಸ್ತಾನದಲ್ಲಿ ಕುಟುಂಬ ಯೋಜನೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಕೆಲಸ ಮಾಡುತ್ತವೆ ಎಂದು ಅವರು ಒಪ್ಪಿಕೊಂಡರು.  ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ತೆಗಳಿಗೆ ಹೂಡಿಕೆ ಮಾಡಲು ಗೇಟ್ಸ್ ಫೌಂಡೇಶನ್‌ ನಖ್ವಿ ನಡೆಸುತ್ತಿದ್ದ ಸಂಸ್ಥೆಗೆ 100 ಮಿಲಿಯನ್ ಹೂಡಿಕೆ ಮಾಡಿತ್ತು. ಈ ಹೂಡಿಕೆಯು,  ಅಬ್ರಾಜ್ ಸಂಸ್ಥೆಯ ಬೆಳವಣಿಗೆಗೆ ಬೆಳಸಿಕೊಳ್ಳುತ್ತಾರೆ ಎನ್ನುವುದು ಈ ಪುಸ್ತಕದಲ್ಲಿ ಹೇಳಲಾಗಿದೆ.
  • ಗೇಟ್ಸ್ ಫೌಂಡೇಶನ್‌ ಹೂಡಿಕೆ ಮಾಡಿದ್ದ  ಹಣವನ್ನು ನಖ್ವಿ ದುರುಪಯೋಗಪಡಿಸಿಕೊಳ್ಳಲು ಆರಂಭಿಸಿದ್ದರು, ಅದು ಅವರ ಹೆಚ್ಚಿನ ಉದ್ಯೋಗಿಗಳಿಗೆ ತಿಳಿದಿರಲಿಲ್ಲ ಎಂದು ಲೇಖಕರು ಬರೆಯುತ್ತಾರೆ. ತುರ್ತುಸ್ಥಿತಿಗಾಗಿ ಲಕ್ಷಾಂತರ ಡಾಲರ್‌ ಗಳನ್ನು ಬ್ಯಾಂಕ್ ಖಾತೆಯಲ್ಲಿ ಇಡಲು ನಿಯಂತ್ರಕರಿಂದ ಅಗತ್ಯವಿರುತ್ತದೆ, ಖಾತೆಯು ಸಾಮಾನ್ಯವಾಗಿ ಖಾಲಿಯಾಗಿರುತ್ತದೆ, ಲೇಖಕರು ಉಲ್ಲೇಖಿಸಿದ್ದಾರೆ.
  • ಇನ್ನು, “ಪ್ರತಿ ತ್ರೈಮಾಸಿಕ ಮುಗಿಯುವ ಮುನ್ನ, ಅಬ್ರಾಜ್ ಕ್ಯಾಪಿಟಲ್ ರೆಗ್ಯುಲೇಟರ್‌ ಗೆ ವರದಿ ಮಾಡಬೇಕಾಗಿ ಬಂದಾಗ, ಆರೀಫ್ ಮತ್ತು ಅವನ ಸಹೋದ್ಯೋಗಿಗಳು ಖಾತೆಗೆ ಹಣ ವರ್ಗಾಯಿಸಿದ್ದು ಅದು ಅಗತ್ಯವಿರುವ ಮೊತ್ತವನ್ನು ಹೊಂದಿರುವಂತೆ ಕಾಣಿಸುತ್ತದೆ. ಕೆಲವು ದಿನಗಳ ನಂತರ ಖಾತೆಯನ್ನು ಮತ್ತೆ ಖಾಲಿ ಮಾಡುತ್ತಾರೆ.
  • ಸೆಪ್ಟೆಂಬರ್ 2017 ರಲ್ಲಿ, ನಖ್ವಿಗೆ ಗೇಟ್ಸ್ ಫೌಂಡೇಶನ್ ನಿಂದ ಒಂದು ಇ-ಮೇಲ್ ಬರುತ್ತದೆ . ಅದರಲ್ಲಿ, ಗೇಟ್ಸ್ ಫೌಂಡೇಶನ್ ಮಾಡಿದ ಹೂಡಿಕೆಯನ್ನು ಹೇಗೆ ಬಳಸಲಾಗುತ್ತಿದೆ ಹಾಗೂ ಹೂಡಿಕೆ ವೇಳಾಪಟ್ಟಿಯನ್ನು ನೀಡುವಂತೆ ಆ ಮೇಲ್ ನಲ್ಲಿ ಹೇಳಲಾಗಿರುತ್ತದೆ. ಆದರೇ, ನಕಾರಾತ್ಮಕ ಪ್ರತಿಕ್ರಿಯೆ ನಿಡುತ್ತಲೇ ನಖ್ವಿ ಸಂಸ್ಥೆ ಕಾಲ ಕಳೆಯುತ್ತದೆ.
  • ಅಬ್ರಾಜ್ ಅಸ್ಪಷ್ಟ ಆಶ್ವಾಸನೆಗಳನ್ನು ಮತ್ತು ಹಳೆಯ ಬ್ಯಾಂಕ್ ಸ್ಟೇಟ್‌ಮೆಂಟ್‌ ಗಳನ್ನು ಕಳುಹಿಹಿಸಲಾರಂಬಿಸುತ್ತದೆ. ಹೆಚ್ಚಿನ ವಿವರವನ್ನು ಕೇಳಿ ಮತ್ತೆ ಫೌಂಡೇಶನ್ ನಿಂದ ಒತ್ತಡ ಬರುತ್ತದೆ. ಆಗಲೂ ಹೀಗೆ ಮುಂದುವರಿಯುತ್ತದೆ. ಫೌಂಡೇಶನ್ ಗೆ ಹೂಡಿಕೆ ಸರಿಯಾಗಿ ಬಳಕೆಯಾಗುತ್ತಿಲ್ಲ ಎನ್ನುವ ಅನುಮಾನ ಬರಲಾರಂಭಿಸುತ್ತದೆ.
  • ಹೂಡಿಕೆದಾರರು(ಗೇಟ್ಸ್ ಫೌಂಡೇಶನ್ ) ಅಬ್ರಾಜ್ ಸಂಸ‍್ತೆ ನೀಡುತ್ತಿರುವ ದಾಖಲೆಗಳನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯಲು ಬಯಸಿ ನೋಟೀಸ್ ನನ್ನು ಕೂಡ ಕಳುಹಿಸಿತಾದರೂ, ಅಬ್ರಾಜ್ ಬಳಿ ಆ ಮೊತ್ತ ಇದ್ದಿರಲಿಲ್ಲ ಎಂದು ಲೇಖಕರು ಇಲ್ಲಿ ದಾಖಲೆಯ ಸಮೇತ ಉಲ್ಲೇಖ ಮಾಡುತ್ತಾರೆ.
  • ಅಬ್ರಾಜ್ ಸಂಸ್ಥೆಯ ದಾಖಲೆಗಳನು ತನಿಖೆ ಮಾಡಲು ಗೇಟ್ಸ್ ಫೌಂಡೇಶನ್ ಪಾರೆನ್ಸಿಕ್ ಅಕೌಂಟಿಂಗ್ ಟೀಮ್ ನನ್ನು ನೇಮಿಸಿತು. ಇನ್ನು, ನಖ್ವಿ ಗೇಟ್ಸ್‌ನೊಂದಿಗೆ ದಾವೋಸ್‌ ನಲ್ಲಿ ಜಾಗತಿಕ ಆರೋಗ್ಯ ರಕ್ಷಣೆ ಕುರಿತು ದೂರದರ್ಶನದ ಚರ್ಚೆಯಲ್ಲಿ ಕಾಣಿಸಿಕೊಂಡರು.

