Advertisement

ಫ್ಯಾಶನ್ ಲೋಕದಲ್ಲಿ ಸೆನ್ಸೇಷನ್ ಮೂಡಿಸಿದ ಹಳ್ಳಿ ಹುಡುಗ

07:34 PM Aug 03, 2021 | Team Udayavani |

ತ್ರಿಪುರಾ: ಪ್ರತಿಭಾವಂತರಿಗೆ, ಕ್ರಿಯಾಶೀಲರಿಗೆ ಸೋಷಿಯಲ್ ಮೀಡಿಯಾ ಉತ್ತಮ ವೇದಿಕೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿರುವದಂತೂ ಸುಳ್ಳಲ್ಲ. ಇದೀಗ ನಾವು ಫ್ಯಾಶನ್ ಲೋಕದಲ್ಲಿ ಸೆನ್ಸೇಷನ್ ಮೂಡಿಸಿದ ಹಳ್ಳಿಯ ಹುಡುಗನ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

Advertisement

ಈತನ ಹೆಸರು ಸರ್ಬಜಿತ್ ಸರ್ಕಾರ ಉರೂಫ್ ನೀಲ್ ರನೌತ. ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಈತ ನಟಿಯರು ಹಾಗೂ ಮಾಡೆಲ್ ಗಳ ಹೊಸ ವಿಭಿನ್ನ ಲುಕ್ ಗಳನ್ನು ಅನುಕರಣೆ ಮಾಡಿ ಫೇಮಸ್ ಆಗಿದ್ದಾನೆ. ಮತ್ತೊಂದು ವಿಚಾರ ಇಲ್ಲಿ ಗಮನಿಸಬೇಕು. ಈತ ಸೆಲೆಬ್ರಿಟಿಗಳ ಫ್ಯಾಶನ್, ಸ್ಟೈಲ್ ಕಾಪಿ ಹೊಡೆಯಲಿಲ್ಲ. ಬದಲಾಗಿ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಮಾಡೆಲ್-ನಟಿಯರ ನ್ಯೂ ಫ್ಯಾಶನ್ ನನ್ನು ಅಣುಕು ಮಾಡಿ ಗಮನ ಸೆಳೆದಿದ್ದಾನೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ಇನ್ನಿತರ ನಟಿಯರು ಹಾಗೂ ಮಾಡೆಲ್ ಗಳು ಹೊಸ ಉಡುಗೆ-ನ್ಯೂ ಹೇರ್ ಸ್ಟೈಲ್, ಫ್ಯಾಶನ್ ಲುಕ್ ಗಳನ್ನು ಕೊಂಚ ಡಿಫ್ ರೆಂಟ್ ಆಗಿಯೆ ಅಣುಕು ಮಾಡುವ ನೀಲ್ ಇಂದು ಅದರಿಂದಲೇ ಫೇಮಸ್ ಆಗಿದ್ದಾನೆ.

Advertisement

ತನ್ನ ಈ ಫ್ಯಾಶನ್ ಲೋಕದ ಕ್ರೇಜ್ ಬಗ್ಗೆ ಹೇಳಿಕೊಳ್ಳುವ ನೀಲ್, ಏನಾದರೂ ಅದ್ಭುತವಾದದ್ದನ್ನೂ ಮಾಡಬೇಕೆಂಬುದು ನನಗೆ ಬಾಲ್ಯದಿಂದಲೂ ಆಸೆಯಿತ್ತು. ಹೀಗಾಗಿ 2018 ರಲ್ಲಿ ಮೊದಲು ಟಿಕ್ ಟಾಕ್ ವಿಡಿಯೋ ಮಾಡಲು ಶುರು ಮಾಡಿದೆ.  ಲಕ್ಷ್ಸ್ ಹಾಗೂ ಲಾಕ್ಮೆ ಯಂತಹ ಜಾಹೀರಾತುಗಳನ್ನು ಅಣುಕು ಮಾಡಿದೆ. ಇವುಗಳು ನನಗೆ ತುಂಬಾ ಖ್ಯಾತಿಯನ್ನು ತಂದುಕೊಟ್ಟವು. ಇದಾದ ಬಳಿಕ ವಿಡಂಬನೆಯ ಫ‍್ಯಾಶನ್ ಲುಕ್ ಗಳನ್ನು ಮಾಡಲು ನಿರ್ಧರಿಸಿ ಕಾಲೇಜು ತೊರೆದು-ನಮ್ಮ ಹಳ್ಳಿಗೆ ಆಗಮಿಸಿದೆ. 2019 ರಲ್ಲಿ ದೀಪಿಕಾ ಪಡುಕೋಣೆಯವರ ಲುಕ್ ವೊಂದನ್ನು ಅಣುಕು ಮಾಡಿದೆ. ಇದರಲ್ಲಿ ಬಾಳೆ ಎಲೆಗಳನ್ನು ಬಳಸಿದೆ. ಇದು ತುಂಬಾ ವೈರಲ್ ಹಾಗೂ ಟ್ರೋಲ್ ಆಯಿತು. ಅಲ್ಲಿಂದು ನನ್ನ ಜರ್ನಿ ಶುರುವಾಗಿದ್ದು, ತಿರುಗಿ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮೊದ ಮೊದಲು ನನ್ನ ಕುಟುಂಬ ನನ್ನನ್ನು ವಿರೋಧಿಸಿತು. ಈಗ ಅವರೇ ಪ್ರೊತ್ಸಾಹಿಸುತ್ತಿದ್ದಾರೆ. ಆದರೆ, ನಮ್ಮ ಹಳ್ಳಿಯ ಜನರಿಗೆ ಇದೆಲ್ಲ ಇಷ್ಟವಿಲ್ಲ. ಒಂದು ಚೌಕಟ್ಟು ಹಾಕಿಕೊಂಡು ಬದುಕುತ್ತಿರುವ ಅವರು ನನ್ನನ್ನು ವಿರೋಧಿಸುತ್ತಾರೆ. ಯಾವುದಾದರೂ ಉದ್ಯೋಗ ಮಾಡಿಕೊಂಡು ಇರಬಾರದೇ ಎಂದು ಹೇಳುತ್ತಾರೆ ಎಂದು ನೀಲ್ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next