ಇನ್ನು, ಅಕ್ಟೋಬರ್ 2018 ರಲ್ಲಿ, ಲೇಖಕರು ದಿ ವಾಲ್ ಸ್ಟ್ರೀಟ್ ಜರ್ನಲ್‌ ನಲ್ಲಿ ಅಬ್ರಾಜ್ ಅವರ ದುಷ್ಕೃತ್ಯಗಳನ್ನು ಬಹಿರಂಗಪಡಿಸುವ ಲೇಖನವನ್ನು ಪ್ರಕಟಿಸುತ್ತಾರೆ.  ಅದರಲ್ಲಿ “ಕನಿಷ್ಠ 660 ಮಿಲಿಯನ್ ನಷ್ಟು  ಹೂಡಿಕೆದಾರರ ಹಣವನ್ನು ಅಬ್ರಾಜ್ ಸಂಸ್ಥೆಯ ಸೀಕ್ರೇಟ್ ಬ್ಯಾಂಕ್ ಖಾತೆಗಳಿಗೆ  ವರ್ಗಾಯಿಸಲಾಗಿದೆ” ಎಂದು ಲೇಖಕರು ಆ ಲೇಖನದಲ್ಲಿ ಉಲ್ಲೇಖಿಸುತ್ತಾರೆ.  “ನಂತರ ಈ ಖಾತೆಗಳಿಂದ 200 ಮಿಲಿಯನ್‌ ಗಿಂತಲೂ ಹೆಚ್ಚು ಹಣವು ಆರಿಫ್‌ ಗೆ ಮತ್ತು ಆತನ ಆಪ್ತರಿಗೆ ಹರಿದುಬಂದಿತ್ತು ಎನ್ನುವುದು ಹುಬ್ಬೇರಿಸುವಂತೆ ಮಾಡುತ್ತದೆ.

Advertisement

ಅಂತಿಮವಾಗಿ, ಯುಎಸ್ ಪ್ರಾಸಿಕ್ಯೂಟರ್‌ಗಳು ನಖ್ವಿ ಕ್ರಿಮಿನಲ್ ಸಂಘಟನೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಏಪ್ರಿಲ್ 10, 2019 ರಂದು, ಆತನನ್ನು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

ಒಟ್ಟಿನಲ್ಲಿ, ನಖ್ವಿ ಬಿಲ್ ಗೇಟ್ಸ್ ನಂತಹ ಜಾಗತಿಕ ದೈತ್ಯನಿಗೂ ವಂಚಿಸಿದ ಪ್ರಕರಣವನ್ನು ಈ ಪುಸ್ತಕ ಉಲ್ಲೇಖ ಮಾಡುತ್ತದೆ.

ಇದನ್ನೂ ಓದಿ : ದೇಶಕ್ಕೆ ಸ್ವಾತಂತ್ರ್ಯ ಬಂದದ್ದೇ ಸಿ.ಟಿ. ರವಿ ಅವರಿಂದ: ಡಿ.ಕೆ. ಶಿವಕುಮಾರ್ ಲೇವಡಿ

Advertisement

Udayavani is now on Telegram. Click here to join our channel and stay updated with the latest news.

Next